ಒಂಬತ್ತನೇ ದಿನಕ್ಕೆ ಕಾಲಿಟ್ಟ ಹೂಳಿನ ಜಾತ್ರೆ

0
233

ಬಳ್ಳಾರಿ /ಹೊಸಪೇಟೆ: ತುಂಗಭದ್ರಾ ಜಲಾಶಯದ ಹೂಳೆತ್ತುವ ಕಾರ್ಯ ಭರದಿಂದ ಸಾಗಿದ್ದು, ಹೂಳಿನ ಜಾತ್ರೆ ಶುಕ್ರವಾರ 9ನೇ ದಿನಕ್ಕೆ ಕಾಲಿಟ್ಟಿದ್ದು,ರೈತರು, ಕೈಗೊಂಡಿರುವ ಹೂಳೆತ್ತುವ ಕಾರ್ಯಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಪಕ್ಷಬೇಧ ಮರೆತು ಜನಪ್ರತಿನಿಧಿಗಳು ಹಾಗೂ ಸಂಘ-ಸಂಸ್ಥೆಗಳ ಮುಖಂಡರು, ಆರ್ಥಿಕ ನೆರವು ನೀಡುತ್ತಿದ್ದಾರೆ.ತುಂಗಭದ್ರಾ ಜಲಾಶಯ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಹಾಗೂ ಮಾನ್ವಿ ಶಾಸಕ ಹಂಪಯ್ಯ ನಾಯಕ ಜಲಾಶಯದ ಹೂಳೆತ್ತುವ ಪ್ರದೇಶಕ್ಕೆ ಬೇಟಿ ಪರಿಶೀಲಿಸಿದರು.ಬಳಿಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧಕ್ಷ ದರೂರು ಪುರಷೋತ್ತಮ ಗೌಡರಿಗೆ 50ಸಾವಿರ ರೂ. ಸಹಾಯ ಧನ ನೀಡಿ ಬೆಂಬಲ ವ್ಯಕ್ತಪಡಿಸಿದರು.ನಂತರ ಮಾತನಾಡಿದ ಅವರು, ತುಂಗಭದ್ರಾ ಜಲಾಶಯದ ಹೂಳೆತ್ತುವ ವಾಸ್ತುವತೆ ಕುರಿತು ಸಿಎಂ ಸಿದ್ಧರಾಮಯ್ಯ ಅವರಿಗೆ ಮನವರಿಕೆ ಮಾಡಿಕೊಡುವ ಮೂಲಕ ಮುಂದಿನ ದಿನಗಳಲ್ಲಿ ಸರ್ಕಾರವತಿಯಿಂದ ಜಲಾಶಯದ ಹೂಳೆತ್ತಲು ಕ್ರಮ ಕೈಗೊಳ್ಳಲು ಪ್ರಯತ್ನ ನಡೆಸಲಾಗುವುದು ಎಂದು ಭರವಸೆ ನೀಡಿದರು.ಕರ್ನಾಟಕ ರಸಾಯನಿಕ ಗೊಬ್ಬರ ಮಾರಟಗಾರರ ಸಂಘದವತಿಯಿಂದ 1.50ಲಕ್ಷ ರೂ. ನಗರದ ಅಂಜುಮನ್ ಕಮಟಿ ಅಧ್ಯಕ್ಷ ಹೆಚ್.ಎನ್.ಎಫ್ ಮಹಮ್ಮದ್ ಇಮಾಮ್ ನಿಯಾಜಿ 11ಸಾವಿರ ರೂ. ಹೊಸಪೇಟೆ ರೈತ ಸಂಘದವತಿಯಿಂದ 10ಸಾವಿರ ರೂ ಹಾಗೂ ಶರಣಗೌಡ 10ಸಾವಿರ ದೇಣಿಗೆಯನ್ನು ರೈತ ಮುಖಂಡರಿಗೆ ನೀಡಿದರು.ಬಳ್ಳಾರಿಯ ಕಮ್ಮರಚೇಡು ಮಠದ ಕಲ್ಯಾಣ ಮಹಾಸ್ವಾಮಿಗಳು, ಮಾನವಿಯ ಗವಿಮಠದ ಮಹಾಸ್ವಾಮಿಗಳು, ಮುಖಂಡರಾದ ಗೌರೀಷ್ , ವೆಂಕಟೇಶ್, ಪ್ರವೀಣ್, ಸಾಧಿಕ್ ಅಲಿ, ಪರಶುರಾಮ್ ಇತರರು ಇದ್ದರು.

LEAVE A REPLY

Please enter your comment!
Please enter your name here