ತುಂಗೆಯಲ್ಲಿ ಹೆಚ್ಚಿದ ಒಳ ಹರಿವು-ಟಿ.ಬಿ.ಡ್ಯಾಂನತ್ತ ಹರಿದು ಬಂದ ಜನಸಾಗರ

0
302

ಬಳ್ಳಾರಿ/ ಹೊಸಪೇಟೆ:ತುಂಗಭದ್ರಾ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಏರಿಕೆ ಕಾಣುತ್ತಿದ್ದಂತಯೇ, ಇತ್ತ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಟಿ.ಬಿ.ಡ್ಯಾಂ ಕಡೆ ಮುಖ ಮಾಡಿದ್ದಾರೆ.

ಬೇಸಿಗೆ ದಿನಗಳಲ್ಲಿ ಸುಡ ಬಿಸಿಲಿನ ಧಗೆಗೆ ಬಳಲಿ ಬಂಡಾಗಿದ್ದ ಜಿಲ್ಲೆಯ ಜನರು, ವರುಣ ಆಗಮನಕ್ಕಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಇನ್ನೇನು ಜಲಾಶಯದಲ್ಲಿ ನೀರು ಸಂಗ್ರಹ ಸುದ್ದಿ ಕೇಳುತ್ತಿದ್ದಂತಯೇ ಜಲಾಶಯದ ಕಡೆ ದೌಡಾಯಿಸಿ ಬಂದು, ಜಲಾಶಯದ ವಿಹಂಗಮ ನೋಟವನ್ನು ಕಣ್ತುಂಬಿಕೊಂಡು ಸಂಭ್ರಮಿಸುತ್ತಿದ್ದಾರೆ.

ಭಾನುವಾರ ರಜೆ ದಿನ, ಭೀಮನ ಅಮಾವಾಸ್ಯೆ ಒಟ್ಟೊಟ್ಟಿಗೆ ಕೂಡಿ ಬಂದಿರುವದರಿಂದ ಬೆಳಿಗ್ಗೆ ಹಂಪಿಗೆ ಬೇಟಿ ನೀಡಿ, ವಿರೂಪಾಕ್ಷನ ದರ್ಶನ ಪಡೆದು, ಸಂಜೆಯಾಗುತ್ತಿದಂತಯೇ ತಮ್ಮ ವಾಹನಗಳ ಮೂಲಕ ನೇರವಾಗಿ ಟಿ.ಬಿ.ಡ್ಯಾಂ ನತ್ತ ಆಗಮಿಸುತ್ತಿದ್ದಾರೆ. ಮಹಿಳೆ, ಮಕ್ಕಳು ವೃದ್ಧರರು ಎನ್ನದೇ ಕಳಭಾಗದಲ್ಲಿರುವ ಉದ್ಯಾನವದಲ್ಲಿ ಸಂಗೀತ ಕಾರಂಜಿ, ಪಕ್ಕದ ಹೊಂಡದ ನೀರಿನಲ್ಲಿರುವ ಬೋಟ್‍ಗಳಲ್ಲಿ ಸಂಚರಿಸಿ, ಖಷಿ ಅನುಭವಿಸುತ್ತಿದ್ದಾರೆ.

ಒಳ ಹರಿವು ಹೆಚ್ಚಳ:ತುಂಗಭದ್ರಾ ಜಲಾಶಯಕ್ಕೆ ಭಾನುವಾರ 50ಸಾವಿರಕ್ಕೂ ಆಧಿಕ ನೀರು ಹರಿದು ಬರುತ್ತಿದೆ. ಜಲಾಶಯದ ಇಂದಿನ ನೀರಿನ ಮಟ್ಟ ಹೀಗಿದೆ. ಗರಿಷ್ಟ 1633, ಇಂದಿನ ಮಟ್ಟ 1604 ಅಡಿ, ಒಳ ಹರಿವು 51162 ಕ್ಯೂಸೆಕ್ಸ್ ಇದ್ದು, ಹೊರ ಹರಿವು 2359 ಇದೆ. ಸಂಗ್ರಹ 29.008 ಇದೆ.

ಮೇ ಹಾಗೂ ಜೂನ್ ತಿಂಗಳ ಕಳೆದರೂ ಮುಂಗಾರು ಬಾರದೇ ಇರುವುದರಿಂದ ತೀವ್ರ ಆತಂಕಕ್ಕೆ ಒಳಗಾದ ರೈತಾಪಿ ಜನರಿಗೆ ವರುಣ ಆಗಮನ ಸ್ವಲ್ಪ ನೆಮ್ಮದಿ ತಂದಿದೆಯಾದರೂ, ಸಂಪೂರ್ಣ ನೆಮ್ಮದಿ ತಂದು ಕೊಟ್ಟಿಲ್ಲ. ಏಕೆಂದರೆ, ಜಲಾಶಯದಲ್ಲಿ ಸಾಕಷ್ಟು ನೀರು ಬಂದರೆ ಮಾತ್ರ ಅಚ್ಚುಕಟ್ಟು ಪ್ರದೇಶದ ರೈತರ ಹೊಲ-ಗದ್ದೆಗಳಿಗೆ ನೀರು ಲಭ್ಯವಾಗಲಿದೆ. ಅಲ್ಲಿಯವರಗೆ ರೈತರ ಹೊಲ-ಗದ್ದೆಗಳಿಗೆ ನೀರು ಹರಿಸುವುದಿಲ್ಲ ಎನ್ನುವುದು ರೈತರಿಗೆ ನುಂಗಲಾರದ ತುತ್ತಾಗಿದೆ.

LEAVE A REPLY

Please enter your comment!
Please enter your name here