ತ್ಯಾಜ್ಯ ನೀರು ಶುದ್ದಿಕರಣ ಘಟಕಕ್ಕೆ ಚಾಲನೆ..

0
141

ಬೆಂಗಳೂರು/ಕೆ.ಆರ್.ಪುರ:ತ್ಯಾಜ್ಯ ನೀರು ಶುದ್ದಿಕರಣ ಘಟಕಕ್ಕೆ ಚಾಲನೆ.ಕೆ.ಆರ್.ಪುರ ಕ್ಷೇತ್ರದ ಮೇಡಹಳ್ಳಿಯಲ್ಲಿ ತ್ಯಾಜ್ಯ ನೀರು ಸಂಸ್ಕರಣ ಘಟಕ್ಕೆ ಉದ್ಘಾಟಿಸಿದ ನಗರಾಭಿವೃದ್ಧಿ ಸಚಿವ ಕೆ.ಜೆ.ಜಾಜ್೯.

೧೫ ದಶ ಲಕ್ಷ ಲೀಟರ್ ಎಂ ಎಲ್ ಡಿ ಸಾಮತ್ಯದ ತ್ಯಾಜ್ಯ ನೀರು ಸಂಸ್ಕರಣ ಘಟಕ.ಎಲೆ ಮಲ್ಲಪ್ಪ ಶೆಟ್ಟಿ ಕೆರೆ ಸಮೀಪದಲ್ಲಿ ನೂತನವಾಗಿ ನಿರ್ಮಿಸಿರುವ ತ್ಯಾಜ್ಯ ಸಂಸ್ಕರಣ ಘಟಕ.ಸ್ಥಳೀಯ ಶಾಸಕ ಬಿ.ಎ ಬಸವರಾಜ, ಬಿ ಡ್ಲ್ಯೂ ಎಸ್ ಎಸ್ ಬಿ ಅಧಿಕಾರಿಗಳು ಉಪಸ್ಥಿತಿ.

ಜಾರ್ಜ್ ಹೇಳಿಕೆ

ಮಹದಾಯಿ ವಿಚಾರದಲ್ಲಿ ಗೋವಾ ಸಿಎಂ, ಮಾಜಿ ಸಿಎಂ ಯಡಿಯೂರಪ್ಪ ರವರಿಗೆ ಪತ್ರ ಬರೆದಿದ್ದಾರೆ ಎಂದು ಮಾದ್ಯಮಗಳಿಂದ ತಿಳಿದು ಬಂದಿದೆ.

ತಕ್ಷಣ ನಮ್ಮ ಮುಖ್ಯಮಂತ್ರಿಗಳು ಮತ್ತು ನೀರಾವರಿ ಸಚಿವರು ತಕ್ಷಣ ಗೋವಾ ಸಿಎಂ ಗೆ ಪತ್ರಬರೆದು ನಾವು ಮಾತುಕತೆಗೆ ಸಿದ್ದವಿರುವುದಾಗಿ ಪತ್ರದ ಮುಕೇನ ತಿಳಿಸಿದ್ದು ಅವರು ಎಲ್ಲಿ ಕರೆದರು ಮಾತುಕತೆಗೆ ಸಿದ್ದ, ಇದರಲ್ಲಿ ಯಾವುದೆ ರಾಜಕೀಯ ಇಲ್ಲ.
ಬೆಂಗಳೂರಿನಲ್ಲಿ ಇತ್ತೀಚೆಗೆ ಕೆರೆಗಳು ಕಲುಷಿತ ಗೊಳ್ಳುತ್ತಿರುವುದರಿಂದ ಮೊದಲು ತ್ಯಾಜ್ಯ ಶುದ್ದೀಕರಣ ಘಟಕವನ್ನ ಪ್ರಾರಂಭ ಮಾಡಿ ನಂತರ ಕೆರೆಗಳ ಸ್ವಚ್ಚತೆಗೆ ಮುಂದಾಗುತ್ತೇವೆ.

ಬೆಂಗಳೂರಿನಲ್ಲಿ ಈಗಾಗಲೆ ೮೦ ರಷ್ಟು ಕೆರೆಗಳ ಬಳಿ ತ್ಯಾಜ್ಯ ಶುದ್ದೀಕರಣ ಘಟಕ ತೆರೆಯಲು ಸರ್ಕಾರ ಅನುಮತಿ ನೀಡಿದೆ.

ಕೆ.ಆರ್.ಪುರ ಕ್ಷೇತ್ರದ ಎಲೆ ಮಲ್ಲಪ್ಪ ಶೆಟ್ಟಿ ಕೆರೆಯಲ್ಲಿ ಎಸ್ ಟಿ ಪಿ ಘಟಕ ಪ್ರಾರಂಬಿಸಿದ್ದು, ಮುಂದಿನ ದಿನಗಳಲ್ಲಿ ಶೇ ೧೦೦ ರಷ್ಟು ಕೆರೆಗಳಲ್ಲಿ ಎಸ್ ಟಿ ಪಿ ಘಟಕ ತೆಗೆಯಲಾಗುವುದು ಎಂದು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here