ತುಂಗಾ ಜಲಾಶಯ ಭರ್ತಿ..

0
1550

ಬಳ್ಳಾರಿ /ಹೊಸಪೇಟೆ: ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬೀಳುವ ಮಳೆಯನ್ನೇ ಆಶ್ರಯಿಸಿಕೊಂಡಿರುವ ತುಂಗಭದ್ರಾ ಜಲಾಶಯದ ನೀರಿನ ಸಂಗ್ರಹ ಪಾತಳ ಕಂಡಿದೆ. ಈ ವೇಳೆಯಲ್ಲಿ ಶಿವಮೊಗ್ಗ ಜಿಲ್ಲಾದ್ಯಾಂತ ಮುಂಗಾರು ಚುರುಕುಗೊಂಡಿದ್ದು, ಶಿವಮೊಗ್ಗ ತಾಲ್ಲೂಕಿನ ಗಾಜನೂರಿನ ತುಂಗಾ ಜಲಾಶಯ ಭರ್ತಿಯಾಗಿದೆ.

ಈ ಹಿನ್ನಲೆಯಲ್ಲಿ ಹೆಚ್ಚುವರಿ ನೀರನ್ನು ತುಂಗಭದ್ರಾ ಜಲಾಶಯಕ್ಕೆ ಹರಿ ಬಿಡಲಾಗಿದ್ದು, ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ನಿವಾರಣೆಯಾಗಲಿದೆ.

ತುಂಗಾ ಡ್ಯಾಂನ ಒಳಹರಿವು 4109 ಕ್ಯೂಸೆಕ್ ಇದ್ದು, ನೀರಿನ ಮಟ್ಟವು 588.24 ಅಡಿ ಗರಿಷ್ಠ ಮಟ್ಟಕ್ಕೆ ತಲುಪುತ್ತಿದ್ದಂತೆ ಎರಡು ಕ್ರಸ್ಟ್ ಗೇಟ್ ತೆರೆದು ನೀರು ಹೊರ ಬಿಡಲಾಗುತ್ತಿದೆ. ಹರಿಹರ ಹಾಗೂ ದಾವಣಗೇರಿ ಇತರೆ ಗ್ರಾಮಗಳಿಗೆ ಮೊದಲು ಕುಡಿಯುವ ನೀರು ಸಿಕ್ಕಂತಾಗಿದ್ದು, ಭಕಾಸುರನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಇಂದಿನ ಪರಿಸ್ಥಿತಿ.

ಜಲಾಶಯದ ಇಂದಿನ ನೀರಿನ ಮಟ್ಟ ಹೀಗಿದೆ. ಇಂದಿನ ಮಟ್ಟ:1569.65 ಅಡಿ, ಒಳಹರಿವು -62ಕ್ಯೂಸೆಕ್ಸ್, ಹೊರ ಹರಿವು 183 ಕ್ಯೂಸೆಕ್ಸ್, ಸಂಗ್ರಹ:1.076 ಇದೆ. ಕಳೆದ ವರ್ಷ ಈ ದಿನದಲ್ಲಿ ನೀರಿನ ಮಟ್ಟ 1671.24, ಒಳ ಹರಿವು 226, ಹೊರಹರಿವು 240, 1.398 ಇತ್ತು.

ಇತರೆ ಡ್ಯಾಂಗಳಿಗೆ ಹೋಲಿಕೆ ಮಾಡಿದರೆ ತುಂಗಾ ಜಲಾಶಯವು ಕಡಿಮೆ ವ್ಯಾಪ್ತಿ, ವಿಸ್ತೀರ್ಣ ಹೊಂದಿದೆ. 3.24 ಟಿ.ಎಂ.ಸಿ. ಸಂಗ್ರಹಣಾ ಸಾಮರ್ಥ್ಯ  ಹೊಂದಿದೆ. 22 ಕ್ರಸ್ಟ್ ಗೇಟ್ ಗಳಿವೆ. ಇದರಿಂದ ಪ್ರತಿವರ್ಷ ಸಾಧಾರಣ ಮಳೆಗೆ ಈ ಡ್ಯಾಂ ಗರಿಷ್ಠ ಮಟ್ಟ ತಲುಪುತ್ತದೆ’ ಎಂದು ಡ್ಯಾಂ ವ್ಯಾಪ್ತಿಯ ಎಂಜಿನಿಯರ್‌ಗಳ ಅಪ್ರಾಯವಾಗಿದೆ.

ಹೆಚ್ಚಳ: ಜಲಾನಯನ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರಾಜ್ಯದ ಪ್ರಮುಖ ಜಲವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಳ ಕಂಡುಬಂದಿದೆ. ಮಂಗಳವಾರದ ಮಾಹಿತಿಯ ಪ್ರಕಾರ 13,414 ಕ್ಯೂಸೆಕ್ ಒಳಹರಿವಿದೆ. 1463 ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಡ್ಯಾಂ ವ್ಯಾಪ್ತಿಯಲ್ಲಿ 87 ಮಿ.ಮೀ. ಮಳೆಯಾಗಿದೆ. ಡ್ಯಾಂನ ನೀರಿನ ಮಟ್ಟ 1755.90 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ನೀರಿನ ಮಟ್ಟ 1769.65 ಅಡಿಯಿತ್ತು.

ಭದ್ರಾ ಜಲಾಶಯದ ನೀರಿನ ಮಟ್ಟ 116.10 (ಗರಿಷ್ಠ ಮಟ್ಟ : 186) ಅಡಿಯಿದೆ. 3312 ಕ್ಯೂಸೆಕ್ ಒಳಹರಿವಿದ್ದು, 95 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ಡ್ಯಾಂ ವ್ಯಾಪ್ತಿಯಲ್ಲಿ 15 ಮಿ.ಮೀ. ವರ್ಷಧಾರೆಯಾಗಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂನಲ್ಲಿ 151 ಅಡಿ ನೀರು ಸಂಗ್ರಹವಾಗಿತ್ತು. ಮಳೆ ವಿವರ: ಮಂಗಳವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಶಿವಮೊಗ್ಗ ತಾಲೂಕು ವ್ಯಾಪ್ತಿಯಲ್ಲಿ 7.40 ಮಿ.ಮೀ., ಭದ್ರಾವತಿಯಲ್ಲಿ 6 ಮಿ.ಮೀ., ತೀರ್ಥಹಳ್ಳಿಯಲ್ಲಿ 60.4 ಮಿ.ಮೀ., ಸಾಗರದಲ್ಲಿ 43.60 ಮಿ.ಮೀ. ಶಿಕಾರಿಪುರದಲ್ಲಿ 9.80 ಮಿ.ಮೀ., ಸೊರಬದಲ್ಲಿ 2.40 ಮಿ.ಮೀ. ಹಾಗೂ ಹೊಸನಗರ ತಾಲೂಕು ವ್ಯಾಪ್ತಿಯಲ್ಲಿ 50 ಮಿ.ಮೀ. ವರ್ಷಧಾರೆಯಾಗಿದೆ.

LEAVE A REPLY

Please enter your comment!
Please enter your name here