ತಿವಾರಿ ಪ್ರಕರಣ ಸಿಬಿಐಗೆ,ಸಂತಸ ವ್ಯಕ್ತಪಡಿಸಿದ. ಶೋಭಾ

0
102

ಬಾಗಲಕೋಟೆ: ತಿವಾರಿ ಪ್ರಕರಣ ಸಿಬಿಐಗೆ ವಹಿಸಿದ್ದು ಸಂತಸ ತಂದಿದೆ…ರಾಜ್ಯ ಸರ್ಕಾರ ಹುಳುಕು ಹೊರಬೀಳುತ್ತೇ- ಕರಂದ್ಲಾಜೆ ಮತ್ತು ಬಿಎಸ್ವೈ.ನಿರಂತರವಾಗಿ ಯುಪಿ ಮುಖ್ಯಮಂತ್ರಿ ಯೋಗಿಯವರ ಸಂಪರ್ಕದಲ್ಲಿದ್ದೆ – ಕರಂದ್ಲಾಜೆ.ತಿವಾರಿ ತಯಾರಿಸಿದ ಪೈಲ್ ನಾಶ ಮಾಡಲು ಯತ್ನಿಸಿದ ಸಿಎಂ ಸಿದ್ದರಾಮಯ್ಯ & ಇಲಾಖಾ ಅಧಿಕಾರಿಗಳು.ಸಿಬಿಐ ಬೇಗ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಿ ಎಂದ ಶೋಭಾ.

ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಅವರ ಅನುಮಾನಸ್ಪದ ಸಾವಿನ ತನಿಖೆಯನ್ನ ಉತ್ತರ ಪ್ರದೇಶ ಸರ್ಕಾರ ಸಿಬಿಐಗೆ ವಹಿಸಿರೋದು ಖುಷಿ ತಂದಿದ್ದು, ತಪ್ಪಿತಸ್ಥರಲ್ಲಿ ನಡುಕ ಶುರುವಾಗಿದೆ ಎಂದು ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ರು.

ಅವರು ಬಾಗಲಕೋಟೆ ಜಿಲ್ಲೆಯ ಕಲಾದಗಿಯಲ್ಲಿ ಜನಸಂಪರ್ಕ ಅಭಿಯಾನದಲ್ಲಿ ಪಾಲ್ಗೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ್ರು. ತಿವಾರಿಯವರನ್ನ ಪೊಯಿಸನ್ ಹಾಕಿ ಕೊಲ್ಲಲಾಗಿದೆ ಎಂಬ ಸಂಶಯ ನಮ್ಮನ್ನ ಕಾಡುತ್ತಿತ್ತು. ತದನಂತರ ಈ ಬಗ್ಗೆ ನಿರಂತರವಾಗಿ ಸಿಎಂ ಯೋಗಿ ಆದಿತ್ಯನಾಥ ಅವರೊಂದಿಗೆ ಸಂಪರ್ಕದಲ್ಲಿದ್ದು, ಪತ್ರ ಬರೆದಿದ್ದೆ. ಇದಾದ ಬಳಿಕ ಯೋಗಿಯವರು ಪ್ರಕರಣವನ್ನ ಸಿಬಿಐಗೆ ವಹಿಸುವ ವಿಶ್ವಾಸ ವ್ಯಕ್ತಪಡಿಸಿದ್ರು. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಲಾಖಾ ಅಧಿಕಾರಿಗಳು ತಿವಾರಿಯವರು ತಯಾರಿಸಿದ ಪೈಲನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆಸಿದ್ರು. ಆದ್ರೆ ಇದೀಗ ಪ್ರಕರಣ ಸಿಬಿಐಗೆ ವಹಿಸಿರೋದು ಸಂತಸ ತಂದಿದೆ ಎಂದು ಹೇಳಿದ್ರು.

LEAVE A REPLY

Please enter your comment!
Please enter your name here