ಧಾರ್ಮಿಕ ಸಭೆ ನಡೆಸಲು ವೀರಶೈವ ಮುಖಂಡರು ತೀರ್ಮಾನ..

0
104

ಮಂಡ್ಯ/ಮಳವಳ್ಳಿ:ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ಏ18 ರಂದು ಶ್ರೀ ಬಸವೇಶ್ವರ ಜಯಂತಿ ಆಚರಣೆ ಸರಳವಾಗಿ ಆಚರಣೆ ಜೊತೆಗೆ ಧಾರ್ಮಿಕ ಸಭೆ ನಡೆಸಲು ವೀರಶೈವ ಮುಖಂಡರು ತೀರ್ಮಾನಿಸಲಾಯಿತು. ಮಳವಳ್ಳಿ ಪಟ್ಟಣದ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಸಭೆಯಲ್ಲಿ ತಾಲ್ಲೂಕಿನ ಎಲ್ಲಾ ವೀರಶೈವ ಸಮಾಜದ ಸಂಘಟನೆ ಗಳು ಭಾಗವಹಿಸಿ, ಚರ್ಚಿಸಿ ಚುನಾವಣಾ ನೀತಿ ಸಂಹಿತೆ ಹಿನ್ನಲೆಯಲ್ಲಿ ರಾಜಕಾರಣಿಗಳನ್ನು ಸಭೆಗೆ ಭಾಗವಹಿಸದಂತೆ ನೋಡಿಕೊಂಡು ಚುನಾವಣಾಧಿಕಾರಿಗಳು ತಿಳಿಸಿದ್ದು, ಅದರಂತೆ ನಾವು ಅನುಮತಿ ನೀಡುತ್ತೇವೆ ಎಂದಿದ್ದು, ಅದಕ್ಕಾಗಿ ಬಸವಣ್ಣ ರವರ ಬಗ್ಗೆ ಧಾರ್ಮಿಕ ಸಭೆ ನಡೆಸಲು ಸ್ವಾಮೀಜಿ ಅಥವಾ ಉಪನ್ಯಾಸ ಕರನ್ನು ಕರೆಸಲು ತೀರ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಮುಂದಿನ ವರ್ಷದಲ್ಲಿ ತಾಲ್ಲೂಕು ಆಡಳಿತ ಹೊರತುಪಡೆಸಿ ಪ್ರತ್ಯೇಕ ವಾಗಿ ಆಚರಣೆಗೆ ನಾವೇ ಸಮಿತಿ ಮಾಡಿ ಜಯಂತಿ ಆಚರಿಸುವಂತೆ ತಿಳಿಸಿದರು. ಸಭೆಯಲ್ಲಿ ಶ್ರೀ ಬಸವೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ, ವೀರಶೈವ ಮಹಾಸಭಾದ ಅಧ್ಯಕ್ಷ ಮೂರ್ತಿ, ಯುವಬಳಗ ಅಧ್ಯಕ್ಷ ಮಹೇಶ್, ಪಟ್ಟಣದ ಬಸವಕೇಂದ್ರ ಅಧ್ಯಕ್ಷ ಮಲ್ಲೇಶ್, ನೌಕರರ ಸಂಘದ ಅಧ್ಯಕ್ಷ ಗಂಗಾಧರಸ್ವಾಮಿ, ಮುಖಂಡರಾದ ವೃಷೇಬೇಂದ್ರ, ಚನ್ನಪ್ಪ, ಅಮೃತಕಂಠೇಶ, ಶೇಖರ್,ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here