ದಿಕ್ಕು ತಪ್ಪಿಸುವ ಲೋ(ಕೋ)ಪಯೋಗಿ ನಾಮಫಲಕ

0
301

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ : ಲೊಕೋಪಯೋಗಿ ಇಲಾಖೆಯಿಂದ ಗ್ರಾಮಗಳಿಗೆ ತೆರಳಲು ಅಳವಡಿಸಿರುವ ತಪ್ಪು ಮಾಹಿತಿ ನಾಮ ಫಲಕಗಳಿಂದ ಗ್ರಾಮೀಣ ಭಾಗದ ಗ್ರಾಮಗಳಿಗೆ ತೆರಳಲು ಸರಿಯಾದ ಮಾಹಿತಿ ಇಲ್ಲದೆ ಜನರು ತೊಂದರೆಗಳು ಅನುಭವಿಸುವಂತಾಗಿ ಎಂದು ಅಲಸೂರು ದಿನ್ನೆ ಗ್ರಾಮದ ನಿವಾಸಿ ಮುನಿರಾಜು ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಿನ ತುಮ್ಮನಹಳ್ಳಿ ರಸ್ತೆಯಲ್ಲಿ ವಾಹನಗಳ ಮೂಲಕ ಗುಡ್ಲನರಸಿಂಹನಹಳ್ಳಿ ದಾಟಿ ಮುಂದೆ ಸಾಗಿದರೆ ನಾಲ್ಕು ದಿಕ್ಕಿಗೆ ತೆರಳುವಂತ ಒಂದು ವೃತ್ತ ಉತ್ತರಕ್ಕೆ ಗೊರಮಡಗು ಪೂರ್ವಕ್ಕೆ ಅಲಸೂರು ದಿನ್ನೆ ದಕ್ಷಿಣಕ್ಕೆ ತುಮ್ಮನಹಳ್ಳಿಯ ಕಡೆ ರಸ್ತೆ ಸಾಗುತ್ತದೆ.

ಲೋಕೋಪಯೋಗಿ ಇಲಾಖೆಯಿಂದ ಅಳವಡಿಸಿರುವ ನಾಮ ಫಲಕ ಗೊರಮೊಡಗು ಕಡೆ ಹೋಗುವಂತ ದಿಕ್ಕಿಗೆ ಶಿಡ್ಲಘಟ್ಟದ ಹೆಸರು ಇರುವ ಮಾರ್ಗ ತೋರಿಸಿದ್ದಾರೆ. ರಾತ್ರಿ ವೇಳೆಯಲ್ಲಿ ಆ ಮಾರ್ಗ ಹಿಡಿದು ಹೊರಟರೆ ಅಕ್ಕ ಪಕ್ಕದ ಹಳ್ಳಿಗಳನ್ನು ಸುತ್ತು ಹಾಕಿಕೊಂಡು ಇರಬೇಕಾಗುತ್ತದೆ.

ಒಂದು ವೇಳೆ ವಾಹನದಲ್ಲಿ ಪೆಟ್ರೋಲ್ ಕಡಿಮೆ ಇದ್ದು ಖಾಲಿಯಾದರೆ ಮದ್ಯ ರಾತ್ರಿಯಲ್ಲಿ ಅಪಾಯಗಳಿಗೆ ತುತ್ತಾಗುವಂತಹ ರೀತಿಯಲ್ಲಿ ಮಾರ್ಗ ಸೂಚಿ ಹಾಕಿರುವುದನ್ನು ಈ ಕೊಡಲೇ ಬದಲಾಯಿಸಿ ಸರಿಯಾದ ನಾಮ ಫಲಕ ಹಾಕಬೇಕೆಂದು ಆ ಭಾಗದ ಸಾರ್ವಜನಿಕರು ವತ್ತಾಯಿಸುತ್ತಿದ್ದಾರೆ.

ವರದಿ:
ಈಧರೆ ಪ್ರಕಾಶ್,
ಶಿಡ್ಲಘಟ್ಟ

LEAVE A REPLY

Please enter your comment!
Please enter your name here