ಧನ್ಯತೆ ಮೆರೆದ ರೈತ..

0
188

ಬಳ್ಳಾರಿ /ಹೂವಿನಹಡಗಲಿ:ಮಗನ ಸಾವಿನ ನಂತರ ನೇತ್ರದಾನ ಮಾಡಿ ಧನ್ಯತೆ ಮೆರೆದ ರೈತ-ಹಡಗಲಿ ತಾಲೂಕು ಬೂದನೂರಿನಲ್ಲಿ ಘಟನೆ.

ಹೂವಿನಹಡಗಲಿ ತಾಲ್ಲೂಕು ಬೂದನೂರು ಗ್ರಾಮದ ಚೇತನಕುಮಾರ ಬ್ಯಾಲಹುಣಿಸಿ ಎಂಬ 21ವರ್ಷದ ವಿದ್ಯಾರ್ಥಿ ನಿಧನರಾದ ಹಿನ್ನೆಲೆಯಲ್ಲಿ ಮಗನ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ತಂದೆ ರೈತ ರೇವಣಸಿದ್ದಪ್ಪ ಮಾದರಿಯಾಗಿದ್ದಾರೆ.

ಹೂವಿನಹಡಗಲಿಯ ಜಿ.ಬಿ.ಆರ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿ.ಎ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಕಳೆದ ಐದು ದಿನಗಳ ಹಿಂದೆ ಶುದ್ಧ ಕುಡಿಯುವ ನೀರನ್ನು ತರಲು ದ್ವಿಚಕ್ರ ವಾಹನದಲ್ಲಿ ಹೊಳಲು ಗ್ರಾಮಕ್ಕೆ ತೆರಳಿದ್ದ. ಈ ಸಂಧರ್ಭದಲ್ಲಿ ಆಯತಪ್ಪಿ ಬಿದ್ದು ತಲೆಗೆ ಬಲವಾದ ಪೆಟ್ಟು ಬಿದ್ದಿತ್ತು. ಇದಕ್ಕಾಗಿ ದಾವಣಗೇರೆಯಲ್ಲಿ ಚಿಕಿತ್ಸೆಯನ್ನು ನೀಡಲಾಗಿತ್ತು.

ಆದರೆ ಇಂದು ಬುಧವಾರ ಬೆಳಿಗ್ಗೆ ಚೇತನ್ಕುಮಾರ್ ಗೆ ವಿಪರೀತ ತಲೆನೋವು ಕಾಣಿಸಿಕೊಂಡಿದೆ ಇದರಿಂದ ವಿಚಲಿತರಾದ ಪೋಷಕರು ಆತನನ್ನು ಮತ್ತೆ ಚಿಕಿತ್ಸೆಗಾಗಿ ದಾವಣಗೆರೆಗೆ ಕರೆದೊಯ್ಯುತ್ತಿದ್ದವೇಳೆ ದಾರಿ ಮಧ್ಯದಲ್ಲಿಯೇ ವಿದ್ಯಾರ್ಥಿ ಅಸುನೀಗುದ್ದಾನೆ.

ಈವೇಳೆ ಜೊತೆಯಲ್ಲಿಯೇ ಇದ್ದ ತಂದೆ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿದ್ದರೂ ಸಹ ಮಗ ಹೋದರೇನಾಯಿತು ಅವನ ಕಣ್ಣುಗಳನ್ನು ದಾನ ಮಾಡಿದರೆ ಅಂಧತ್ವದಲ್ಲಿರುವ ಮತ್ತೊಬ್ಬರು ಈ ಪ್ರಪಂಚವನ್ನು ನೋಡುತ್ತಾರೆ ಎಂದು ತಿಳಿದು ರಾಣೆಬೆನ್ನೂರಿನ ಕೆಲಗಾರ ಆಸ್ಪತ್ರೆಗೆ ತೆರಳಿ ಮಗನ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಧನ್ಯತೆ ಮೆರದಿದ್ದಾರೆ.

ಬುಧವಾರ ಸಂಜೆ ಸ್ವಗ್ರಾಮ ಬೂದನೂರಿನಲ್ಲಿ ವಿದ್ಯಾರ್ಥಿಯ ಅಂತ್ಯಕ್ರಿಯೆ ನೆರವೇರಿತು. ಗ್ರಾಮದ ಎಲ್ಲಾ ಶಾಲಾ ಮಕ್ಕಳು ಹಾಗೂ ಶಿಕ್ಷಕರು ವಿದ್ಯಾರ್ಥಿಯ ಅಂತಿಮ ದರ್ಶನ ಪಡೆದು ಗೌರವ ಸಲ್ಲಿಸಿದರು.

ವಿದ್ಯಾರ್ಥಿಯ ಸಾವಿನಿಂದ ಗ್ರಾಮದೆಲ್ಲೆಡೆ ನೀರವ ಮೌನ ಆವರಿಸಿತ್ತು. ಅಂತ್ಯಕ್ರಿಯೆಯಲ್ಲಿ ಗ್ರಾಮಸ್ಥರು ಸೇರಿದಂತೆ ಗಣ್ಯರು ಭಾಗಿಯಾಗಿದ್ದರು. ಮೃತ ವಿದ್ಯಾರ್ಥಿಯು ತಂದೆ ತಾಯಿ ಹಾಗೂ ಒಬ್ಬ ಸಹೋದರನನ್ನು ಅಗಲಿದ್ದಾನೆ

LEAVE A REPLY

Please enter your comment!
Please enter your name here