ತ್ವರಿತ ಗತಿಯಲ್ಲಿ ಸಮಸ್ಯೆಗಳ ಪರಿಹಾರಕ್ಕೆ ನಗರಸಭೆ ಸದಸ್ಯರ ಆಗ್ರಹ

0
241

ಬಳ್ಳಾರಿ / ಹೊಸಪೇಟೆ : ಕಳೆದ 2 ತಿಂಗಳಿಂದ ನಗರದಲ್ಲಿ ಯಾವದೇ ಕೆಲಸ ಕಾರ್ಯಗಳು ನಡೆಯುತ್ತಿಲ್ಲ, ಸ್ವಚ್ಚತೆ ಮೊದಲೇ ಇಲ್ಲ, ಕುಡಿಯುವ ನೀರಿಗೆ ಜನರು ಪರದಾಡುತ್ತಿದ್ದಾರೆ. ಬೀದಿ ದೀಪಗಳು ಇಲ್ಲದೇ ಜನರು ಕತ್ತಲಲ್ಲಿ ಸಂಚರಿಸುವಂತಾಗಿದೆ, ಫಾರಂ ನಂ-3 ಪಡೆಯಲು ಫಲಾನುಭವಿಗಳು ಪರದಾಡುತ್ತಿದ್ದಾರೆ ಎಂದು ನಗರಸಭೆ ಸದಸ್ಯರು ಉಪ ವಿಭಾಗದ ಅಧಿಕಾರಿ ಹಾಗೂ ಪ್ರಭಾರ ನಗರಸಭೆಯ ಪೌರಾಯುಕ್ತರಾಗಿರುವ ಪ್ರಶಾಂತ್ ಕುಮಾರ್ ಮಿಶ್ರಾ ಅವರಲ್ಲಿ ಸೋಮವಾರ ಜರುಗಿದ ವಿಶೇಷ ಸಾಮಾನ್ಯ ಸಭೆಯಲ್ಲಿ ನಗರಸಭೆ ಸದಸ್ಯರು ಮನವಿ ಮಾಡಿಕೊಂಡರು.
ಅಕ್ರಮ ಆಸ್ತಿ ಪರಭಾರೆ ಕುರಿತಂತೆ ನಗರಸಭೆಯ 15 ಸಿಬ್ಬಂದಿಗಳನ್ನು ಇಲ್ಲಿಂದ ಬೇರೆ ಕಡೆಗೆ ವರ್ಗಾ ಮಾಡಿದ್ದರಿಂದ ನಗರಸಭೆಯಲ್ಲಿ ಜನಸಾಮಾನ್ಯರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ ಇದರಿಂದ ಸೋಮವಾರ ಜರುಗಿದ ವಿಶೇಷಸಾಮಾನ್ಯ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯರಾದ ಬಡಾವಲಿ,ಟಿ.ಚಿದಾನಂದ, ಕೆ.ಮಹ್ಮದ್ ಗೌಸ್, ಚಂದ್ರಕಾಂತ್ ಕಾಮತ್, ಬೆಲ್ಲದ ರೊವೋಪ್, ನೂರ್‍ಜಹಾನ್,ಎಂ.ಎಸ್.ರಘು, ಬಸವರಾಜ್ ಮಾತನಾಡಿ ನಗರದ ಯಾವ ವಾರ್ಡ್‍ನಲ್ಲಿ ಸ್ವಚ್ಚತೆ ಇಲ್ಲ, ಬೀದಿ ದೀಪಗಳು ಹುರಿಯುತ್ತಿಲ್ಲ, ಕುಡಿಯುವ ನೀರಿಗೆ ಜನರು ಪ್ರತಿ ದಿನ ಪರದಾಡುತ್ತಿದ್ದಾರೆ. ಗುತ್ತಿಗೆದಾರರು ಹಣ ಪಾವತಿಯಾಗಿಲ್ಲ ಎಂದುಯಾವ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿಲ್ಲ, ಇಲ್ಲಿದ್ದ 15 ಜನ ಸಿಬ್ಬಂದಿಯನ್ನು ವರ್ಗಾವಣೆ ಮಾಡಿರುವುದರಿಂದ ಸರ್ಕಾರದ ಯೋಜನೆಗಳಿಗೆ ಬೇಕಾದ  ಫಾರಂ ನಂ-3 ಪಡೆಯುಲು ಸಾಧ್ಯವಾಗುತ್ತಿಲ್ಲ, ಈಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷ ಎನ್. ಅಬ್ದುಲ್ ಖದೀರ್ ಹಾಗೂ ಪ್ರಾಶಂತ್ ಕುಮಾರ್ ಮಿಶ್ರ ಅವರನ್ನು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಉಪ ವಿಭಾಗದ ಅಧಿಕಾರಿ ಹಾಗೂ ಪ್ರಭಾರ ನಗರಸಭೆಯ ಪೌರಾಯುಕ್ತರಾದÀ ಪ್ರಶಾಂತ್ ಕುಮಾರ್ ಮಿಶ್ರಾ ಅವರು  ಇಲ್ಲಿ ಖಾಲಿಇರುವ ಹುದ್ದೆಗಳಿಗೆ ಶೀಘ್ರವಾಗಿ ಸಿಬ್ಬಂಧಿ ಮತ್ತು ನೌಕರರನ್ನು ನಿಯೋಜಿಸಲಾಗುತ್ತದೆ. ಉಳಿದಂತೆ ಎಲ್ಲ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹರಿಸುವುದಾಗಿ ಹೇಳಿದರು.
ನಗರಸಭೆ ಅಧ್ಯಕ್ಷ ಎನ್. ಅಬ್ದುಲ್ ಖದೀರ್ ಮಾತನಾಡಿ ನಾನು ಕೂಡ ಪ್ರತಿ ವಾರ್ಡ್‍ಗೆ ಭೇಟಿ ನೀಡಿ ನಾಗರಿಕರ ಸಮಸ್ಯೆಯನ್ನು ಅರಿತುಕೊಂಡಿದ್ದೇನೆ. ಸಾಧ್ಯವಾದಷ್ಟು ಮಟ್ಟಿಗೆ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗುವುದಾಗಿ ಹೇಳಿದರು. ಉಳಿದಂತೆ ಕಳೇದ ಸಭೆಯ ನಡವಳಿಕೆಗಳು ಮತ್ತು ಪ್ರಸ್ತುತ ವಿಷಯದ ಬಗ್ಗೆ ಚರ್ಚಿಸಿ ಅನುಮೋದನೆ ನೀಡಲಾಯಿತು.  ಸಹಾಯಕ ಅಭಿಯಂತರ ಸೈಯದ್ ಆಮದ್ ಮನಸ್ಸೂರ್ ಲೆಕ್ಕಾಧಿಕಾರಿ ಅಲೀ ಸಾಬ್ ಉಪಾಧ್ಯಕ್ಷ ಶ್ರೀಮತಿ ಸುಮಂಗಳಮ್ಮ ಸೇರಿದಂತೆ ಇತರ ಸದಸ್ಯರು ಇದ್ದರು.

LEAVE A REPLY

Please enter your comment!
Please enter your name here