ದಂಡ ಸಹಿತ ತೆರಿಗೆಗೆ ತೀರ್ಮಾನ

0
296

ಬೆಂಗಳೂರು/ಮಹದೇವಪುರ: ವಲಯದಲ್ಲಿ ತೆರಿಗೆ ಬಾಕಿ ಉಳಿಸಿಕೊಂಡಿರುವ ಸಂಸ್ಥೆಗಳು ಮಾರ್ಚ್ 31ರ ಒಳಗೆ ತೆರಿಗೆ ಪಾವತಿ ಮಾಡದಿದ್ದಲ್ಲಿ ದಂಡ ಸಹಿತ ತೆರಿಗೆ ವಸೂಲಿ ಮಾಡಲಾಗವುದೆಂದು ಜಂಟಿ ಆಯುಕ್ತರಾದ ವಾಸಂತಿ ಅಮರ್ ಎಚ್ಚರಿಸಿದ್ದಾರೆ.

ಮಹದೇವಪುರ ವಲಯದಲ್ಲಿ ವಾರ್ಷಿಕ 630ಕೋಟಿ ತೆರಿಗೆ ಸಂಗ್ರಹ ಮಾಡುವ ಗುರಿಯನ್ನು ಹೊಂದಿದ್ದು ಈಗಾಗಲೇ  526.76 ಕೋಟಿ ವಸೂಲಿ ಮಾಡಲಾಗಿದೆ. ಮಾರ್ಚ 31ರ ಒಳಗೆ 25ಕೋಟಿ ಮೊತ್ತದ ತೆರಿಗೆ ವಸೂಲಿ ಮಾಡಲಾಗವುದು, ಸಾರ್ವಜನಿಕರ ಸಹಕಾರ ಅಗತ್ಯವಿದ್ದು, ತೆರಿಗೆ ಪಾವತಿಸಲು ಸ್ವಯಂ ಪ್ರೇರಣೆಯಿಂದ ಮುಂದೆ ಬರಬೇಕೆಂದು ಮನವಿ ಮಾಡಿದರು. 630 ಕೋಟಿಯನ್ನು ವಲಯವಾರು ವಾರ್ಷಿಕ ಗುರಿಯನ್ನು ಮುಂದಿನ ದಿನಗಳಲ್ಲಿ ಪೂರ್ಣ ಗೊಳಿಸಲಾಗುವುದು ಎಂದು ಪತ್ರಿಕಾಗೊಷ್ಟಿಯಲ್ಲಿ ತಿಳಿಸಿದರು.

ಮಹದೇವಪುರ ವಲಯದಲ್ಲಿ ಕಳೆದ ಆರು ತಿಂಗಳಲ್ಲಿ ನಾಲ್ಕು ಜನ ಜಂಟಿ ಆಯುಕ್ತರು ಬದಲಾಗಿದ್ದು ತೆರಿಗೆ ಸಂಗ್ರಹಕ್ಕೆ ಅಡ್ಡಿಯಾಗಿತ್ತು. ನಾನು ಅಧಿಕಾರಕ್ಕೆ  ಬಂದ ಮೇಲೆ ಎರಡು ತಿಂಗಳಲ್ಲಿ 62.03 ಕೋಟಿ ಸಂಗ್ರಹ ಮಾಡಲಾಗಿದೆ. ಬಾಕಿ ಉಳಿಸಿಕೊಂಡಿರುವ ತೆರಿಗೆ ಸಂಗ್ರಹಕ್ಕೆ ನೂತನ ಯೋಜನೆಗಳ ಮೂಲಕ ತೆರಿಗೆದಾರರಿಗೆ ಬಿಸಿ ಮುಟ್ಟಿಸಿ ದಂಡ ಸಹಿತ ತೆರಿಗೆ ಸಂಗ್ರಹಿಸಲಾಗುವುದು.

ಸರಕಾರಿ ಅಂಗ ಸಂಸ್ಥೆಗಳಾದ ಐಟಿಐ, ಹೆಚ್ಎಎಲ್ ತೆರಿಗೆ ಪಾವತಿಸದೆ ನ್ಯಾಯಲಯದ ಮೊರೆ ಹೋಗಿದ್ದು ಈಗ ನ್ಯಾಯಾಲಯದ ಸೂಚನೆ ಮೇರೆಗೆ ಬಾಕಿ ಉಳಿಸಿಕೊಂಡಿರುವ ತೆರಿಗೆಯನ್ನು ವಸೂಲಿ ಮಾಡಲಾಗುವುದು ಎಂದು ತಿಳಿಸಿದರು.

LEAVE A REPLY

Please enter your comment!
Please enter your name here