ನಕ್ಷತ್ರ ಆಮೆಯ ರಕ್ಷಣೆ

0
183

ಬಳ್ಳಾರಿ /ಹೊಸಪೇಟೆ:ಬೀದಿ ನಾಯಿಗಳಿಗೆ ಆಹಾರವಾಗುತ್ತಿದ್ದ ನಕ್ಷತ್ರ ಆಮೆಯೊಂದನ್ನು ರಕ್ಷಣೆ ಮಾಡಿ ಕಾಡಿಗೆ ಬಿಟ್ಟ ಘಟನೆ ತಾಲ್ಲೂಕಿನ ಕಮಲಾಪುರದಲ್ಲಿ ಮಂಗಳವಾರ ನಡೆದಿದೆ.

ಹಂಪಿ ಕನ್ನಡ ವಿವಿಗೆ ಹೋಗುವ ಮಾರ್ಗ ಮಧ್ಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದಿನ ರಸ್ತೆಯಲ್ಲಿ ಕಣ್ಣಿಗೆ ಬಿದ್ದ ಅಪರೂಪದ ನಕ್ಷತ್ರ ಆಮೆಯನ್ನು ಸ್ಥಳೀಯರ ಯುವಕರಾದ ವೆಂಕಟೇಶ, ವಿರೇಶ, ಈರಣ್ಣ ಪೂಜಾರಿ ಹಾಗೂ ಅಗಸರ ವೆಂಕಟೇಶ ರಕ್ಷಣೆ ಮಾಡಿ ಗ್ರಾಮದ ಹೊರವಲಯದ ಕಾಡಿಗೆ ಬಿಟ್ಟರು. ಮಾಟಮಂತ್ರ, ಪೂಜೆಗಳಿಗಾಗಿ ಹಲವು ದುಷ್ಕರ್ಮಿಗಳು ಈ ನಕ್ಷತ್ರ ಆಮೆಯನ್ನು ಹಿಡಿದು ಪ್ರಾಣಹಾನಿ ಮಾಡುತ್ತಾರೆ ಎಂದು ಅವರು ತಿಳಿಸಿದ್ದಾರೆ

LEAVE A REPLY

Please enter your comment!
Please enter your name here