ನಕಲಿ ಅಂಕಪಟ್ಟಿ ನೀಡಿ ಪಿಎಚ್ ಡಿ ಪಡೆದವರಿಗೆ ಸಿಂಡಿಕೇಟ್ ಸದಸ್ಯತ್ವ ನೀಡಿದ ಸರ್ಕಾರ !?

0
255

* ಉನ್ನತ ಶಿಕ್ಷಣ ಸಚಿವರೇ ಈ ಅಕ್ರಮವನ್ನು ನೀವೂ ನೋಡಲೇಬೇಕು ಸ್ವಾಮಿ, !

* ನಕಲಿ ಅಂಕಪಟ್ಟಿ ನೀಡಿ ಪಿಎಚ್ ಡಿ ಪದವಿ ಪಡೆದವರಿಗೆ ಸಿಂಡಿಕೇಟ್ ಸದಸ್ಯತ್ವ ನೀಡಿದ ಸರ್ಕಾರ !

* ಪೊಲೀಸರ ತನಿಖೆಯಲ್ಲಿ ಅಕ್ರಮ ಎಂದು ಸಾಬೀತಾದವರಿಗೆ ಮತ್ತೆ ಪಟ್ಟ !

ಬಳ್ಳಾರಿ /ಹೊಸಪೇಟೆ: ನಕಲಿ ಅಂಕಪಟ್ಟಿ ನೀಡಿ ಎರಡು ಎಂಎ ಪದವಿ ಜೊತೆಗೆ ಪಿಎಚ್ ಡಿ ಪದವಿ ಪಡೆದ ಆರೋಪಿಯೇ ಇದೀಗ ಮತ್ತೆ ವಿಶ್ವ ವಿದ್ಯಾಲಯದಲ್ಲಿ ಸಿಂಡಿಕೇಟ್ ಸದಸ್ಯ. ಹೌದು, ಅಕ್ರಮ ಮಾಡಿದ ಆರೋಪಿಗೆ ಮತ್ತೆ ಸಿಂಡಿಕೇಟ್ ಸದಸ್ಯತ್ವ ನೀಡಿ ಸರ್ಕಾರ ಆದೇಶ ಹೊರಡಿಸಿದ ಸ್ಟೋರಿಯಿದು. ಇಂತಹದ್ದೊಂದು ಆದೇಶ ಮಾಡಿರುವ ಉನ್ನತ ಶಿಕ್ಷಣ ಇಲಾಖೆಯ ಅಕ್ರಮ ಇದೀಗ ಬಯಲಾಗಿದೆ‌, ಈ ಹಿಂದೆ ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿದ್ದ ಅಬ್ದುಲ್ ಹಕೀಂ ನಕಲಿ ಅಂಕಪಟ್ಟಿ ನೀಡಿ ಪಿಎಚ್ ಡಿ ಪದವಿ ಹಾಗೂ ಎರಡು ಎಂಎ ಪದವಿ ಪಡೆದ ಪ್ರಕರಣ ಇತ್ತೀಚೆಗಷ್ಠೆ ಸಾಬೀತಾಗಿದೆ, ಹಿಂದೆ ಹಂಪಿ ಕನ್ನಡ ವಿವಿಯ ಸಿಂಡಿಕೇಟ್ ಸದಸ್ಯರಾಗಿದ್ದ ಅಬ್ದುಲ್ ಹಕೀಂ, ಉತ್ತರ ಪ್ರದೇಶದ ಬುಂದೇಲ್ ಖಮಡ ವಿವಿಯಲ್ಲಿ ೨೦೦೮ರಲ್ಲಿ ಬಿಎ ವ್ಯಾಸಂಗ ಮಾಡಿರುವುದಾಗಿ ನಕಲಿ ಅಂಕಪಟ್ಟಿ ನೀಡಿ ಪಿಎಚ್ ಡಿ ಪದವಿ ಪಡೆದಿರುವುದನ್ನು ಪೊಲೀಸರು ತನಿಖೆಯ ಮೂಲಕ ದೃಡಪಡಿಸಿದ್ದಾರೆ, ಅಲ್ಲದೇ ಇವರ ಮೇಲೆ ೨ ಠಾಣೆಗಳಲ್ಲಿ ದೂರು ದಾಖಲಾಗಿದೆ. ಆದ್ರೆ ಇತಂಹ ಅಕ್ರಮ ಎಸಗಿದ ಅಬ್ದುಲ್ ಹಕೀಂರನ್ನು ಮತ್ತೆ ಉನ್ನತ ಶಿಕ್ಷಣ ಇಲಾಖೆ ಇದೀಗ ಮತ್ತೊಂದು ಭಾರಿಗೆ ಹಂಪಿ ಕನ್ನಡ ವಿಶ್ವ ವಿದ್ಯಾಲಯಕ್ಕೆ ಮತ್ತೆ ಸಿಂಡಿಕೇಟ್ ಸದಸ್ಯರನ್ನಾಗಿ ಆಯ್ಕೆ ಮಾಡಿ ಆದೇಶ ಹೊರಡಿಸಿವುದು ಬೇಲೆಯೇ ಎದ್ದು ಹೊಲ ಮೇಯ್ದಂತೆ ಆಗಿದೆ, ಅಬ್ದುಲ್ ಹಕೀಂರನ್ನು ಮತ್ತೆ ಸಿಂಡಿಕೇಟ್ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದು ಉನ್ನತ ಶಿಕ್ಷಣ ಇಲಾಖೆಯ ಅಧಿಕಾರಿಗಳ ಪ್ರಾಮಾಣಿಕತೆಯನ್ನು ಪ್ರಶ್ನೆ ಮಾಡುವಂತೆ ಮಾಡಿದೆ. ಇದಕ್ಕೆ ಮಾನ್ಯ ಉನ್ನತ ಶಿಕ್ಷಣ ಸಚಿವರಾದ ಬಸವರಾಜ ರಾಯರೆಡ್ಡಿಯವರೇ ಇದೀಗ ಉತ್ತರ ನೀಡಬೇಕಾಗಿದೆ,

LEAVE A REPLY

Please enter your comment!
Please enter your name here