ದಸರಾ ಬೊಂಬೆ ಮನೆ..

0
193

ಬೆಂಗಳೂರು/ಮಹದೇವಪುರ:- ನಾಡಹಬ್ಬ ದಸರೆಯ ಅಂಗವಾಗಿ ಮಹದೇವಪುರ ಕ್ಷೇತ್ರದ ರಾಮಗೊಂಡನಹಳ್ಳಿಯ ಮುನಿರಾಜು ಎಂಬವರ ರೈತ ಕುಟುಂಬವೊಂದು ಪೌರಾಣಿಕ ಸನ್ನಿವೇಶಗಳು, ಹಾಗೂ ಮುಕ್ಕೋಟಿ ದೇವತೆಗಳ ಬೊಂಬೆಗಳನ್ನು ತಮ್ಮ ಮನೆಯಲ್ಲಿ ಕುಳ್ಳರಿಸಿ ಅಲಂಕರಿಸುವ ಮೂಲಕ ಜನ ಮನ ಸೆಳೆದಿದ್ದಾರೆ.
ವೈಟ್ ಫೀಲ್ಡಿನ ರಾಮಗೊಂಡನಹಳ್ಳಿಯ ಮುನಿರಾಜು ರವರು ಕಳೆದ 6ವರ್ಷಗಳಿಂದ ದಸರಾ ಹಬ್ಬದ ಪ್ರಯುಕ್ತ ಬೊಂಬೆಗಳನ್ನು ಕುಳ್ಳರಿಸಿ ವಿಶೇಷ ರೀತಿಯಲ್ಲಿ ದಸರೆಯ ಆಚರಣೆ ಮಾಡುತ್ತಿದ್ದಾರೆ. ದೇಶದ ರೈತರು, ಜನರು ಹಾಗು ಸೈನಿಕರಿಗೆ ಒಳಿತಾಗಲಿ ಎಂದು ಬೇಡಿಕೊಳ್ಳುವ ಸಲುವಾಗಿಯೂ ಸಹ ಹಬ್ಬ ಆಚರಿಸುತ್ತಿರುವುದಾಗಿ ಮುನಿರಾಜು ತಿಳಿಸಿದ್ದಾರೆ. ಇನ್ನು ಬೊಂಬೆಗಳ ಸಾಲಿನಲ್ಲಿ ದೇವತೆಗಳ ವಿಶಿಷ್ಟ ಅವತಾರಗಳು, ಬ್ರಹ್ಮ, ವಿಷ್ಣು ಮಹೇಶ್ವರರು, ಅಷ್ಟ ಲಕ್ಷ್ಮೀಯರು, ನವ ನಾಯಕಿಯರು, ರಾಮಪಟ್ಟಾಭಿಷೇಕ, ಸೀತಾ ಸ್ವಯಂವರದಂತಹ ಪೌರಾಣಿಕತೆಯ ಮತ್ತರ ಘಟ್ಟಗಳು, ತ್ರೇತಾಯುಗ ಹಾಗು ದೌಪರಯುಗಗಳಲ್ಲಿ ಘತಿಸಿ ಹೋದ ಘಟನೆಗಳನ್ನು ಹೋಲುವ ಪ್ರಾಥ್ಯಕ್ಷಿಯನ್ನು ಇರಿಸಿದ್ದು, ಇಂದಿನ ನವ ಪೀಳಿಗೆಗೆ ನೀತಿ ಸಂದೇಶ ಸಾರುವ ಉದ್ದೇಶ ಹಾಗು ಸಂಸ್ಕೃತಿಯನ್ನು ಪಸರಿಸುವ ಧ್ಯೇಯದೊಂದಿಗೆ ಹೆಜ್ಜೆಯಿಟ್ಟಿದ್ದೇವೆ,
ಈ ರೈತ ಕುಟುಂಬದ ವಿಶಿಷ್ಟ ಆಚರಣೆಗೆ ನೆರೆಹೊರೆಯವರೂ ಸಹ ಪ್ರಶಂಸೆ ವ್ಯಕ್ತಪಡಿಸಿದ್ದು ಕಣ್ಣಿಗೆ ಹಬ್ಬದಂತಿರುವ ಈ ಬೊಂಬೆಗಳ ಮೇಳಕ್ಕೆ ನೂರಾರು ಸಂಖ್ಯೆಯಲ್ಲಿ ಭಾಗವಹಿಸುತ್ತಿದ್ದಾರೆ.

LEAVE A REPLY

Please enter your comment!
Please enter your name here