ತ್ಯಾಗ, ಬಲಿದಾನಗಳ ಪ್ರತೀಕದ ಸ್ವಾತಂತ್ರ್ಯ

0
326

ಚಿಕ್ಕಬಳ್ಳಾಪುರ /ಚಿಂತಾಮಣಿ:ನಗರದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಕ್ರೀಡಾಂಗಣ ಮೈದಾನ ದಲ್ಲಿ 71ನೇ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ಸಮಾರಂಭ ವನ್ನು, ಮಾನ್ಯ ಶಾಸಕರದ ಜೆ ಕೆ ಕೃಷ್ಣಾ ರೆಡ್ಡಿ ಮತ್ತು ತಹಶಿಲ್ದಾರರ ಎಂ. ಗಂಗಪ್ಪ ರವರು ನೆರವೇರಿಸಿದರು.

ದೇಶ ಸ್ವಾತಂತ್ರ್ಯ ಬಂದು 71 ವರ್ಷಗಳು ಕಳೆದರೂ ಸಮಾಜದಲ್ಲಿ ಇಂದಿಗೂ ಬೇರೂರಿರುವ ಅಸ್ಪೃಶ್ಯತೆ, ಬಡತನ, ಭ್ರಷ್ಟಾಚಾರ ದೇಶದ ಸರ್ವತೋಮುಖ ಅಭಿವೃದ್ಧಿಗೆ ಅಡ್ಡಿಯಾಗಿದೆಯೆಂದು ಕ್ಷೇತ್ರದ ಶಾಸಕರು ಜೆ.ಕೆ ಕೃಷ್ಣಾ ರೆಡ್ಡಿ ಅಭಿಪ್ರಾಯ ಪಟ್ಟರು.

ನಗರದ ಝಾನ್ಸಿ ರಾಣಿ ಕ್ರೀಡಾಂಗಣದಲ್ಲಿ ಮಂಗಳವಾರ ತಾಲ್ಲೂಕಿನ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ನಗರಸಭೆ ಜಂಟಿಯಾಗಿ ಏರ್ಪಡಿಸಿದ್ದ 71 ನೇ ಸ್ವಾತಂತ್ರ್ಯ ದಿಒಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಬ್ರಿಟಿಷ್ಯ ಸಾಮ್ರಾಜ್ಯಶಾಹಿಗಳ ವಿರುದ್ಧ ಹೋರಾಟ ನಡೆಸಿದ ಅಸಂಖ್ಯಾತ ವೀರಾಸೇನಾನಿಗಳ ಹಾಗೂ ಮಹನೀರಯ ತ್ಯಾಗ, ಬಲಿದಾನಗಳಿಂದ ಪಡೆದ ನಮ್ಮ ದೇಶದ ಸ್ವಾತಂತ್ರ್ಯ ವನ್ನು ಸಂರಕ್ಷಿಸಿ,ದೇಶವನ್ನು ಪ್ರಗತಿ ಯತ್ತ ಮುನ್ನಡೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆಯೆಂದು ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ, ಇತ್ತೀಚಿನ ದಿನಗಳಲ್ಲಿ ಭ್ರಷ್ಟ ರಾಜಕೀಯ ವ್ಯವಸ್ಥೆ, ಮತ್ತು ಅಧಿಕಾರಿಗಳಿಂದ ಸಮಾಜ ಆಧೋಗತಿಗೆ ಇಳಿಯುತ್ತಿದೆ. ಸ್ವಾತಂತ್ರ್ಯದ ಮೌಲ್ಯ ಗಳೇ ಅದಃಪಥನದತ್ತ ಸಾಗಿವೆಯೆಂದು ಆತಂಕ ವ್ಯಕ್ತಪಡಿಸಿದರು.

ನಗರದ ಝಾನ್ಸಿರಾಣಿ ಕ್ರೀಡಾಂಗಣದಲ್ಲಿ ನಡೆದ 71ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ನಗರದ ಠಾಣೆ ಸಬ್ ಇನ್ಸ್ ಪೆಕ್ಟರ್ ನರಸಿಂಹಮೂರ್ತಿ ಹಾಗೂ ಅವರ ತಂಡ,ಗೃಹ ರಕ್ಷಕ ದಳ ಸಿಬ್ಬಂದಿ, ನಗರದ ಬಾಲಕರ ಹಾಗೂ ಮಹಿಳಾ ಕಾಲೇಜಿನ ಎನ್ ಸಿಸಿ ತಂಡಗಳು ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಶಿಸ್ತು ಬದ್ಧ ವಾಗಿ ನಡೆಸಿಕೊಟ್ಟ ಆಕರ್ಷಕ ಪಂಥ ಸಂಚಲನ ಎಲ್ಲರ ಗಮನ ಸೆಳೆಯಿತು.

ಕಾರ್ಯಕ್ರಮ ದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸ್ವಾತಂತ್ರ್ಯ ಹೋರಾಟಗಾರ ರನ್ನು ಶಿಕ್ಷಕರು, ಕಲಾವಿದರು ತಾಲ್ಲೂಕು ಆಡಳಿತದ ಪರವಾಗಿ ಶಾಲು ಹೊದಿಸಿ, ಫಲ ತಾಂಬೂಲ ನೀಡಿ ಶಾಸಕ ಜೆ.ಕೆ ಕೃಷ್ಣಾ ರೆಡ್ಡಿ, ತಹಶಿಲ್ದಾರ್ ಗಂಗಪ್ಪ ಮತ್ತಿತರರು ಗಣ್ಯರು ಸನ್ಮಾನಿಸಿದರು.

LEAVE A REPLY

Please enter your comment!
Please enter your name here