ದಯಾಮರಣ ನೀಡಿ ಇಲ್ಲವಾದರೆ ಉದ್ಯೋಗ ಕೊಡಿ.

0
186

ಲಿಂಗಸುಗೂರು: ದೇಶದಲ್ಲಿ ಚಿನ್ನ ಉತ್ಪಾದನೆ ಮಾಡುವ ಏಕೈಕ ಚಿನ್ನದ ಗಣಿ, ಈ ಚಿನ್ನದ ಗಣಿಯ ಕೋ- ಆಪರೇಟಿವ್ ಸ್ಟೋರ್ ನಲ್ಲಿ ಕೆಲಸ ಮಾಡುವ 37 ಜನರನ್ನು ಹಟ್ಟಿ ಚಿನ್ನದ ಗಣಿಯ ಆಡಳಿತ ಮಂಡಳಿ ಇವರು ಕೈಬಿಟ್ಟರುವದಕ್ಕೆ ಅಮರಣಾಂತ ಉಪವಾಸ ಮಾಡುತ್ತಿದ್ದಾರೆ.
470 ದಿನಗಳಿಂದ ಸತ್ಯಗ್ರಹ ಮಾಡಿಕೊಂಡು ಬಂದರೂ ಹಟ್ಟಿ ಚಿನ್ಬದ ಗಣಿ ಆಡಳಿತ ಮಂಡಳಿಯು ಕ್ಯಾರೆ ಎನ್ನದೆ ಇರುವದು ದುರದೃಷ್ಟ ಕರ ಸಂಗತಿ ಯಾಗಿದೆ. 37 ಜನ ಕಾರ್ಮಿಕರು ಸುಮಾರು15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದವರನ್ನು ಕಳೆದ ಎರಡು ವರ್ಷಗಳ ಹಿಂದೆ ಏಕಾಏಕಿ ಕೋ- ಆಪರೇಟಿವ್ ಸ್ಟೋರ್ ಕೆಲಸದಿಂದ ತೆಗೆದು ಹಾಕಲಾಗಿದೆ. ಇದರಿಂದ ಕಾರ್ಮಿಕರ ಕುಟುಂಬ ಬೀದಿ ಪಾಲಾದಂತಾಗಿದೆ.
ಇದರಿಂದ ನೊಂದ ಕಾರ್ಮಿಕರು ರಾಷ್ಟ್ರಪತಿಗಳಿಗೆ ದಯಾಮರಣ ಕೋರಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಕೆಲಸ ಕೊಡಿ ಇಲ್ಲವೆ ದಯಾಮರಣ ನೀಡಿ ಎಂದು ಇಂದಿನಿಂದ ಶ್ರೀನಿವಾಸ್, ಚಂದ್ರಶೇಖರ್, ಬಂದೇನವಾಜ್, ಏದುಮಿತ್ರ, ಎಚ್.‌ಬಸವರಾಜ್ ಚಿನ್ನದ ಗಣಿಯ ವಿರುದ್ದ ಆಮರಣಾಂತ ಉಪಾವಾಸ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here