ಧರ್ಮ ಪ್ರಚಾರಕನ ಅಧರ್ಮದ ಕೆಲಸ.

0
132

ತುಮಕೂರು:ಆತ ಕ್ರೈಸ್ತ ಧರ್ಮ ಪ್ರಚಾರಕ. ಕ್ರೈಸ್ತ ಧರ್ಮದ ತತ್ವ ಸಿದ್ದಾಂತಗಳನ್ನು ತಿಳಿ ಹೇಳಿ ಧರ್ಮದ ಕಾರ್ಯ ಮಾಡುವವನು. ಅಷ್ಟೆ ಅಲ್ಲ ನೊಂದು ಬಂದವರಿಗೆ ಸಾಂತ್ವನ ಹೇಳಿ ಸಮಸ್ಯೆಗೆ ಪರಿಹಾರ ಹೇಳುವವ ಪಾಸ್ಟರ್ ಈತ. ಇಂಥಹ ವ್ಯಕ್ತಿಯೇ ಅಧರ್ಮದ ಕೆಲಸ ಮಾಡಿದ್ದಾನೆ. ಕಷ್ಟ ಹೇಳಿಕೊಂಡು ಬಂದ ದಂಪತಿಯನ್ನೇ ಬೇರ್ಪಡಿಸಿದ್ದಾನೆ. ಪತಿಗೆ ಗೊತ್ತಿಲ್ಲದೆ ಪತ್ನಿ ಜೊತೆ ಅನೈತಿಕ ಸಂಬಂಧ ಬೆಳೆಸಿ ಸಂಸಾರ ಹಾಳು ಮಾಡಿದ್ದಾನೆ. ಇದು ತುಮಕೂರಿನಲ್ಲಿ ನಡೆದ ಧರ್ಮ ಪ್ರಚಾರಕನ ಅಧರ್ಮದ ಕೆಲಸ.

ಈ ಫೋಟೋದಲ್ಲಿ ಕಾಣೋ ವ್ಯಕ್ತಿ ಹೆಸರು ರೂಪೇಶ್ ಎಂದು. ಕ್ರೈಸ್ತ ಧರ್ಮ ಪ್ರಚಾರ. ಇವನನ್ನು ಫಾಸ್ಟರ್ ರೂಪೇಶ್ ಅಂಥಾ ಕರೀತಾರೆ. ಕ್ರೈಸ್ತ ಧರ್ಮ ಪ್ರಚಾರ ಮಾಡುವುದು ಈತನ ಕಾಯಕ. ಅಲ್ಲದೆ ಪ್ರತಿನಿತ್ಯ ಸಾಮೂಹಿಕ ಪ್ರಾರ್ಥನೆ ಏರ್ಪಡಿಸಿ ಜನರಲ್ಲಿ ಶಾಂತಿ ನೆಲೆಸುವಂತೆ ಈತ ಮಾಡ್ತಾನಂತೆ. ಯಾವುದೇ ಕಾಯಿಲೆ, ಕಷ್ಟ- ಸಂಕಷ್ಟಗಳು ಬಂದರೆ ರೂಪೇಶ್ ಯೇಶು ಕ್ರಿಸ್ತನ ಪ್ರಾರ್ಥನೆ ಮಾಡಿಸಿ ಖಾಯಿಲೆ ವಾಸಿ ಮಾಡ್ತಾನಂತೆ.  ಹಾಗಾಗಿ ನೊಂದಂತಹ ನೂರಾರು ಜನರು ರೂಪೇಶನ ಬಳಿ ಬರು‍ತ್ತಾರೆ. ಹೀಗೆ ಕಷ್ಟ ಹೇಳಿಕೊಂಡು ಬಂದವರಲ್ಲಿ ತುಮಕೂರು ತಾಲೂಕಿನ ಬಿಟ್ಟನಕುರಿಕೆ ಗ್ರಾಮದ ವಾಸಿಗಳಾದ ದೇವರಾಜ-ಸರೋಜಮ್ಮ ದಂಪತಿ ಕೂಡಾ ಒಬ್ಬರು. ದೇವರಾಜುಗೆ ಕಳೆದ ಐದು ವರ್ಷದಿಂದ ಇದ್ದಕಿದ್ದ ಹಾಗೆ ನರದೋಷದಿಂದಾಗಿ ಕಾಲು ಸಮಸ್ಯೆಯಾಗಿದೆ. ನಡೆಯಲು ಸರಿಯಾಗಿ ಆಗುತ್ತಿಲ್ಲ.  ಹಲವಾರು ವೈದ್ಯರಿಗೆ ತೋರಿಸಿದ್ದರೂ ವಾಸಿಯಾಗಿರಲಿಲ್ಲ. ಹಾಗಾಗಿ ಯಾರೋ ಸಂಬಂಧಿಕರ ಸಲಹೆ   ರಲ್ಲಿ ಮೇರೆಗೆ ೨೦೧೫ರಲ್ಲಿ ಫಾಸ್ಟರ್ ರೂಪೇಶ್ ಬಳಿ ಬರ್‍ತಾರೆ. ರೂಪೇಶ್ ಯೇಸುವಿನಲ್ಲಿ ಪ್ರಾರ್ಥನೆ ಸಲ್ಲಿಸಿದ್ರೆ ಖಾಯಿಲೆ ವಾಸಿಯಾಗುತ್ತದೆ ಎನ್ನುವ ನಂಬಿಕೆ ಇದೆ.   ಫಾಸ್ಟರ್ ರೂಪೇಶ್ ಖಾಯಿಲೆ ವಾಸಿ ಮಾಡುವ ಬದಲು ದೇವರಾಜುವಿನ ಪತ್ನಿ ಸರೋಜಮ್ಮಳ ಮೇಲೆ ಕಣ್ಣುಹಾಕ್ತಾನೆ. ಪ್ರತಿದಿನ ಮೊಬೈಲಿನಲ್ಲಿ ಮಧ್ಯರಾತ್ರಿವರೆಗೂ ಸರೋಜಮ್ಮಳ ಜೊತೆ ರೂಪೇಶ್ ಎಂಗೇಜ್ ಇರ್‍ತಿದ್ದ. ಕೇವಲ ಎರಡುಮೂರು ತಿಂಗಳಲ್ಲಿ ದೇವರಾಜುವಿನಿಂದ ಸರೋಜಮ್ಮಳನ್ನು ಬೇರ್ಪಡಿಸಿ ಪ್ರತ್ಯೇಕ ಮನೆಮಾಡಿ ಇರಿಸ್ತಾನೆ ಫಾಸ್ಟರ್ ರೂಪೇಶ್. ಸರೋಜಮ್ಮ ತನ್ನ ಎರಡು ಮಕ್ಕಳೊಂದಿಗೆ ಈಗ ಪ್ರತ್ಯೇಕ ಮನೆಯಲ್ಲಿ ವಾಸ ಇದ್ದಾಳೆ. ಪಾಸ್ಟರ್ ರೂಪೇಶ್ ಆಗಾಗ ಹೋಗಿ ಬರ್‍ತಾನೆ.

ಬೈಟ್-೧-ದೇವರಾಜು-ಪಾಸ್ಟರ್ ನಿಂದ ಮೋಸ ಹೋದ ವ್ಯಕ್ತಿ

ವಾಯ್ಸ್ ಓವರ್-೨- ಇತ್ತ ಕಳೆದ ಎರಡು ವರ್ಷದಿಂದ ದೇವರಾಜು ತನ್ನ ಪತ್ನಿಗಾಗಿ ಹಂಬಲಿಸುತಿದ್ದಾನೆ. ಅತ್ತ  ರೂಪೇಶ್ ಸರೋಜಮ್ಮ ಳನ್ನು ಬಿಟ್ಟು ಕೊಡುತಿಲ್ಲ. ಫಾಸ್ಟರ ರೂಪೇಶ್ ಗೆ ಕೂಡಾ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಆದ್ರೂ ಸರೋಜಮ್ಮಳ ಸಂಗ ಬಿಡುತ್ತಿಲ್ಲ. ರೂಪೇಶ ನ ಅನೈತಿಕ ಸಂಬಂಧ ರೂಪೇಶ್ ನ ಪತ್ನಿ ರಾಧಾಗೂ ತಿಳಿದೆ. ಆಕೆ ಕೂಡಾ ತನ್ನ ಗಂಡ ಸರೋಜಮ್ಮಳೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದಾರೆ. ಇವರಿಬ್ಬರನ್ನು ಬೇರ್ಪಡಿಸಬೇಕು ಎಂದು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ರಾಜಿ ಪಂಚಾಯತಿ ಮಾಡಿ ಕಳುಹಿಸಿದ್ದರು. ಇಷ್ಟಾದರೂ ಸರೋಜಮ್ಮ ಮತ್ತು ರೂಪೇಶ್ ಕಳ್ಳ ಸಂಬಂಧ ಮುಂದುವರೆದಿದೆ. ಈ ನಡುವೆ ಅಸಾಹಯಕ ದೇವರಾಜು ಪತ್ನಿಗಾಗಿ ಹಾತೋರೆಯುತ್ತಾ ದಿಕ್ಕುತೋಚದೆ ಕೈ ಚೆಲ್ಲಿ ಕುಳಿತಿದ್ದಾನೆ.

ಬೈಟ್-೨-ಜಟ್ಟಿ ಅಗ್ರಹಾರ ನಾಗರಾಜು-ಹೋರಾಟಗಾರರು

ವಾಯ್ಸ್ ಓವರ್-೩- ಅಂದಹಾಗೆ ಫಾಸ್ಟರ್ ರೂಪೇಶ್ ಮೂಲತಃ ಹಿಂದುವಾಗಿದ್ದು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದಾನೆ.  ರಾಮಾಂಜನೆಯ ಎಂಬ ತನ್ನ ಹೆಸರನ್ನು ರೂಪೇಶ್ ಎಂದು ಬದಲಾಯಿಸಿಕೊಂಡಿದ್ದಾನೆ. ತುಮಕೂರಿನ ಶಿರಾಗೇಟ್‌ನ ತನ್ನ ಮನೆಯಲ್ಲಿ ಹೊಸನ್ನ ಆರಾಧನಾ ಮಂದಿರ ಹೆಸರಿನಲ್ಲಿ ಧರ್ಮ ಪ್ರಚಾರ ಮಾಡುತ್ತಿದ್ದಾನೆ. ಅಲ್ಲದೆ ಹಿಂದುಗಳನ್ನು ಕ್ರಿಶ್ಚಿಯನ್ ಧರ್ಮಕ್ಕೆ  ಬಲವಂತವಾಗಿ ಮತಾಂತರ ಮಾಡ್ತಾನೆ ಅನ್ನುವ ಆರೋಪ ಕೂಡಾ ಈತನ ಮೇಲಿದೆ.

LEAVE A REPLY

Please enter your comment!
Please enter your name here