ತುಂಬಿದ ಕೆರೆಗೆ ಬಿಜೆಪಿ ಮುಖಂಡರಿಂದ ಬಾಗಿನ ಅರ್ಪಣೆ.

0
224

ಚಿಕ್ಕಬಳ್ಳಾಪುರ/ಚಿಂತಾಮಣಿ:- ಅವಿಭಜಿತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಗಳಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ರಾಯನ ಕೃಪೆಗೆ ಚಿಂತಾಮಣಿ ತಾಲ್ಲೂಕಿನ ಬಹು ತೇಕ ಎಲ್ಲಾ ಕೆರೆಕುಂಟೆಗಳು ತುಂಬಿ ಹರಿಯುತ್ತಿದ್ದು.
ಚಿಂತಾಮಣಿ ನಗರದ ಜೀವಜಲ ಮೂಲ ವಾಗಿರುವ ಕನ್ನಂಪಲ್ಲಿ ಕೆರೆಗೆ ಬಿಜೆಪಿ ಮುಖಂಡರು ಅರುಣ್ ಬಾಬು ತಮ್ಮ ಅಪಾರ ಬೆಂಬಲಿಗ. ರೊಂದಿಗೆ ವಿಶೇಷ ಪೊಜೆ ಗಳನ್ನು ಸಲ್ಲಿಸಿ ಬಾಗಿನ ಅರ್ಪಿಸಿದರು.

ನಗರದ ಜೀವಜಲವಾಗಿರುವ ಕನ್ನಂಪಲ್ಲಿಯ ಕೆರೆ ಹರಿಯುತ್ತಿರುವ ಜಲಧಾರೆಯಲಿ ಸಂಭ್ರಮಿಸುತ್ತಿರುವ ಜನ, ನೀರಿನಲ್ಲಿ ಖುಷಿ ಯಿಂದ ಸೆಲ್ಪಿ ತೆಗೆದುಕೊಳ್ಳತ್ತಿರುವ ಜನ ಇವೆಲ್ಲ ದೃಶ್ಯಗಳು ಕಂಡು ಬಂದಿದ್ದು ಎರಡು ವರ್ಷಗಳ ಬಳಿಕ ಚಿಂತಾಮಣಿ ತಾಲ್ಲೂಕಿನಲ್ಲಿ ಕಳೆದ ಹದಿನೈದು ದಿನಗಳಿಂದ ಸತತವಾಗಿ ಸುರಿ ಯುತ್ತಿರುವ ಜಡಿ ಮಳೆಯಿಂದಾಗಿ ಕನ್ನಂಪಲ್ಲಿ ಕೆರೆ ಕೋಡಿ ಹರಿಯುತ್ತಿರುವ್ಯದರಿಂದ ಬಿಜೆಪಿ ಮುಖಂಡರಾದ ಅರುಣ್ ಬಾಬು ಹಾಗೂ ಅಪಾರ ಬೆಂಬಲಿಗರ ಸಮ್ಮುಖದಲ್ಲಿ ಇಂದು ಬೆಳಿಗ್ಗೆ ಕೆರೆಯ ಬಳಿ ತೆರಳಿ ಕೆರೆಗೆ ವಿಶೇಷ ಪೂಜೆಗಳನ್ನು ಸಲ್ಲಿಸಿ ಬಾಗಿನ ಸಲ್ಲಿಸಿದ ರು.
ಇನ್ನೂ ಕೆರೆಗೆ ಬಾಗಿನ ಅರ್ಪಿಸುವ ವೇಳೆ ಚಿಂತಾಮಣಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಜನಸಾಗರವೇ ಹರಿದು ಬಂದಿತ್ತು.ಹಾಗೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಜನತೆಗೆ ಮತ್ತು ಶಾಲೆ ಮಕ್ಕಳಿಗೆ ತಿಂಡಿಯ ವ್ಯವಸ್ಥೆಯನ್ನು ಮಾಡಿದ್ದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತಶಿವಪ್ಪ , ತಾಲ್ಲೂಕು ಅಧ್ಯಕ್ಷರು ಆಂಜನೇಯ ರೆಡ್ಡಿ, ದೇವರಾಜ್ ,ಕುರುಟ ಹಳ್ಳಿ ಮಂಜು, ದಿಲ್ಲಿಪ್,ಮಹೇಶ್ ,ನರಸಿಂಹಪ್ಪ , ವರುಣ್, ನಾ ಶಂಕರ್, ಹಾಗೂ ಸಾರ್ವಜನಿಕರು ಮತಿತ್ತರರು ಉಪಸ್ಥಿತಿರಿದ್ದರು.

ಇಮ್ರಾನ್ ಖಾನ್ ಆರ್.ಕೆ
ನಮ್ಮೂರು ಟಿವಿ ಚಿಂತಾಮಣಿ.

LEAVE A REPLY

Please enter your comment!
Please enter your name here