ತೋಳನ ಕೆರೆಗೆ ಕಡೆಗೊ ಕೂಡಿ ಬಂತು ಹೂಳೆತ್ತುವ ಭಾಗ್ಯ..

0
163

ಹುಬ್ಬಳ್ಳಿ: ವಾರ್ಡ್ ನಂ ಬರ್ 35 ಮತ್ತು 36 ಸರ್ವೆ ನಂಬರ್ 600 ತೋಳನ ಕೆರೆಯ ಕಾಮಗಾರಿಕೆ
ನಡೆಯುತ್ತಿದೆ..ಆದರೆ
ಒಂದು ವಿಪರ್ಯಾಸವೆಂದರೆ 27 ಎಕರೆಯಲ್ಲಿರುವ ಇಷ್ಟೊಂದು ದೊಡ್ಡ ಕೆರೆಯ ಕಾಮಗಾರಿಕೆಗೆ ಕೇವಲ್ ಒಂದು ಹಿಟಾಚಿ ಗಾಡಿ, ಎರೆಡು ಟ್ರಕ್ಕುಗಳು,ಮತ್ತು ಒಂದು ಟ್ಯಾಕ್ಟರ್,ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾವೆ..
ಈ ಕೆರೆಯ ಮಣ್ಣು ತೆಗೆಯಲು ಕನಿಷ್ಠ 5 ರಿಂದ 6 ಹಿಟಾಚಿಗಳು, 8 ರಿಂದ 10 ಟಿಪ್ಪರ್ ಗಾಡಿಗಳು, ಬೇಕಾಗುತ್ತದೆ..
ಆದರೆ ಇಲ್ಲಿ ಕಾಟಾಚಾರಕ್ಕೆ ಹಾಗೂ ಬರುವ ಚುನಾವಣೆಗೆ ತಮ್ಮ ಪಬ್ಲಿಸಿಟಿ ಮತ್ತು ಗಿಮಿಕ್ ಗೋಸ್ಕರ ಕಾಮಗಾರಿಕೆ ನಡೆಯುತ್ತಿದೆ ಎಂದು ಎದ್ದು ಕಾಣುತ್ತಿದೆ..
ನನ್ನ ಪ್ರಕಾರ ಇಲ್ಲಿ ಕಡಿಮೆ ಅಂದರು 10 ರಿಂದ 12 Foot ಆಳವಾಗಿ ಮಣ್ಣು ತೆಗೆದರೆ ಇಲ್ಲಿ ನೀರುನ್ನು ನಿಲ್ಲಿಸ ಬಹುದು ಬರುವ ಮಳೆಗಾಲದಲ್ಲಿ ಸಾಕಷ್ಟು ನೀರನ್ನು ಸಂಗ್ರಹಿಸ ಬಹುದು.
ಈಗ ಇಲ್ಲಿನ ಕಾಮಗಾರಿಕೆಯನ್ನು ನೋಡಿದರೆ ಅಂತಹ ಯಾವ ಲಕ್ಷಣಗಳು ಕಾಣುತ್ತಿಲ್ಲ..
ಈಗಲೂ ಕಾಲ ಮಿಂಚಿಲ್ಲ ಈಗಲಾದರು ಸಂಭಂದ ಪಟ್ಟ ಇಲಾಖೆ ಯವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ವಿನಯ ಕುಲಕರ್ಣಿ ಸಾಹೇಬರು ಆದಷ್ಟು ಬೇಗನೆ ಬಂದು ಪರಿಶೀಲನೆ ಮಾಡಿ ಈ ಕಾಮಗಾರಿಕೆಯನ್ನು ಯಶಸ್ವಿ ಗೊಳಿಸಬೇಕಾಗಿ ವಿನಂತಿ
ಧನ್ಯವಾದಗಳು..
ನಾಗರಿಕ ಹಕ್ಕು ಹೋರಾಟಗಾರ ಹಾಗೂ ಆರ್.ಟ್.ಆಯ್.ಕಾರ್ಯಕರ್ತ ದೀಪಕ್ ಶೀರೊಲಿಕರ.

LEAVE A REPLY

Please enter your comment!
Please enter your name here