ತುಂಗಾರತಿ ಮಹೋತ್ಸವಕ್ಕೆ ಆದ್ದೂರಿ ಸ್ವಾಗತ

0
247

ಬಳ್ಳಾರಿ/ ಹೊಸಪೇಟೆ: ದಕ್ಷಿಣ ಕಾಶಿ ವಿಶ್ವ ಪಾರಂಪರಿಕ ಹಂಪಿಯಲ್ಲಿ ಪ್ರಪ್ರಥಮ ಬಾರಿಗೆ ತುಂಗಾರತಿ ಮಹೋತ್ಸವಕ್ಕೆ ಆದ್ದೂರಿ ಸ್ವಾಗತ ಸ್ಕಿಕಿದ್ದು, ಇದು ನಿರಂತರ ಅಚರಣೆ ನಡೆದು ಇತಿಹಾಸ ಸೇರಲಿದೆ ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾತ್ ಮನೋಹರ್ ಹೇಳಿದರು.

ಐತಿಹಾಸಿಕ ಹಂಪಿ ಉತ್ಸವದ ನಿಮಿತ್ತವಾಗಿ ಶ್ರೀ ವಿದ್ಯಾರಣ್ಯ ಭಾರತಿ ಸ್ವಾಮಿಜಿ ಹಾಗೂ ವಿವಿಧ ಮಠಾಧೀಶರ ಸಾನಿಧ್ಯದಲ್ಲಿ ಶುಕ್ರವಾರ ಪ್ರಥಮವಾಗಿ ನಡೆದ ತುಂಗಭದ್ರಾ ನದಿ ತೀರದಲ್ಲಿ ತುಂಗಾ ಅರತಿ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ರಾಷ್ಟ್ರದಲ್ಲಿ ಧಾರ್ಮಿಕ ಪರಂಪರೆಯನ್ನು ಉಳಿಸಿಕೊಂಡು ಬರುವ ಏಕೈಕ ಸಾಂಪ್ರಾದಾಯಿಕ ಆಚರಣೆ ಉತ್ತರ ಪ್ರದೇಶದ ಗಂಗಾ ನದಿ ತೀರದಲ್ಲಿ ಗಂಗಾ ಆರತಿ  ಮಹೋತ್ಸವ ನಡೆಯುತ್ತಿದ್ದು, ಇದಕ್ಕೆ ಸಾಕ್ಷಿ ಎಂಬಂತೆ ದಕ್ಷಿಣ ಕಾಶಿ ಖ್ಯಾತಿಯ ಹಂಪಿಯಲ್ಲಿ ತುಂಗಾರತಿ ಮಾಡುವ ಮೂಲಕ ಧಾರ್ಮಿಕತೆಯನ್ನು ಇನಷ್ಟು ಗಟ್ಟಿಗೊಳಿಸಲಾಗುತ್ತದೆ. ಈ ಧಾರ್ಮಿಕ  ಪರಂಪರೆ ಉಳಿವಿಗಾಗಿ ಪುರಾತನ ಕಾಲದಿಂದಲೂ ದೈವ ಸ್ಪರೂಪಿಗಳಾದ ಜಲ, ವಾಯು, ಅಗ್ನಿ, ಧರೆ, ಸೇರಿ ಇತ್ಯಾದಿ ಪ್ರಕೃತಿ ದೇವತೆಗಳನ್ನು ಆರಾಧನೆ ಮಾಡಲಾಗುತ್ತಿತ್ತು.

ಆಧುನಿಕ ಯುಗದಲ್ಲಿ ಧಾರ್ಮಿಕ, ಸಾಂಪ್ರಾದಾಯಿಕ ಸಾಂಸ್ಕೃತಿಕ ಕಲೆ, ವಾಸ್ತು ಶಿಲ್ಪಕ್ಕೆ ಹೆಚ್ಚಿನ ಮಹತ್ವ ನೀಡಿ, ಭಾರತೀಯ ಪರಂಪರೆಯನ್ನು ಉಳಿಸಬೇಕಿದೆ ಎಂದರು.

ಹಂಪಿ ಶ್ರೀವಿದ್ಯಾರಣ್ಯ ಭಾರತಿ ಸ್ವಾಮಿಜಿ ಸಾನಿಧ್ಯದಲ್ಲಿ ವಿವಿಧ ಮಠಾಧೀಶರು ಹಾಗೂ ಅಧಿಕಾರಿಗಳು, ಮೊದಲಿಗೆ ಕನ್ನಡ ಭವನೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸಿದರು. ಬಳಿಕ ತುಂಗಭದ್ರಾ ನದಿಗೆ ಬಾಗಿನ ಅರ್ಪಿಸಿದರು.

ಶಾಸಕ ಆನಂದಸಿಂಗ್, ಉಪವಿಭಾಗಾಧಿಕಾರಿ ಪ್ರಶಾಂತ್ ಕುಮಾರ ಮಿಶ್ರಾ, ತಹಶೀಲ್ದಾರ ಹೆಚ್.ವಿಶ್ವನಾಥ, ಹಿಂದೂಧಾರ್ಮಿಕ ದತ್ತಿಗಳ ಇಲಾಖೆಯ ಆಯುಕ್ತ ಎಸ್.ಪಿ.ಬಿ.ಮಹೇಶ, ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ್ ರಾವ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

ಜಿಲ್ಲಾಡಳಿತ, ಹಿಂದೂಧಾರ್ಮಿಕ ದತ್ತಿಗಳ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಇಲಾಖೆ ಜಂಟಿಯಾಗಿ ಕಾರ್ಯಕ್ರಮವನ್ನು ಸಂಘಟಿಸಿದ್ದವು.

LEAVE A REPLY

Please enter your comment!
Please enter your name here