ದೇಶವ್ಯಾಪಿ ರೈತರಿಗೆ ದಿನವಿಡೀ ವಿದ್ಯುತ್

0
120

ಮಂಡ್ಯ/ ಮಳವಳ್ಳಿ: ಬರಗಾಲದಿಂದ ರೈತರಿಗೆ ಮಳೆ ಬೆಳೆ ಇಲ್ಲದೆ ಕಂಗಾಲಾಗಿರುವ ಬಗ್ಗೆ ಪ್ರಧಾನಿ ಮೋದಿ ಮನಗೊಂಡು ದೇಶವ್ಯಾಪ್ತಿ ರೈತರ ಜಮೀನಿಗೆ 24 ಗಂಟೆಗಳ ಕಾಲ ವಿದ್ಯುತ್ ನೀಡುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ತಿಳಿಸಿದರು.

ಮಳವಳ್ಳಿ ತಾಲ್ಲೂಕಿನ ಕುಂದೂರುಬೆಟ್ಟ – ತೆಂಕಹಳ್ಳಿ ಗ್ರಾಮದಲ್ಲಿ ಸುಕ್ಷೇತ್ರ ರಷಸಿದ್ದೇಶ್ವರ ಮಠದ ಶ್ರೀ ಗುರುಸ್ವಾಮಿರವರ ಸಂಸ್ಮರಣ ಮಹೋತ್ಸವ ಕಾಯ೯ಕ್ರಮ ವನ್ನು ಚಾಲನೆ ನೀಡಿ ಮಾತನಾಡಿದ ಅವರು. ಇದೇ ತಿಂಗಳು 20 ರಂದು ನವದೆಹಲಿಯಲ್ಲಿ ನಡೆಯಲಿರುವ ಬಸವ ಜಯಂತಿ ಕಾಯ೯ಕ್ರಮ ದಲ್ಲಿ ಪ್ರಧಾನಿ ಮೋದಿ ಚಾಲನೆ ನೀಡಲಿದ್ದು, ಈ ಸಂದಭ೯ದಲ್ಲಿ ನಡೆದಾಡುವ ದೇವರು ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ರವರ 110 ನೇ ಜಯಂತಿ ಆಚರಣೆ ಯನ್ನು ತುಮಕೂರಿನಲ್ಲಿ ಪ್ರಧಾನಿ ನೇತೃತ್ವದಲ್ಲಿ ನಡೆಯಲಿದ್ದು . ದಿನಾಂಕವನ್ನು ಪ್ರಧಾನಿ ಮೋದಿರವರು ತಿಳಿಸಲಿದ್ದಾರೆ ಎಂದರು. ವಿಶ್ವದಲ್ಲೇ ಅತಿ ಹೆಚ್ಚು ಸಾಧು – ಸಂತರು ಇರುವ ದೇಶ ನಮ್ಮದು. ಪ್ರತಿ ಮಠ ಮಾನ್ಯದಲ್ಲೂ ದಾಸೋಹ . ಶಿಕ್ಷಣ ಕಡ್ಡಾಯವಾಗಿ ನಡೆಯುತ್ತಲ್ಲೇ ಇರುತ್ತದೆ ಎಂದರು. ಮುಂದಿನ ದಿನಗಳಲ್ಲಿ ನಿಮ್ಮೆಲ್ಲರೂ ಆಶೀರ್ವಾದವಿದ್ದರೆ ರೈತರ ಸಂಕಷ್ಟವನ್ನು ಪರಿಹಾರ ಮಾಡುವುದಾಗಿ ಭರವಸೆ ನೀಡಿದರು.

ಕಾಯ೯ಕ್ರಮದಲ್ಲಿ ಸುತ್ತೂರು ಶ್ರೀಗಳು. ಕನಕಪುರ ಶ್ರೀಗಳು, ಮಾಜಿ ಸಚಿವ ಬಿ.ಸೋಮಶೇಖರ್. ವಿಧಾನಪರಿಷತ್ತು ಉಪಸಭಾಪತಿ ಮರಿತಿಬ್ಬೇಗೌಡ. ಮಾಜಿ ಶಾಸಕ ಡಾ.ಕೆ. ಅನ್ನದಾನಿ. ಸೇರಿದಂತೆ ಎಲ್ಲಾ ಮಠಾದೀಶರು ಹಾಜರಿದ್ದರು

LEAVE A REPLY

Please enter your comment!
Please enter your name here