ಧರ್ಮರಕ್ಷಣೆ ಯಷ್ಟೇ ಪರಿಸರಕ್ಕೂ ಪ್ರಾಮುಖ್ಯತೆ ನೀಡಿ

0
578

ಬೆಂಗಳೂರು/ಕೃಷ್ಣರಾಜಪುರ:- ಧರ್ಮ ರಕ್ಷಣೆಗೆ ಎಷ್ಟು ಪ್ರಾಮುಖ್ಯತೆ ನೀಡಲಾಗುತ್ತಿದೆಯೋ ಅಷ್ಟೇ ಪ್ರಾಮುಖ್ಯತೆಯನ್ನು ಪರಿಸರಕ್ಕೂ ನೀಡಿದಾಗ ಮಾತ್ರ ಉತ್ತಮ ವಾತಾವರಣ ನಿರ್ಮಾಣ ಮಾಡಲು ಸಾಧ್ಯ ಎಂದು ಬಿಜೆಪಿ ಮುಖಂಡ ಸೀಗೇಹಳ್ಳಿ ಸುಂದರ್ ಸಲಹೆ ನೀಡಿದರು.
ಕೃಷ್ಣರಾಜಪುರ ಕ್ಷೇತ್ರದ ಬಸವನಪುರ ವಾರ್ಡ್ ನ ಸೀಗೇಹಳ್ಳಿಯಲ್ಲಿ ಉಚಿತ ಗಣೇಶ ವಿತರಣೆ ಮಾಡಿದರು, ಜೊತೆಗೆ ಪ್ರತಿಯೊಂದು ಗಣಪನೊಂದಿಗೆ ಗಿಡಗಳನ್ನೂ ಸಹ ವಿತರಿಸಿ ನಂತರ ಮಾತನಾಡಿದ ಅವರು, ಅತಿ ವೇಗವಾಗಿ ಬೆಳೆಯುತ್ತಿರುವ ಬೆಂಗಳೂರು ನಗರದಲ್ಲಿ ಭೂಮಿ ಬೆಲೆ ಗಗನಕ್ಕೇರಿದ್ದು ರಾಜಕಾಲುವೆಗಳು, ಕೆರೆ ಕುಂಟೆಗಳು ಒತ್ತುವರಿ ಆಗಿದ್ದು ಪರಿಸರ ಸಂಪೂರ್ಣವಾಗಿ ನಾಶವಾಗಿದೆ, ಹಾಗಾಗಿ ನಮ್ಮ ಮುಂದಿನ ಪೀಳೀಗೆಗಾಗಿ ಪರಿಸರ ಸಂರಕ್ಷಣೆ ಅತ್ಯಗತ್ಯವಾಗಿದ್ದು ಧರ್ಮಪಾಲೆಯಂತೆಯೇ ಪರಿಸರ ಸಂರಕ್ಷಣೆಯನ್ನೂ ಕಡ್ಡಾಯವಾಗಿ ಪರಿಗಣಿಸಿ ಕನಿಷ್ಟ ಒಂದು ಗಿಡವಾದರೂ ಬೆಳೆಸುವುದು ತಮ್ಮ ಜವಾಬ್ದಾರಿ ಎಂದು ಭಾವಿಸಿ ಬೆಳೆಸ ಬೇಕೆಂದು ಮನವಿ ಮಾಡಿದರು. ಇನ್ನು ಗಣೇಶ ಉತ್ಸವದಲ್ಲಿ ಜಾಗರೂಕತೆ ವಹಿಸುವುದು, ಪರಿಸರ ಪ್ರೇಮಿ ಮಣ್ಣಿನ ಗಣಪವನ್ನೇ ಖರೀದಿಸುವುದು ಮತ್ತು ನೀರಿನಲ್ಲಿ ವಿಸರ್ಜನೆ ಮಾಡುವಾಗ ಬಿಬಿಎಂಪಿ ನಿಯಮಗಳನ್ನು ಪಾಲಿಸುವಂತೆಯೂ ಭಕ್ತರಲ್ಲಿ ಕೋರಿದರು. ಈ ಸಂದರ್ಭದಲ್ಲಿ ಚಿದಾನಂದ್, ಶ್ರೀರಾಮ್, ನಾಗೇಂದ್ರ, ನಾಯಕ್, ಆಂಜನೇಯರೆಡ್ಡಿ, ಮುಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here