ನಕಲಿ ದಾಖಲೆಗಳ. ನಗರಸಭೆ

0
226

ಬಳ್ಳಾರಿ /ಹೊಸಪೇಟೆ:ನಗರಸಭೆ ಕಛೇರಿ ಮೇಲೆ ಸೋಮವಾರ ದಿಢೀರ್ ದಾಳಿ ನಡೆಸಿದ ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್, ನಗರಸಭೆ ಕಂದಾಯ ಇಲಾಖೆಗೆ ಸಂಬಂಧಪಟ್ಟ ಕಡತಗಳನ್ನು ಮುಟ್ಟುಗೋಲು ಹಾಕಿಕೊಂಡರು.

ಸಾರ್ವಜನಿಕ ಆಸ್ಥಿ ಸರ್ಕಾರಿ ನಿವೇಶನ, ಜಮೀನು ಸೇರಿ ಇತರೆಗಳ ಕೊಟ್ಟಿ ದಾಖಲೆಗಳನ್ನು ಸೃಷ್ಠಿಸಿ, ಬೇರೊಬ್ಬರ ಹೆಸರಿಗೆ ನೊಂದಿಯಿಸಿ ವಂಚಿಸಲಾಗಿದ ಎನ್ನುವ ದೂರುಗಳು ಕೇಳಿ ಬಂದ ಹಿನ್ನಲೆಯಲ್ಲಿ ನಗರಸಭೆ ಕಚೇರಿಗೆ ಬೇಟಿ ನೀಡಿ, ಪರಿಶೀಲನೆ ನಡೆಸಿದರು.

ಕಂದಾಯ ಇಲಾಖೆ ಅಧಿಕಾರಿ ಸೇರಿದಂತೆ ಹಲವು ಸಿಬ್ಬಂದಿಗಳನ್ನು ಹೂವಿನ ಹಡಗಲಿಯ ಪುರಸಭೆಗೆ, ಪೌರಾಯುಕ್ತ ಎಂ.ಪಿ.ನಾಗಣ್ಣ ಇವರನ್ನು ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿಗೆ ನಿಯೋಜನೆ ಗೊಳಿಸಿ ಆದೇಶ ಹೊರಡಿಸಿದರು.

ಉಪವಿಭಾಗಾಧಿಕಾರಿ ಪ್ರಶಾಂತ್ ಕುಮಾರ ಮಿಶ್ರಾ ಅಧ್ಯಕ್ಷತೆಯಲ್ಲಿ ತನಿಖಾ ತಂಡವನ್ನು ರಚಿಸಿದ್ದು, ಸಾರ್ವಜನಿಕರ ಆಸ್ತಿಗಳನ್ನು ಕಬಳಿಸಿದ ವ್ಯಕ್ತಿಗಳ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಎಷ್ಟೇ ಪ್ರಭಾವಿಗಳಾಗಿದ್ದರೂ, ಹಿಂದೆ ಸರಿಯುವುದಿಲ್ಲ ಎಂದು ಎಚ್ಚರಿಸಿದರು. ಈ ಕೂಡಲೇ ನಗರಸಭೆ ರೇರ್ಕಾಡ್ ರೂಮ್‌ನಲ್ಲಿರುವ ಕಡತಗಳು, ಸೇರಿದಂತೆ ರೇಕಾರ್ಡ್ ರೂಂನ್ನು ಕೂಡ ಸೀಜ್ ಮಾಡಲು ಅಧಿಕಾರಿಗಳಿಗೆ ಆದೇಶಿಸಿದರು. ಈ ಕುರಿತು ಏಪ್ರೀಲ್ ಮೊದಲ ವಾರದಲ್ಲಿ ವಿಶೇಷ ಸಭೆಯನ್ನು ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಮಾತನಾಡಿದ ಅವರು, ಹೊಸಪೇಟೆ ನಗರಸಭೆಯಲ್ಲಿ ಕೊಟ್ಟಿ ದಾಖಲೆ ಸೃಷ್ಠಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಬೇಟಿ ನೀಡಿ ಪರಿಶೀಲನೆ ನಡೆಸಲಾಗಿದ್ದು, ಭೂ ಮಾಫಿಯಾಗಳ ಕೈವಾಡವಿದ್ದು, ಪ್ರಸ್ತುತ ಐದು ಪ್ರಕರಣಗಳು ಮೇಲ್ನೋಟಕ್ಕೆ ಬೆಳಕಿಗೆ ಬಂದಿವೆ. ಮತಷ್ಟು ಪ್ರಕಣಗಳು ಬಯಲಿಗೆ ಬರುವ ಸಾಧ್ಯತೆಯಿದ್ದು, ಮುಂದಿನ ದಿನಗಳಲ್ಲಿ ಹೊರ ಬೀಳಲಿದೆ. ಈ ಪ್ರಕರಣದಲ್ಲಿ ಯಾರೇ ಇದ್ದರೂ, ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುಲಾಗುವುದು ಎಂದು ತಿಳಿಸಿದರು. ಉಪವಿಭಾಗಾಧಿಕಾರಿ ಪ್ರಶಾಂತ ಕುಮಾರ ಮಿಶ್ರಾ, ತಹಶೀಲ್ದಾರ ಎಚ್.ವಿಶ್ವನಾಥ, ಪೌರಾಯುಕ್ತ ಎಂ.ಪಿ.ನಾಗಣ್ಣ, ಎಇಇ ಸೈಯದ್ ಮನ್ಸೂರು ಅಹಮದ್, ನಗರಸಭೆ ಅಧ್ಯಕ್ಷ, ಅಬ್ದುಲ್ ಖದೀರ್,ಸದಸ್ಯರಾದ ಎಂ.ಎಸ್.ರಘು, ಟಿ.ಚಿದಾನಂದ, ಗುಡಗುಂಟಿ ಮಲ್ಲಿಕಾರ್ಜುನ, ಗುಜ್ಜಲ ನಿಂಗಪ್ಪ, ಚಂದ್ರಕಾಂತ್ ಕಾಮತ್, ಬಡಾವಲಿ ಇತರರು ಹಾಜರಿದ್ದರು.
ಹೊಸಪೇಟೆ ನಗರಸಭೆ ಕಚೇರಿಯನ್ನು ಮಾರಾಟ ಮಾಡಿದರೂ ಆಶ್ಚರ್ಯ ಪಡಬೇಕಿಲ್ಲ. ಬೇಲಿನೇ ಎದ್ದು ಹೊಲ ಮೇಯ್ದದಂತೆ ಅಕ್ರಮ ಕೆಲಸಗಳು, ನಗರಸಭೆಯಲ್ಲಿ ನಡೆಯುತ್ತಿದ್ದು, ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ರಕ್ಷಣೆ ಇಲ್ಲದಾಂತಾಗಿದೆ. ಸದಸ್ಯರೇ ಮೌನವಾಗಿರುವುದರಿಂದ ಅಧಿಕಾರಿ ಹಾಗೂ ಸಿಬ್ಬಂದಿಗಳು ಆಡಿದ್ದೇ ಆಟವಾಗಿದೆ. ಜನಪ್ರತಿನಿಧಿಗಳು ಕೂಡ ಜನರ ಸೇವಕರಾಗಿದ್ದು, ಮಹಿಳೆಯರು, ಅಸಾಯಕರ, ಅಮಾಯಕರ ಸೇರಿದಂತೆ ಸಾರ್ವಜನಿಕರ ಆಸ್ತಿಪಾಸ್ತಿಗಳನ್ನು ರಕ್ಷಣೆ ಮಾಡುವ ಹೊಣೆ ಸರ್ವ ಸದಸ್ಯರಿಗೆ ಇದೆ. ಮತದಾರರು, ನಾಳೆ ನಿಮ್ಮನ್ನೂ ಪ್ರಶ್ನೆ ಮಾಡುತ್ತಾರೆ.

LEAVE A REPLY

Please enter your comment!
Please enter your name here