ದೇವೇಗೌಡರ ಹುಟ್ಟುಹಬ್ಬ ಆಚರಣೆ

0
181

ಚಿಕ್ಕಬಳ್ಳಾಪುರ/ಗುಡಿಬಂಡೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೆಗೌಡರವರ ೮೫ನೇ ಹುಟ್ಟುಹಬ್ಬದ ಅಂಗವಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು-ಹಂಪಲುಗಳನ್ನು ವಿತರಣೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಜೆಡಿಎಸ್ ಮುಖಂಡರಾದ ಗುಂಜೂರು ಶ್ರೀನಿವಾಸರೆಡ್ಡಿ, ಪ್ರಧಾನಿಗಳಾಗಿದ್ದ ದೇವೆಗೌಡರು ರಾಷ್ಟ್ರದ ಮುತ್ಸದಿ ರಾಜಕಾರಣಿಯಾಗಿದ್ದು ಬಡವರ ಏಳಿಗೆಯೇ ಅವರ ಗುರಿಯಾಗಿತ್ತು. ಅವರ ಮಾರ್ಗದರ್ಶನ ಎಲ್ಲ ರಾಜಕೀಯ ಮುಖಂಡರಿಗೆ ಅಗತ್ಯವಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಜೆಡಿಎಸ್ ಪಕ್ಷ ಬಲಗೊಳಿಸಲು ದೇವೇಗೌಡರಿಗೆ ದೇವರು ಆಯಸ್ಸು, ಆರೋಗ್ಯ ನೀಡಲಿ. ಜನರು ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ರಾಜ್ಯದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಇಂದಿಗೂ ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ರಾಜ್ಯದ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ರಾಜಕಾರಣದಲ್ಲಿ ದೇವೇಗೌಡರದ್ದು ಅಪರೂಪದ ವ್ಯಕ್ತಿತ್ವ ಎಂದು ಬಣ್ಣಿಸಿದರು.

ನಂತರ ಮುಖಂಡರಾದ ಗೂಳೂರು ಲಕ್ಷ್ಮೀನಾರಾಯಣ ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಿಯಾಗಿ ಆಡಳಿತ ನಡೆಸಿದ ಎಚ್.ಡಿ.ದೇವೇಗೌಡರು ಸದಾ ಜನಪರವಾಗಿ ಕೆಲಸ ಮಾಡಿದವರು ಹಾಗು ಎಂದೂ ಕೂಡ ತಾನು ಪ್ರಧಾನಿ ಎಂದು ಮೆರೆಯಲಿಲ್ಲ. ಜನಸಾಮಾನ್ಯರ ಹಾಗೂ ರೈತ ಪರ ಕಾಳಜಿಯೊಂದಿಗೆ ರಾಜಕಾರಣ ಮಾಡಿದ ಮಹಾನ್ ವ್ಯಕ್ತಿ ಎಂದರೇ ತಪ್ಪಾಗಲಾರದು ಎಂದರು.

ಈ ವೇಳೆ ಜೆಡಿಎಸ್ ಪಕ್ಷದ ಮುಖಂಡರಾದ ಎನ್.ಜಗದೀಶ್, ಮಾಚನಹಳ್ಳಿ ಈಶ್ವರರೆಡ್ಡಿ, ರಾಮಚಂದ್ರಯ್ಯ, ಜಯರಾಮರೆಡ್ಡಿ, ಸಿ.ಆರ್.ಗಂಗುಲಪ್ಪ, ಜೂಲಪಾಳ್ಯ ಗ್ರಾ.ಪಂ. ಸದಸ್ಯ ರವಿ, ಭಾಸ್ಕರರೆಡ್ಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು

 

LEAVE A REPLY

Please enter your comment!
Please enter your name here