ಜಲಾವೃತವಾದ ವಾರದ ಸಂತೆ .

0
238

ಬಳ್ಳಾರಿ / ಹೂವಿನ ಹಡಗಲಿ :ಇಂದು ಸುರಿದ ವರುಣ ಜನಸಾಮಾನ್ಯರಿಗೆ ಕಿರಿ ಕಿರಿ ಉಂಟುಮಾಡಿದ್ದಾನೆ. ಜಿಲ್ಲೆಯ ಹೂವ್ವಿನಹಡಗಲಿಯಲ್ಲಿ ಇಂದು ಸುರಿದ ಮಳೆ ನಗರದ ವಾರದ ಸಂತೆ ಬಜಾರನ್ನ ಸಂಪೂರ್ಣ ಜಲಾವೃತ ಮಾಡಿದೆ.ವಾರಕ್ಕೆ ಒಂದು ಬಾರಿ ನಡೆಯುವ ಈ ಸಂತೆಯಲ್ಲಿ ತರಕಾರಿ ಮತ್ತು ಕಿರಾಣಿ ಸೇರಿದಂತೆ ಇತರೆ ಗೃಹಪಯೋಗಿ ವಸ್ತುಗಳನ್ನ ಮಾರಾಟಮಾಡಲು ಬಂದ ವ್ಯಾಪಾರಸ್ತರು ತಮ್ಮ ದಾಸ್ತಾನು ನೀರುಪಾಲಾದ್ದರಿಂದ ಕಣ್ಣೀರಿಡುವಂತ ಪರಿಸ್ಥಿತಿ ಬಂದೊದಗಿದೆ.ಇನ್ನ ವಾರಕ್ಕೆ ಬೇಕಾಗುವ ವಸ್ತುಗಳನ್ನ ಖರೀದಿಸಲು ಬಂದಂತ ಗ್ರಾಹಕರು ಸಂತೆಯಿಂದ ಹೊರಬರಲು ಪರದಾಡುವಂತ ಪರಿಸ್ಥಿತಿ ಕಂಡು ಬಂತು ಇನ್ನು ಮಳೆಗೆ ಮುಂಚೆ ಸಂತೆ ಮಾರುಕಟ್ಟೆಯಲ್ಲಿ ಬಂದಿದ್ದ ವಾಹನಗಳು ಮಳೆಯ ನಂತ್ರ ಹೊರ ಹೋಗಲು ಆಗದೆ ಅಲ್ಲೇ ನಿಲ್ಲ ಬೇಕಾಯಿತು.ಇದಕ್ಕೆ ಸ್ಥಳೀಯ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ ಎಂದು ದೂರಿರುವ ವ್ಯಾಪಾರಸ್ಥರು ಮತ್ತು ಗ್ರಾಹಕರು ಸರಿಯಾಗಿ ನೀರು ಹರಿಯುವಂತ ವ್ಯವಸ್ಥೆಯನ್ನ ಮಾಡದೇ ಹಾಗೆ ಬಿಟ್ಟಿರುವುದರಿಂದ ಇಂದು ಈ ಪರಿಸ್ಥಿತಿ ಬಂದಿದೆ ಎಂದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ರು.ಇನ್ನು ಜಿಲ್ಲೆಯ ಹೂವ್ವಿನಹಡಗಲಿ ಮತ್ತು ಹಗರಿಬೊಮ್ಮನಹಳ್ಳಿ ಹಾಗೂ ಹೊಸಪೇಟೆ ತಾಲೂಕಿನಲ್ಲಿ ಇಂದು ಸಂಜೆ ಉತ್ತಮ ಮಳೆಯಾಗಿದ್ದು ಹಡಗಲಿಯಲ್ಲಿ ಮಾತ್ರ ಈ ರೀತಿಯ ತೊಂದರೆ ಜನಸಾಮಾನ್ಯರಿಗಾಗಿದೆ.

LEAVE A REPLY

Please enter your comment!
Please enter your name here