ನಗರಸಭೆ ಬಡ್ಜೆಟ್ ಮಂಡನೆ.

0
239

ನಗರಸಭೆ ಬಡ್ಜೆಟ್ ಮಂಡನೆ.

ಚಿಕ್ಕಬಳ್ಳಾಪುರ/ಚಿಂತಾಮಣಿ: ನಗರ ಸಭೆ ಸಭಾಂಗಣ ದಲ್ಲಿ ನಡೆದ ನಗರಸಭೆಯ 2017-18 ನೇ ಆಯವ್ಯಯ ಮಂಡನೆ ಸಂದರ್ಭದಲ್ಲಿ ಪೌರಯುಕ್ತರಿಗೆ ಮತ್ತು ಅಧಿಕಾರಿಗಳ ಮತ್ತು ಸದಸ್ಯರ ನಡುವೆ ತೀವ್ರ ಮಾತಿನ ಚಕಮುಕಿ.
ಸಭೆಯಲ್ಲಿ ಕೆಲವು ಸದಸ್ಯರು ನಗರ ಸಭೆಯ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡದೆ ನಿರ್ಲಕ್ಷ್ಯ ತೋರುತ್ತಾ ಕೊಳವೆ ಬಾವಿಗಳನ್ನು ಪರೀಶಿಲಿಸದೆ ನಿರ್ಲ ಕ್ಷವಹಿಸಿದ್ದಾರೆ ಎಂದು ಅಧಿಕಾರಿಗಳನ್ನು ಮತ್ತು ಪೌರಯುಕ್ತರನ್ನು ತೀವ್ರ ತರಾಟೆಗೆ ತೆಗೆದುಕೊಂಡುರು
ಕುಡಿಯುವ ನೀರು ಮತ್ತು ಮೂಲ ಭೂತ ಸೌಕರ್ಯಗಳಿಗೆ ಆಧ್ಯತೆ.ನಗರದಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ ಮೊದಲು ಇದರ ಬಗ್ಗೆ ಗಮನ ಹರಿಸಿ ಮತ್ತೆ ಬಜೆಟ್ ಮುಂದುವರಿಸಿ ಎಂದು ನಗರಸಭೆ ಸದಸ್ಯರು ಪೌರಯುಕ್ತರಿಗೆ ತೀವ್ರ ತರಾಟೆಗೆ ತೆಗೆದುಕೊಂಡರು.

ಚಿಂತಾಮಣಿ ನಗರದ 2017 -18 ನೇ ಸಾಲಿನ ಬಜೆಟ್ ಅನ್ನು ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ ಅಧ್ಯಕ್ಷತೆಯಲ್ಲಿ ಪೌರಾಯುಕ್ತ ಮುನಿಸ್ವಾಮಿ 68 ಲಕ್ಷ ರೂಗಳ ಉಳಿತಾಯ ಬಜೆಟ್ ಮಂಡಿಸಿದ್ದು ಈ ಸಾಲಿನ ಬಜೆಟ್ ಬಹುತೇಕ ಸಾರ್ವಜನಿಕರ ಪರವಾಗಿದ್ದು ಪ್ರಮುಖವಾಗಿ ಕುಡಿಯುವ ನೀರು ಮತ್ತು ಮೂಲಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಜಾತ ಶಿವಣ್ಣ ಉಪಾಧ್ಯಕ್ಷೆ ಸುಜಾತ ಶಿವಪ್ಪ ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀರಾಮಪ್ಪ ಸೇರಿದಂತೆ ನಗರಸಭೆ ಸರ್ವ ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here