ಧರ್ಮಗಳ ನಡುವೆ ಸಂಘರ್ಷ ಬೇಡ

0
396

ಬೆಂಗಳೂರು/ಮಹದೇವಪುರ: ಶ್ರೀರಾಮನವಮಿ ಹಬ್ಬದ ಪ್ರಯುಕ್ತ ಹೂಡಿಯಲ್ಲಿಂದು ಗ್ರಾಮಸ್ಥರು ಮತ್ತು ಉತ್ತರ ಭಾರತ ಮೂಲದ ವಲಸಿಗರ ಜನ್ ಸಹಯೋಗ್ ಸಂಘಟನ್ ಸದಸ್ಯರು ಒಗ್ಗೂಡಿ ಶ್ರೀರಾಮನವಮಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು.

ರಾಮ ದೇವರ ವಿಗ್ರಹದ ಮೆರೆವಣಿಗೆ ಯೊಂದಿಗೆ ಬೈಕ್ ರಾ ಲಿ ನಡೆಸಿದರು. ಬಿಸಿಲ ಬೇಗೆಯಿಂದ ಬಳಲಿದ್ದ ಸಾರ್ವಜನಿಕರಿಗೆ ರಸ್ತೆ ಬದಿಯಲ್ಲಿ ಮಜ್ಜಿಗೆ, ಪಾನಕ ಮತ್ತು ಕೋಸಂಬರಿಯನ್ನು ಹಂಚಿ ಧಣಿವಾರಿಸುವ ಕಾರ್ಯ ಮಾಡಿದರು,
ಇದೇ ವೇಳೆ ಮಾತನಾಡಿದ ಜೆಎಸ್ಎಸ್ ಸಂಘಟನೆಯ ಸದಸ್ಯ ಬೀರ್ ಬಹದ್ದೂರು ಸಿಂಗ್ ರಾಮ ದೇವರು ಮಾನವ ಜನ್ಮದಲ್ಲಿ ಅವತರಿಸಿ ಸಕಲ ಕಷ್ಟ ಕಾರ್ಪಣ್ರ್ಯಗಳನ್ನು ಅನುಭವಿಸಿ, ಸಮಾಜದಲ್ಲಿ ಒಳಿತನ್ನು ಮೂಡಿಸುವ ಮತ್ತು ಕೆಟ್ಟದ್ದನ್ನು ಅಳಿಸುವ ಧ್ಯೇಯದೊಂದಿಗೆ ಅವರು ನಡೆಸಿದ ಜೀವನ ಮಾನವ ಕುಲಕ್ಕೆ ಸಂದೇಶವಾಗಿದೆ. ಅವರ ವ್ಯಕ್ತಿತ್ವ ಪ್ರತಿಯೊಬ್ಬ ಭಾರತೀಯನಿಗೂ ಮಾರ್ಗ ದರ್ಶನವಾಗಿದೆ ಎಂದರು. ಧರ್ಮಗಳ ನಡುವೆ ಸಂಘರ್ಷ ತೊರೆದು ಸೌಹಾರ್ದತೆಯನ್ನು ಮೂಡಿಸಿಕೊಂಡು ಸಮಾಜದಲ್ಲಿ ಶಾಂತಿ ನೆಲೆಸುವೆಡೆಗೆ ಪ್ರತಿಯೊಬ್ಬರು ಸಾಗಬೇಕೆಂದು ತಿಳಿಸಿದರು.ದೇಶಾದ್ಯಂತ ರಾಮಮಂದಿರಗಳಲ್ಲಿ ರಾಮನಿಗೆ ಇಂದು ವಿಶೇಷ ಪೂಜೆಸಲ್ಲಿಸಲಾಗಿದ್ದು, ಕೆಆರ್ ಪುರ ಮತ್ತು ಮಹದೇವಪುರ ಕ್ಷೇತ್ರಗಳಲ್ಲೂ ಹಬ್ಬದ ಸಡಗರ ಮನೆ ಮಾಡಿತ್ತು, ರಸ್ತೆ ಬದಿಯಲ್ಲಿ ತಂಪು ಪಾನೀಯ ನೀಡುತ್ತಿದ್ದದ್ದು, ಸಾಮಾನ್ಯ ದೃಶ್ಯವಾಗಿತ್ತು, ರಾಮ ಮತ್ತು ಹನುಮ ದೇವರುಗಳ ಮಂದಿರಗಳಲಿ ವಿಶೇಷ ಪೂಜೆಸಲ್ಲಿಸಿದ ಭಕ್ತರು, ವಿವಿಧ ಬಗೆಯ ಹೂಗಳಿಂದ ಅಲಂಕಾರ ಮಾಡಿ ವಿಶೇಷ ಪೂಜೆಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು,
ರಾಮ ದೇವರ ಮೆರವಣಿಗೆ ಬೆಂಗಳೂರು ಪೂರ್ವ ತಾಲ್ಲೂಕಿನ ಹೂಡಿ, ಓಫಾರಂ, ವೈಟ್ಫೀಲ್ಡ್, ವರ್ತೂರು ಕೋಡಿ, ಮಾರತ್ತಹಳ್ಳಿ, ದೊಡ್ಡನಕುಂದಿ, ಟಿನ್ಫ್ಯಾಕ್ಟರಿ, ಕೆಆರ್ ಪುರ ಸೇರಿದಂತೆ ಪ್ರಮುಖ ನಗರಗಳಿಗೆ ತೆರಳಿ ರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಿ ಭಾವೈಕ್ಯತೆ ಸಾರಿದರುಈ ಸಂದರ್ಭದಲ್ಲಿ ಜೆಎಸ್ಎಸ್ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಸುನೀಲ್ ಪಂಡಿತ್, ಸಂತೋಷ್ ಚೌದರಿ, ಹೂಡಿ ವಿಜಯ್ ಕುಮಾರ್, ನಾರಾಯಣ ರೆಡ್ಡಿ, ಪಿಳ್ಳಪ್ಪ, ಮಂಜುನಾಥ್, ಹರಿಕೃಷ್ಣ ಯಾದವ್, ಶ್ರೀನಿವಾಸ್ ರಾಜು, ರಾಜು ಸೇರಿದಂತೆ ಮತ್ತಿತರರಿದ್ದರು.

LEAVE A REPLY

Please enter your comment!
Please enter your name here