ನಗರಸಭೆ ಪೀಠೋಪಕರಣಗಳು ಧ್ವಂಸಾ‌..!?

0
55

ಬಂಟ್ಟಿಂಗ್ಸ್ ಬ್ಯಾನರ್ ತೆರವುಗೊಳಿಸಿದಕ್ಕೆ ನಗರಸಭೆ ಪೀಠೋಪಕರಣಗಳು ಧ್ವಂಸ.

ಚಿಕ್ಕಬಳ್ಳಾಪುರ/ ಚಿಂತಾಮಣಿ :- ನಗರಸಭೆ ಆವರಣದಲ್ಲಿ ಯುವಕರ ಗುಂಪೊಂದು ಕಛೇರಿ ಒಳಗೆ ಇರುವ ಪೀಠೋಪಕರಣಗಳು ಧ್ವಂಸಗೊಳಿಸಿರುವ ಘಟನೆ ಗುರುವಾರ ನಗರದಲ್ಲಿ ನಡೆದಿದೆ.

ಈದ್ ಮಿಲಾದ್ ಹಬ್ಬಕ್ಕೆ ನಗರಾದ್ಯಂತ ಮುಸ್ಲಿಂ ಸಮುದಾಯದವರು ಅಳವಡಿಸಿದ್ದ ಬ್ಯಾನರ್ ಮತ್ತು ಬಂಟ್ಟಿಂಗ್ ಗಳನ್ನು ನಗರಸಭೆ ಅಧಿಕಾರಿಗಳು ತೆರವುಗೊಳಸಿ ಕಸದ ಬುಟ್ಟಿಗೆ ಹಾಕಿದನು ಖಂಡಿಸಿ ನಗರದ ಮುಸ್ಲಿಂ ಸಮುದಾಯದ ಯುವಕರು ಗುಂಪೊಂದು ನಗರಸಭೆ ಕಚೇರಿಗೆ ನುಗ್ಗಿ ದಾಂಧಲೆ ನಡೆಸಿ ಕಛೇರಿಯ ಗಾಜುಗಳನ್ನು ಹೊಡೆದು ಪುಡಿ ಪುಡಿ ಮಾಡಿದ ಘಟನೆ ಗುರುವಾರ ನಡೆದಿದೆ.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಉಪ ವಿಭಾಗ ಪೊಲೀಸ್ ಅಧಿಕಾರಿ ಡಿವೈಎಸ್ಪಿ ನಾಗೇಶ್, ಸರ್ಕಲ್ ಇನ್ಸ್ಪೆಕ್ಟರ್ ನಾರಾಯಣಸ್ವಾಮಿ ಅವರು ಭೇಟಿ ನೀಡಿದ ನಂತರ ನಗರ ಸಭೆ ಪೌರಾಯುಕ್ತ ಹರೀಶ ಪೊಲೀಸರಿಗೆ ದೂರು ನೀಡಿದ ನಂತರ ಯಾರು ಸರ್ಕಾರಿ ಪೀಠೋಪಕರಣಗಳು ಧ್ವಂಸಗೊಳಿಸಿದ್ದಾರೆ ಮತ್ತು ನಗರಸಭೆಯ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರೆ ಅಂತಹ ಕೆಲ ಯುವಕರನ್ನು ಕಾನೂನು ರೀತಿ ಕ್ರಮಜಾರುಗಿಸುದಾಗಿ ದೂರನ್ನು ನೀಡಿ ನಂತರ ಪೊಲೀಸರು ಕೆಲ ಯುವಕರನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮಕೈಗೊಂಡಿದ್ದರೆ .

LEAVE A REPLY

Please enter your comment!
Please enter your name here