ದಲಿತರ ಬಗ್ಗೆ ಕಾಲಜಿ ಇಲ್ಲದ “ಕೈ” ಸರ್ಕಾರ…ಆರೋಪ

0
193

ಮಂಡ್ಯ/ಮಳವಳ್ಳಿ: ಕಾಂಗ್ರೇಸ್ ಪಕ್ಷ ಅಧಿಕಾರದಲ್ಲಿದ್ದು ದಲಿತರನ್ನು ಉಪಮುಖ್ಯಮಂತ್ರಿ ಮಾಡದೆ ಇರುವುದು ದಲಿತರ ಮೇಲೆ ಎಷ್ಟು ಕಾಳಜಿ ಇದೆ ಎಂದು ತಿಳಿಯುತ್ತೆ ಎಂದು ಮಾಜಿಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.
ಮಳವಳ್ಳಿ ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ನಮ್ಮ ಪಕ್ಷ ಅಧಿಕಾರದಲ್ಲಿ ಪ್ರಸ್ತುತದಲ್ಲಿ ಇಲ್ಲ ನೀವು ಇದ್ದೀರಿ ಮುಖ್ಯಮಂತ್ರಿ ಸ್ಥಾನ ಬೇಡ ಕನಿಷ್ಠ ದಲಿತರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿ ನಿಮ್ಮ ಪಕ್ಕದಲ್ಲಿ ಇಟ್ಟುಕೊಳ್ಳಬಾರದೇ ಸಿದ್ದರಾಮಯ್ಯರವರೇ ಎಂದು ಪ್ರಶ್ನಿಸಿದ್ದಾರೆ. ದಲಿತರ ಮತವನ್ನು ಹೆಚ್ಚು ಪಡೆದು ದಲಿತರನ್ನು ಏಕೆ ಕಡೆಗಣಿಸಿದರೆ. ನಾವು ಅಧಿಕಾರಕ್ಕೆ ಬಂದರೆ ದಲಿತರನ್ನು ಉಪಮುಖ್ಯಮಂತ್ರಿ ನೀಡುವುದು ಗ್ಯಾರಂಟಿ ಎಂದರು. ಇದಲ್ಲದೆ ನಿನ್ನೆ ಬೆಂಗಳೂರು ಅರಮನೆ ಮೈದಾನದಲ್ಲಿ ನಡೆದ ದಲಿತರನಡೆ ಕುಮಾರಣ್ಣ ಕಡೆಗೆ ಎಂಬ ಸಮಾವೇಶಕ್ಕೆ ಆಗಮಿಸಿದ್ದ ಮಳವಳ್ಳಿ ಕ್ಷೇತ್ರದ ಜನತೆಗೆ ಅಭಿನಂದನೆ ಸಲ್ಲಿಸಿದರು.
ಗೋಷ್ಠಿಯಲ್ಲಿ ಜೆಡಿಎಸ್ ಪಕ್ಷದ ಕಾರ್ಯದರ್ಶಿ ದುಗ್ಗನಹಳ್ಳಿ ನಾಗರಾಜು, ಕಾರ್ಯಾಧ್ಯಕ್ಷ ಪುಟ್ಟಬುದ್ದಿ, ಮಾಲೇಗೌಡ ಸೇರಿದಂತೆ ಮತ್ತಿತರರು ಇದ್ದರು.

LEAVE A REPLY

Please enter your comment!
Please enter your name here