ತುಂಗಭದ್ರಾ ಜಲಾಶಯದ ಹೂಳೆತ್ತಲು ಕೇಂದ್ರ ಸರ್ಕಾರ-ಶ್ರೀರಾಮುಲು

0
259

ಬಳ್ಳಾರಿ /ಹೊಸಪೇಟೆ :ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ಹೂಳೆತ್ತಲು ಕೇಂದ್ರ ಸರ್ಕಾರ, ಕ್ರಮ ಕೈಗೊಳ್ಳುವ ಕುರಿತು ಸಂಸತ್‌ನಲ್ಲಿ ಚರ್ಚೆ ನಡೆಸುವಂತೆ ಸಂಸದ ಶ್ರೀರಾಮುಲು ಅವರಲ್ಲಿ ಮನವಿ ಮಾಡಲಾಗುವುದು ಎಂದು ಕಂಪ್ಲಿ ಶಾಸಕ ಸುರೇಶ ಬಾಬು ಹೇಳಿದರು.

ತುಂಗಭದ್ರಾ ಜಲಾಶಯದ ಹೂಳೆತ್ತುವ ಪ್ರದೇಶಕ್ಕೆ ಬುಧವಾರ ಬೇಟಿ ನೀಡಿದ,ಅವರು, ಸರ್ಕಾರ ಮಾಡದ ಹೂಳೆತ್ತುವ ಕಾರ್ಯವನ್ನು ರೈತರೇ ಮುಂದೆ ಬಿದ್ದು ಮಾಡುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ. ಆದರೆ ಈವರಗೆ ಜಿಲ್ಲಾ ಉಸ್ತುವರಿ ಸಚಿವ ಸಂತೋಷ ಲಾಡ್ ಹಾಗೂ ನೀರಾವರಿ ಸಚಿವ ಎಂ.ಬಿ.ಪಾಟೀಲ ಬೇಟಿ ನೀಡದಿರುವುದು ಸರಿಯಾದ ಕ್ರಮವಲ್ಲ. ಕೇವಲ ಚುನಾವಣೆ ವೇಳೆಯಲ್ಲಿ ಜಲಾಶಯದ ಹೂಳೆತ್ತುವ ಮಾತನಾಡುವ ರಾಜ್ಯ ಸರ್ಕಾರ ಈವರಗೆ ತಿರಿಗೂ ನೋಡಿಲ್ಲ ಎಂದು ಆರೋಪಿಸಿದರು. ಸರ್ಕಾರ ಜಲಾಶಯದ ಹೂಳಿನ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಿದೆ ಹೂಳೆತ್ತುವ ಕುರಿತು, ಅಗತ್ಯ ಕ್ರಮ ಕೈಗೊಳ್ಳಬೇಕು. ಜಲಾಶಯ ಪಕ್ಕದಲ್ಲಿಯೇ ಇದ್ದರೂ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಆಭಾವ ಉಂಟಾಗಿದೆ.ಜಲಾಶಯ ಹೂಳು ಹಾಕಲು ಸುಮಾರು 70ಸಾವಿರ ಎಕರೆ ಭೂಮಿ ಅವಶ್ಯಕತೆಯಿದೆ ಎಂದು ಹೇಳಿ ಕೈಚೆಲ್ಲಿ ಕುಳಿತಿದೆ. ಜಲಾಶಯದಲ್ಲಿ ಹೂಳು ಮಾತ್ರವಲ್ಲದೇ ಗಟ್ಟಿ ಪದರಿನ ಮಣ್ಣು ಇದ್ದು, ಇದನ್ನು ರಸ್ತೆ ಕಾಮಗಾರಿಗಾಗಿ ಬಳಿಕೆ ಮಾಡಿಕೊಳ್ಳಬಹದು ಎಂದು ಸಲಹೆ ನೀಡಿದರು. ಹೂಳೆತ್ತುವ ಕಾರ್ಯಕ್ಕಾಗಿ ಬೆಂಬಲ ಸೂಚಿಸಿದ ಸುರೇಶ ಬಾಬು, ಆರ್ಥಿಕ ಸಹಾಯ ಮಾಡುವುದಾಗಿ ರೈತ ಮುಖಂಡರಿಗೆ ಭರವಸೆ ನೀಡಿದರು.

ಮರಿಯಮ್ಮನಹಳ್ಳಿ ಗುರುಪಾದ ಮಠದ ಮಲ್ಲಿಕಾರ್ಜುನ ಮಹಾಸ್ವಾಮಿಜಿ, ನಂದಿಪುರ ಕ್ಷೇತ್ರದ ಮಹೇಶ್ವರ ಸ್ವಾಮಿಜಿ ಸಾನಿಧ್ಯವಹಿಸಿದ್ದರು. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ದರೂರು ಪುರಷೊತ್ತಮ ಗೌಡ ಇತರರು ಇದ್ದರು.

LEAVE A REPLY

Please enter your comment!
Please enter your name here