ದ್ವಿಚಕ್ರ ವಾಹನ ಕಳ್ಳನ ಬಂಧನ..

0
479

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ಕೋಲಾರ ಕ್ರಾಸ್ ಬಳಿ ಇಬ್ಬರು ದ್ವಿಚಕ್ರ ವಾಹನದಲ್ಲಿ ಅನುಮಾನಸ್ಪದವಾಗಿ ಕಂಡುಬಂದ ಸೋನು ( ೨೧) ಮತ್ತಿಕೆರೆ ಯಶವಂತಪುರ ಬೆಂಗಳೂರು, ಹಾಗೂ ತನ್ನೊಂದಿಗೆ ಇದ್ದ ಓಡಿ ಹೋದ ಆಸಾಮಿಯ ತಬರೇಜ್ (೨೦) ನೆಲ್ಲೂರು ಜಿಲ್ಲೆ ಆಂಧ್ರಪ್ರದೇಶ ಎಂದು ತಿಳಿದುಬಂದಿದು . ಚಿಂತಾಮಣಿ ನಗರ ಠಾಣೆಯಲ್ಲಿ ವಿಚಾರಣೆ ಮಾಡಲಾಗಿ ಇಬ್ಬರೂ ದ್ವಿಚಕ್ರವಾಹನ ಕಳ್ಳರೆಂಬ ಸತ್ಯ ಬಯಲಾಗಿದೆ.

ಆರೋಪಿಯನ್ನು ಕೂಲಂಕುಷವಾಗಿ ವಿಚಾರಣೆ ಮಾಡಿ ಆತನು ನೀಡಿದ ಸುಳುವಿನ ಮೇರೆಗೆ ಆತನು ಕಳೆದ ಮೂರು ತಿಂಗಳಿನಿಂದ ನಗರದ ಚಿಂತಾಮಣಿ , ಬೆಂಗಳೂರು ಮುಂತಾದ ಕಡೆಗಳಲ್ಲಿ ಕಳುವು ಮಾಡಿದ್ದ ಒಂದು ಟಿ.ವಿ.ಎಸ್ ಅಪಾಚಿ , ಒಂದು ಯಮಹಾ ಕ್ರಕ್ಸ್ , ಒಂದು ಬಜಾಜ್ ಪ್ಲಾಟಿನಾ, ಒಂದು ಹೊಂಡಾ ಆಕ್ಟಿವಾ,ಒಂದು ಹೊಂಡಾಡಿಯೋ ವಾಹನ ಹಾಗೂ ಒಂದು ಟಿ.ವಿ.ಎಸ್ ಸ್ಕೂಟಿ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿರುತ್ತಾರೆ.ಪತ್ತೆ ಯಾಗಿರುವ ಈ ಎಲ್ಲಾ ದ್ವಿಚಕ್ರ ವಾಹನಗಳ ಬೆಲೆ ಅಂದಾಜು ಮೂರು ಲಕ್ಷ ಎಂದು ಅಂದಾಜಿಸಲಾಗಿದೆ.

ಆರೋಪಿಯು ಕುಖ್ಯಾತ ದ್ವಿಚಕ್ರ ವಾಹನಗಳ ಕಳ್ಳನಾಗಿದ್ದು. ಚಿಂತಾಮಣಿ ಬೆಂಗಳೂರಿನ ವಿವಿಧ ಬಡಾವಣೆಗಳಲ್ಲಿ ಅಪಾಂಟ್ ಮೆಂಟ್ ಗಳ ಬಳಿ ಮನೆಗಳ ನಿಲ್ಲಿಸಿರುವ ದ್ವಿಚಕ್ರ ವಾಹನಗಳನ್ನು ಕಳುವು ಮಾಡುವುದರಲ್ಲಿ ನಿಪುಣನಾಗಿರುತ್ತಾನೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಎಸ್ಪಿ .ಕಾರ್ತಿಕ್ ರೆಡ್ಡಿ ರವರ ನಿರ್ದೇಶನದಲ್ಲಿ ಮೇರೆಗೆ ಚಿಂತಾಮಣಿ ಉಪವಿಭಾಗದ ಡಿವೈಎಸ್ಪಿ. ನಾಗೇಶ್ ಮಾರ್ಗದರ್ಶನದಲ್ಲಿ ಹಾಗೂ ಚಿಂತಾಮಣಿ ನಗರದ ಇನ್ಸ್‌ಪೆಕ್ಟರ್ ಪಿ.ಬಿ ಹನುಮಂತಪ್ಪ ನೇತೃತ್ವದಲ್ಲಿ ‌ನಗರ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ ಮತ್ತು ಸಿಬ್ಬಂದಿ ವಿ ಸುಬ್ರಮಣಿ ,ನರಸಿಂಹಮೂರ್ತಿ, ದೇವರಜ ,ನಂದೀಶ್ ,ಅರುಣ್ ಈ ದ್ವಿಚಕ್ರ ವಾಹನಗಳ ಕಳುವು ಪ್ರಕರಣಗಳನ್ನು ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ:ಇಮ್ರಾನ್ ಖಾನ್

LEAVE A REPLY

Please enter your comment!
Please enter your name here