ನಗರಸಭೆ ಆರೋಪ-ಪ್ರತ್ಯಾರೋಪಗಳ ಪರ್ವ

0
324

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ನಗರಸಭಾ ಅಧ್ಯಕ್ಷ ಕೆಬಿ.ಮುದ್ದಪ್ಪ ಸರ್ಕಾರಿ ಭೂಮಿಯನ್ನು ಅಕ್ರಮ ಖಾತೆ ಮಾಡಿಸಿಕೊಂಡಿದ್ದಾರೆ ಎಂಬ ವಿರೋಧ ಪಕ್ಷದ ಸದಸ್ಯರ ಆರೋಪಕ್ಕೆ ಸ್ಪಷ್ಠೀಕರಣ ನೀಡಲು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿತ್ತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನನ್ನಮೇಲಿನ ಅಕ್ರಮಖಾತೆ ಆರೋಪ ಸತ್ಯಕ್ಕೆ ದೂರವಾದ್ದು, ಒಂದುವೇಳೆ ಅವರಲ್ಲಿ ನನ್ನ ಯಾವುದೇ ಅಕ್ರಮದ ಬಗ್ಗೆ ಸೂಕ್ತ ದಾಖಲೆಗಳಿದ್ದಲ್ಲಿ ಕಾನೂನು ರೀತಿ ಕ್ರಮಕ್ಕೆ ದೂರುನೀಡಲಿ ಅದನ್ನು ಬಿಟ್ಟು ಯಾವುದೋ ದಾಖಲೆ ನೀಡಿ ನಾನೆ ಅಪರಾಧಿ ಎಂದು ಬಿಂಬಿಸಲು ಹೊರಟಿರುವುದು ಎಷ್ಟು ಸರಿ ಅವರಂತೆ ನಾನು ಒಬ್ಬ ಸದಸ್ಯ ನಂತರವಷ್ಟೆ ಅಧ್ಯಕ್ಷ ಆರೋಪಗಳು ಏನಿದ್ದರೂ ಮುಖಾಮುಖಿ ಚರ್ಚಿಸಲಿ ಅದಕ್ಕೆ ಸೂಕ್ತ ನ್ಯಾಯದೊರೆಯದಿದ್ದಲ್ಲಿ ಕಾನೂನು ಇದ್ದೇ ಇದೆ ಅದಕ್ಕೆ ನಾನು ಬದ್ಧನಾಗಿದ್ದೇನೆ ಎಂದರು.

ಈ ರೀತಿ ದಿನ ನಿತ್ಯ ಆರೋಪ- ಪ್ರತ್ಯಾರೋಪಗಳಿಂದ ನಮ್ಮನ್ನು ಆಯ್ಕೆಮಾಡಿದ ಜನಸಾಮಾನ್ಯರಿಗೆ ತಪ್ಪು ಮಾಹಿತಿ ನೀಡಿ ಗೊಂದಲ ಸೃಷ್ಟಿಸುವುದು ಬೇಡ, ಅದರಿಂದ ನೀವು-ನಾವು ನಾವೂನಂಬಿಕೆ ಕಳೆದುಕೊಳ್ಳುತ್ತೇವೆ ವಿನಹಾ ಅದರಿಂದ ಯಾವುದೇ ಪ್ರಯೋಜನ ವಿಲ್ಲ. ನಿಮ್ಮ ಆರೋಪಗಳು ಇರಲಿ ಅವು ನ್ಯಾಯಸಮ್ಮತವಾಗಿರಲಿ.ಜೊತೆಗೆ ನಗರದ ಅಭಿವೃದ್ದಿಯತ್ತ ಗಮನಹರಿಸಿ ಸಹಕರಿಸಿ ಎಂದರು.

ಪತ್ರಿಕಾಗೋಷ್ಟಿಯಲ್ಲಿ ನಗರಸಭಾ ಅಧ್ಯಕ್ಷ ಕೆಬಿ.ಮುದ್ದಪ್ಪ , ಉಪಾಧ್ಯಕ್ಷೆ ಜಯಲಕ್ಷ್ಮಿ ನಟರಾಜ್,ಸ್ಥಾಯಿ ಸಮಿತಿ ಅಧ್ಯಕ್ಷ ಮಲ್ಲೇಶ್,ಹಿರಿಯ ಸದಸ್ಯರು ತ.ನ.ಪ್ರಭುದೇವ್,ರಘುರಾಮ್ ಶಿವಶಂಕರ್,ಪ್ರಕಾಶ್,ರಂಗರಾಜು,ಎನ್ಕೆ.ರಮೇಶ್, ಸುಶೀಲರಾಘವ,ಮಮತ ನಾರಾಯಣ ಸ್ವಾಮಿ, ಹಾಜರಿದ್ದರು.

LEAVE A REPLY

Please enter your comment!
Please enter your name here