ದುಷ್ಕರ್ಮಿಗಳ ವಿರುದ್ಧ ಪ್ರತಿಭಟನೆ ತಯಾರಿ.

0
243

ಬಳ್ಳಾರಿ /ಹೊಸಪೇಟೆ:ವಿಶ್ವ ಪ್ರಸಿದ್ದ ಹಂಪಿಯಲ್ಲಿ ದುಷ್ಕರ್ಮಿಗಳು ವಿಗ್ರಹ ವಿರೂಪಗೊಳಿಸಿದ ಘಟನೆಯನ್ನು ಖಂಡಿಸಿ, ಜೂಲೈ ೧೦ ರಂದು ಪ್ರತಿಭಟನೆ ನಡೆಸಲು ವಿಜಯಪುರ ಸ್ಮಾರಕ ಸಂಸ್ಕೃತಿ ರಕ್ಷಣಾ ವೇದಿಕೆ ಸಜ್ಜಾಗಿದೆ.

ಈ ಕುರಿತು ಹಂಪಿಯ ರಾಜ್ಯ ಪುರಾತತ್ವ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಿದ ವೇದಿಕೆ ಈ ಹಿಂದೆಯಿಂದಲೂ ಸಹ ಸಾಕಷ್ಟು ಸ್ಮಾರಕಗಳನ್ನು ವಿರೂಪಗೊಳಿಸಲಾಗುತ್ತಿದೆ. ಪದೇ, ಪದೇ ವಿಗ್ರಹಗಳು, ಸ್ಮಾರಕಗಳ ವಿರೂಪಕ್ಕೆ ಗುರಿಯಾಗುತ್ತಿರುವುದನ್ನು ಖಂಡಿಸಿ ನಾವು ಸಾಕಷ್ಟು ಬಾರಿ ಹೋರಾಟ ನಡೆಸಿ, ಮನವಿ ಪತ್ರ ನೀಡಿದರೂ ಸಹ ಯಾವುದೇ ಪ್ರಯೋಜನವಾಗಿಲ್ಲ. ಪ್ರಕರಣಗಳು ದಾಖಲಾಗಿದ್ದು ಹೆಸರಿಗಷ್ಟೆಯಾಗಿವೆ. ಆದರೆ ಇದುವರೆಗೆ ಯಾವುದೇ ಆರೋಪಿಗಳನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಿದ್ದು ಉದಾಹರಣೆ ಇಲ್ಲವಾಗಿದೆ. ಸ್ಮಾರಕಗಳ ಸಂರಕ್ಷಣೆಗೆ ಕೇಂದ್ರ, ರಾಜ್ಯ ಪುರಾತತ್ತ್ವ ಇಲಾಖೆ ಮತ್ತು ಹಂಪಿ ಅಭಿವೃದ್ಧಿ ಪ್ರಾಧಿಕಾರ ಇದ್ದರೂ ಸಹ ಪ್ರಯೋಜನವಿಲ್ಲದಂತಾಗಿದೆ. ಈ ಕೂಡಲೇ ಸ್ಮಾರಕ ಮತ್ತು ವಿಗ್ರಹಗಳ ಸಂರಕ್ಷಣೆಗೆ ಸಂಬಂಧಪಟ್ಟ ಇಲಾಖೆ ಮುಂದಾಗಬೇಕಿದೆ ಎಂದು ಸಂಘಟನಾಕಾರರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here