ಸ್ಮಾರಕಗಳ ವೀಕ್ಷಣೆಗೆ ನಸುಕಿನಿಂದಲೇ ಅವಕಾಶ

0
164

ಬಳ್ಳಾರಿ /ಹೊಸಪೇಟೆ:ಇನ್ಮುಂದೆ ಇತಿಹಾಸ ಪ್ರಸಿದ್ಧ ಹಂಪಿಗೆ ಬೇಟಿ ನೀಡುವ ಪ್ರವಾಸಿಗರು, ಸ್ಮಾರಕಗಳ ವೀಕ್ಷಣೆಗೆ ಬೆಳಿಗ್ಗೆ 8ರವರಗೆ ಕಾಯಬೇಕಿಲ್ಲ. ಬದಲಾಗಿ ನಸುಕಿನಲ್ಲಿಯೇ ವೀಕ್ಷಣೆ ಮಾಡುವಂತ ಅವಕಾಶವನ್ನು ಕಲ್ಪಿಸಲಾಗಿದೆ.ಹೌದು! ದೇಶದ-ವಿದೇಶದ ಪ್ರವಾಸಿಗರ ಅನುಕೂಲಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ತನ್ನ ವೇಳೆಯಲ್ಲಿ ಬದಲಾವಣೆ ತಂದಿದ್ದು, ಪ್ರಸಿದ್ಧ ವಿಜಯ ವಿಠಲ ದೇಗುಲ ಹಾಗೂ ಕಮಲ ಮಹಲ್ ಮತ್ತು ಗಜಶಾಲೆ ವೀಕ್ಷಣೆಗಾಗಿ ಸೂರ್ಯೋದಯದಿಂದ (ಬೆಳಿಗ್ಗೆ 6ರಿಂದ) ಸಂಜೆ ಸೂರ್ಯಾಸ್ತಮ (ಸಂಜೆ 6ವರಗೆ) ಪ್ರವೇಶಕ್ಕೆ ಮುಕ್ತ ಅವಕಾಶವನ್ನು ಮಾಡಿಕೊಟ್ಟಿದೆ.
ದೂರ-ದೂರದ ಪ್ರದೇಶದಿಂದ ಹಂಪಿಗೆ ಬೇಟಿ ನೀಡುವ ಪ್ರವಾಸಿಗರಿಗೆ ಮುಂದಿನ ಪ್ರವಾಸಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆ ವೇಳೆ ಬದಲಾವಣೆ ಮಾಡಿದೆ. ಬೆಳಿಗ್ಗೆ 8ರಿಂದ ಪ್ರವೇಶದ ಸಮಯದ ಬದಲಾಗಿ ಇದೀಗ ನಸುಕಿನಲ್ಲಿಯೇ ವೀಕ್ಷಣೆ ಮಾಡುವ ಅವಕಾಶವನ್ನು ಪ್ರವಾಸಿಗರಿಗೆ ಒದಗಿಸಿದೆ.ಕಳೆದ ಮೂರು ದಿನಗಳಿಂದ ವೇಳೆಯನ್ನು ಬದಲಾವಣೆ ಮಾಡಿದ್ದು, ಪ್ರವಾಸಿಗರು ಸ್ಮಾರಕಗಳ ಬಳಿ ಸೂರ್ಯೋದಯದ ವೈಭವವನ್ನು ಕಣ್ತುಂಬಿ ಕೊಳ್ಳುತ್ತಿದ್ದಾರೆ. ಹಿಂದೆ ಸೂರ್ಯಸ್ತಮ ಮಾತ್ರ ವೀಕ್ಷಣೆ ಮಾಡುತ್ತಿದ್ದ ಪ್ರವಾಸಿಗರು, ಇನ್ಮುಂದೆ ಸೂರ್ಯೋದಯ ರಮಣೀಯ ದೃಶ್ಯಗಳನ್ನು ವೀಕ್ಷಣೆ ಮಾಡಿ, ಖುಷಿ ಪಡೆಬಹುದಾಗಿದೆ. ​

LEAVE A REPLY

Please enter your comment!
Please enter your name here