ದ್ವಾಮವ್ವನಿಗೆ ನೂರೆಂಟು ಕೊಡದಿಂದ ಅಭಿಷೇಕ.

0
150

ಬಳ್ಳಾರಿ:ಈ ಬಾರಿ ನೀರಾವರಿಯಾಶ್ರಿತ ಪ್ರದೇಶದಲ್ಲೂ ಭೀಕರ ಬರಗಾಲ ಆವರಿಸಿದ್ದು ಕಪ್ಪಗಲ್ಲು ಗ್ರಾಮದ ಭಕ್ತನೊಬ್ಬ 108 ಕೊಡದಿಂದ ಗ್ರಾಮದೇವತೆ ದ್ವಾಮವ್ವನಿಗೆ ಅಭಿಷೇಕ ಮಾಡಿದ್ದಾನೆ.

ಸದರಿ ಭಕ್ತನ ಸಂಕಲ್ಪಕ್ಕೆ ಇಡೀ ಗ್ರಾಮವೇ ಬೆಂಬಲ ವ್ಯಕ್ತಪಡಿಸಿದ್ದು, ಶ್ರಾವಣ ಶನಿವಾರದ ನಿಮಿತ್ತ ಎಲ್ಲರೂ ಮಡಿಯಿಂದ, ಹೊಸ ಬಟ್ಟೆ ತೊಟ್ಟು ಗ್ರಾಮದಲ್ಲಿ ಮೆರವಣಿಗೆ ನಡೆಸಿದರು.
ಮಹಿಳೆಯರು ಸಹ ಕುಂಭಕಳಸದೊಂದಿಗೆ ಗ್ರಾಮದ ಬೀದಿಗಳಲ್ಲಿ ಸಂಚರಿಸಿ ದ್ಯಾಮವ್ವನಿಗೆ ಹರಕೆ ಸಲ್ಲಿಸಿ, ಮಳೆ ಸುರಿಸುವಂತೆ ಪ್ರಾರ್ಥಿಸಿದ್ರು.
ತಾಷಾರಾಂ ವಾದ್ಯಗಳೊಂದಿಗೆ ಶ್ರೀ ದ್ಯಾಮವ್ಬನ ಗುಡಿಗೆ ಆಗಮಿಸಿದ ಭಕ್ತರು ಬರ ನೀಗಲು ಮಳೆ ಬಂದರೆ ಸಾಕು. ದನ-ಕರುಗಳಿಗೆ ಮೇವು ಮತ್ತು ಗ್ರಾಮಸ್ಥರಿಗೆ ಕುಡಿವ ನೀರು ಸೇರಿದಂತೆ ಕೃಷಿಗೂ ಅನುಕೂಲವಾಗುತ್ತದೆ. ಇಲ್ಲಾಂದ್ರೆ, ಊರು ಬಿಡಬೇಕಾದೀತೆಂಬ ಭಯದಿಂದ ಗ್ರಾಮದೇವತೆಗೆ ಅಭಿಷೇಕ ಮಾಡಿರುವುದಾಗಿ ಗ್ರಾಮಸ್ಥರು ತಿಳಿಸಿದ್ದಾರೆ.

ಮಳೆಗಾಗಿ ದೇವರು ಮೂರಹೋದ ಗ್ರಾಮಸ್ಥರು. (ಬಳ್ಳಾರಿ ತಾಲೂಕಿನ ಕಪ್ಪಗಲ್ಲ್ ಗ್ರಾಮದಲ್ಲಿ ಶನಿವಾರ ಗ್ರಾಮ ದೇವತೆ ದ್ಯಾವಮ್ಮನಿಗೆ ಓಬ್ಬೆ ವ್ಯಕ್ತಿ ನೊಂದಿಗೆ ಬಾವಿಯಿಂದ101ಕೋಡ.ನೀರು ಹಾಕಿಪೂಜೆಸಲ್ಲಸಿ ಗ್ರಾಮದ ಜನತೆಗೆ ಅನ್ನ ದಾಸೋಹ ವನ್ನು ಮಾಡಿದರು. ಗ್ರಾಮದ ಯಾಲ್ಲ ಮಹಿಳೆಯರು ಕಳಸದೋಂದೆಗೆ ಪೂಜೆ ಸಲ್ಲಿಸಿದರು.

LEAVE A REPLY

Please enter your comment!
Please enter your name here