ನಗರಸಭಾ ಸದಸ್ಯರ ಮೇಲೆ ಹಲ್ಲೆ….

0
72

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರದ ಮಹೆಬೂಬ್ ನಗರದಲ್ಲಿ ರಾಜಕೀಯ ಹಿನ್ನೆಲೆಯಲ್ಲಿ ನಗರಸಭಾ ಸದಸ್ಯರ ತಮ್ಮನೇ ಅಕ್ಕ ಮತ್ತು ಅಕ್ಕನ ಮಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಗಾಯಗೊಂಡುವರು ಇಲ್ಲಿನ ಸಾರ್ವಜನಿಕ ಆಸ್ಪತ್ರೆ ಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎನ್ ಎನ್ ಟಿ ಉತ್ತರದ 26ನೇ ವಾರ್ಡಿನ ನಗರಸಭಾ ಸದಸ್ಯ ಜಬೀನ್ ತಾಜ್ ಮತ್ತು ಆಕೆಯ ಮಗಳು ಆಲಿಆಯಿಷಾ ಜಬೀನ್ ತಾಜ್ ರವರ ತಮ್ಮ ಅಲ್ಲು ಮತ್ತು ಅತನ ಸಹಚರರಾದ ಸಿರಾಜ್, ಆರ್ಬಾಜ್ , ಅರ್ಬನ್ ಎನ್ನಲಾಗಿದೆ.

ಘಟನೆಯ ವಿಷಯ ತಿಳಿಯುತ್ತಿದ್ದಂತೆ ಮಹೆಬೂಬ್ ನಗರದ ವೃತ್ತದಲ್ಲಿ ಎರಡು ಗುಂಪುಗಳು ಜಮಾವಣೆ ಗೊಂಡು ಉದ್ರಿಕ್ತವತಾವರಣ ನಿರ್ಮಾಣವಾಗಿದ್ದು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಗರಠಾಣೆ ಪೊಲೀಸರು ಎರಡು ಗುಂಪುಗಳನ್ನು ಚದುರಿಸಿ ಹೆಚ್ಚಿನ ಘರ್ಷಣೆ ಮತ್ತು ಮಾರಾಮಾರಿ ನಡೆಯುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹಲ್ಲೆಯ ಬಗ್ಗೆ ಗಾಯಾಳು ಅಲಿ ಆಯಿಷಾ ಎಂಬಾಕೆ ನಗರ ಠಾಣೆಗೆ ದೂರು ನೀಡಿ ಭಾನುವಾರ ರಾತ್ರಿ ಮೆಹಬೂಬ್ ನಗರದ ಎನ್.ಎನ್.ಟಿ ವೃತ್ತದಲ್ಲಿ ಸ್ಥಳೀಯರೊಬ್ಬರು ಕುಡಿದ ಅಮಲಿನಲ್ಲಿ ಶಾಸಕ ಜೆಕೆ ಕೃಷ್ಣಾರೆಡ್ಡಿ ಬಗ್ಗೆ ಮಾತನಾಡುತ್ತಿದ್ದಾಗ ಅಲ್ಲಿಗೆ ಬಂದ ನಾಲ್ವರು ಆನ ಮೇಲೆ ಹಲ್ಲೆ ನಡೆಸುತ್ತಿದ್ದರು.

ಇದನ್ನು ಕಂಡು ನಮ್ಮ ತಾಯಿ ನಗರಸಭಾ ಸದಸ್ಯ ಜಬೀನ್ ತಾಜ್ ಹಲ್ಲೆ ಮಾಡದಂತೆ ತಡೆಯಲು ಯತ್ನಿಸಲು ಬಂದಾಗ ನಮ್ಮ ತಾಯಿಯನ್ನು ಅಲ್ಲು ಮತ್ತು ಸಹಚರರು ಅವಾಚ್ಯಶಬ್ದಗಳಿಂದ ನಿಂದಿಸಿ ಅವರ ಮೇಲೆ ಸಹಾ ಹಲ್ಲೆ ನಡೆಸಿದರು. ಕೂಡಲೇ ನಮ್ಮ ತಾಯಿಯನ್ನು ಹಲ್ಲೆಯಿಂದ ಬಿಡಿಸಲು ಹೋದ ನನ್ನ ಮೇಲೆ ಈ ನಾಲ್ವರು ಕಬ್ಬಿಣದ ರಾಡ್ ಮತ್ತು ಕೈಯಿಂದ ಹಲ್ಲೆ ನಡೆಸಿದ್ದರು ಹಲ್ಲೆಯಿಂದ ಗಾಯ ಗೊಂಡಿದ್ದ ನಮ್ಮನ್ನು ನಮ್ಮ ತಂದೆ ಮತ್ತು ತಮ್ಮ ಹಾಗೂ ನಮ್ಮ ಬಡಾವಣೆಯ ನಿವಾಸಿಗಳು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಎಂದು ಘಟನೆಯ ಬಗ್ಗೆ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here