ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮ..

0
305

ಬಳ್ಳಾರಿ/ಹೊಸಪೇಟೆ:ಜನತೆಗೆ ಖ್ಯಾತ ಕನ್ನಡ ಚಿತ್ರ ನಟ ಶಿವರಾಜಕುಮಾರ್ ನಟನೆ ಟಗರು ಚಿತ್ರದ ಧ್ವನಿ ಸುರಳಿ ಬಿಡುಗಡೆ ಕಾರ್ಯಕ್ರಮ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಡಿ.23ರಂದು ಆಯೋಜಿಸಲಾಗಿದೆ.
ಚಿತ್ರದ ನಿರ್ಮಾಪಕ ಶ್ರೀಕಾಂತ್ ಹಾಗೂ ಸಹಾ ನಿರ್ಮಾಪಕರಾದ ಗುಜ್ಜಲ್ ಪುರುಷೋತ್ತಮ ಸತೀಶ ಬಿಲ್ಲಾಡಿ ನಗರದಲ್ಲಿ ಗರುವಾರ ಪತ್ರಿಕಾಘೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಾರ್ಯಕ್ರಮದಲ್ಲಿ ಪುನೀತ್ ರಾಜಕುಮಾರ್ ಚಿತ್ರದ ಧ್ವನಿ ಸುರಳಿ ಬಿಡುಗಡೆ ಗೊಳಿಸಲಿದ್ದಾರೆ. ಇಡೀ ಟಗರು ಚಿತ್ರ ತಂಡ, ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಿ, ಚಿತ್ರದ ಸಂಗೀತ ನಿರ್ದೇಶಕ ಚರಣ್ ಸಂಗೀತ ಕಾರ್ಯಕ್ರಮ ನಡೆಯಲಿದೆ. ನಾಯಕಿಯರಾದ ಮಾನವೀತಾ, ಕಾವ್ಯóಷಾ, ಸಂಚಿತ ಪಡುಕೋಣೆ ಹಾಗೂ ಅಮೃತ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮ ವೀಕ್ಷಣೆಗಾಗಿ 18ಸಾವಿರ ಆಸನಗಳ ವ್ಯವಸ್ಥೆ ಕಲ್ಪಿಸಲಾಗುವುದು. ವಿಐಪಿ ಹಾಗೂ ವಿವಿಐಪಿಗಳಿಗಾಗಿ ಪ್ರತೇಕ ಪಾಸ್‍ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ. ಪಾಸ್ ಇಲ್ಲದೇ ಹೋದರೂ ಸಾರ್ವಜನಿಕರಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗುವು. ಡಿ.22ರಂದು ಪಾಸ್ ವಿತರಣೆ ಮಾಡಲಾಗುವುದು. ಶಾಸಕ ಆನಂದಸಿಂಗ್, ಶಿವರಾಜ್ ತಂಗಂಡಗಿ, ಎಂ.ಪಿ.ರವೀಂದ್ರ ಸಂತೋಷ ಲಾಡ್, ಸೇರಿದಂತೆ ಕಾರ್ಯಕ್ರಮದಲ್ಲಿ ಮುಖ್ಯ ಆತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ..

LEAVE A REPLY

Please enter your comment!
Please enter your name here