ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳ ಲೋಕಾರ್ಪಣೆ..

0
132

ಬೆಂಗಳೂರು/ಕೆ ಆರ್ ಪುರ:- ಬೆಂಗಳೂರಿನ ಚಿಕ್ಕಬಾಣಾವಾರ, ನಾಗಸಂದ್ರ, ಹಾಗೂ ರಾಜಾ ಕೆನಾಲ್ನಲ್ಲಿ ಹೊಸದಾಗಿ ನಿರ್ಮಿಸಿರುವ ಒಟ್ಟು 65 ಎಂ.ಎಲ್.ಡಿ ಸಾಮಥ್ರ್ಯದ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ.ಜೆ. ಜಾರ್ಜ್‌ ಮೇಯರ್ ಪದ್ಮಾವತಿ, ಶಾಸಕರಾದ ಬಿ.ಎ. ಬಸವರಾಜ್, ಎಸ್.ಟಿ. ಸೋಮಶೇಖರ್ ಹಾಜರಿದ್ದರು. ನಂತರ ಅವರು,ನಮ್ಮ ಸರ್ಕಾರ ಬಂದಮೇಲೆ ಇಂತಹ ಅನೇಕ ಅಭೀವೃದ್ದಿ ಯೋಜನೆಗೆಳನ್ನ ಲೋಕಾರ್ಪಣೆ ಗೊಳಿಸಿದ್ದೇವೆ. ಈ ಘಟಕ ಪ್ರತಿನಿತ್ಯ 65 ಎಂ ಎಲ್ಡಿ ತ್ಯಾಜ್ಯ ನೀರಿ ಸಂಸ್ಕರಣೆ ಮಾಡುವುದರಿಂದ ಬೆಂಗಳೂರಿನ ಜನರಿಗೆ ಬಳಕೆಯುಕ್ತ ನೀರನ್ನು ಪೂರೈಸುವಂತಹ ಕಾರ್ಯ ಮಾಡಿದ್ದೇವೆ ಎಂದ ಅವರು ಚಲಘಟ್ಟ ಮತ್ತು ಕೊರಮಂಗಲ ತ್ಯಾಜ್ಯ ನೀರು ಸಂಸ್ಕರಣಾ ಘಟಕ ಮತ್ತು ಚಿಕ್ಕಬಾಣಾವಾರ ಮತ್ತು ನಾಗಸಮದ್ರ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ ಸಾಮಥ್ರ್ಯದ ಬಗ್ಗೆ ತಿಳಿಸಿದರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ದಲಿತರ ಮನೆಗೆಳಲ್ಲಿ ಊಟ ಮಾಡುವುದನ್ನೂ ಸಹ ಲೇವಡಿ ಮಾಡಿದರು.

ಬೈಟ್: ಸಿದ್ದರಾಮಯ್ಯ, ಮುಖ್ಯಮಂತ್ರಿ.

LEAVE A REPLY

Please enter your comment!
Please enter your name here