ನಗರಸಭೆ ಅವ್ಯವಸ್ಥೆ ಕಂಡು ಅಧಿಕಾರಿಗಳ ವಿರುದ್ಧ ಶಾಸಕ ಗರಂ..

0
622

ಬಳ್ಳಾರಿ /ಹೊಸಪೇಟೆ:ನಗರಸಭೆ ಅವ್ಯವಸ್ಥೆ ಕಂಡು ಶಾಸಕ ಆನಂದ್ ಸಿಂಗ್ ಅಧಿಕಾರಿಗಳ ವಿರುದ್ದ ಶುಕ್ರವಾರ ಗರಂ ಆದರು. 

ನಗರದ 35 ವಾರ್ಡ್ ಗಳಲ್ಲಿ ಅಸ್ವಸ್ಥತೆ ಉಂಟಾಗಿದ್ದು, ಡಂಘೆ ಸೇರಿ ಹಲವು ಜ್ವರಗಳು ಕಾಣಿಸಿಕೊಂಡಿವೆ. ಇದರಿಂದ ನಗರವಾಸಿಗಳು ತತ್ತರಿಸಿದ್ದಾರೆ. ಇನ್ನು 40 ದಿನಗಳ ಒಳಗಾಗಿ ನಗರ ಸಂಪೂರ್ಣ ಸ್ವಚ್ಛತೆಗೊಳ್ಳಬೇಕು. ಡೆಂಘೆಯಿಂದ ಬಳಲುವ ರೋಗಿಗಳಿಗೆ ತುರ್ತು ಚಿಕಿತ್ಸೆ ಒದಗಿಸಬೇಕು. ಸುಮಾರು 7 ವರ್ಷ ದಿಂದ ಚಾಲ್ತಿಯಲ್ಲಿರುವ ಯುಜಿಡಿ ಕಾಮಗಾರಿಯನ್ನು ಪೂರ್ಣಗೊಳಿಸಿ ನೈರ್ಮಲ್ಯ ನಗರವನ್ನಾಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೂ ಮುನ್ನ ನಗರಸಭೆ ಅಧ್ಯಕ್ಷೆ ಸೇರಿ ಸರ್ವ ಸದಸ್ಯರು ಕಚೇರಿಯಿಂದ ಹೊರ ಬಂದು ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು

LEAVE A REPLY

Please enter your comment!
Please enter your name here