ನಗರಸಭೆ ಮುಂದೆ ಪ್ರತಿಭಟನೆ..

0
183

ಬಳ್ಳಾರಿ /ಹೊಸಪೇಟೆ:ಸಮರ್ಪಕ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸ್ಥಳೀಯ ನಗರಸಭೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ವಿಫಲವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ ನಗರದ ಸಿರಸನಕಲ್ಲು ಬಡಾವಣೆ ನಿವಾಸಿಗಳು, ಗುರುವಾರ ನಗರಸಭೆ ಕಚೇರಿ ಆವರಣದಲ್ಲಿ ಖಾಲಿ ಬಿಂದಿಗೆಳನ್ನು ಪ್ರದರ್ಶನ ಮಾಡಿ, ಪ್ರತಿಭಟನೆ ನಡೆಸಿದರು.

ಸಿರಸನಕಲ್ಲು ಬಡಾವಣೆಯಿಂದ ಪಾದಯಾತ್ರೆ ಮೂಲಕ ನಗರಸಭೆ ಆಗಮಿಸಿದ ನಿವಾಸಿಗಳು, ಖಾಲಿ ಬಿಂದಿಗೆಳನ್ನು ಕೈಯಲ್ಲಿ ಪ್ರದರ್ಶನ ಮಾಡಿ, ನಗರಸಭೆ ಅಧಿಕಾರಿ ಹಾಗೂ ವಾರ್ಡ್ ಸದಸ್ಯರ ವಿರುದ್ಧ ಘೋಷಣೆ ಕೂಗಿದರು.

21 ಹಾಗೂ 22 ವಾರ್ಡುಗಳಿಹೆ ಹೊಂದಿಕೊಂಡಂತೆ ಸಿರಸನಕಲ್ಲು ಬಡಾವಣೆಯಲ್ಲಿ ಕುಡಿಯುವ ನೀರು, ರಸ್ತೆ ಚರಂಡಿ ಹಾಗೂ ಶೌಚಾಲಯಗಳಿಲ್ಲದೇ ಮಹಿಳೆ-ಮಕ್ಕಳು ಪರದಾಡುವಂತಾಗಿದೆ. ಇರುವ ಎರಡು ಶೌಚಾಲಯಗಳಲ್ಲಿ ಒಂದು ಶೌಚಾಲಯವನ್ನು  ಮಾತ್ರ ಜನರು, ಉಪಯೋಗ ಮಾಡುತ್ತಿದ್ದು, ಅದು ಕೂಡ ನೀರಿಲ್ಲದೇ ಗಬ್ಬು ನಾರುತ್ತಿದೆ. ಹೀಗಾಗಿ ಜನರು, ಶೌಚಾಲಯದ ಒಳಕ್ಕೆ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮತ್ತೊಂದನ್ನು ಸಂಪೂರ್ಣ ಶಿಥಿಲವಾಗಿದ್ದು, ಅದನ್ನು ನಗರಸಭೆ ಬೀಗ ಜಡಿದಿದೆ. ಎಲ್ಲಂದರಲ್ಲಿ ಕಸ, ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯದಿಂದ ವಾರ್ಡಿಗಳಲ್ಲಿ ಸ್ವಚ್ಛತೆ ಮರೀಚಿಕೆಯಾಗಿದ್ದು, ಹಲವು ಸಂಕ್ರಾಮಿಕ ರೋಗ-ರುಜಿನಗಳಿಗೆ ಕಾರಣವಾಗಿದೆ. ಅನೇಕ ಬಾರಿ ನಗರಸಭೆ ಅಧಿಕಾರಿ ಹಾಗೂ ವಾರ್ಡು ಸದಸ್ಯರಾದ ಅಬ್ದುಲ್ ಖದೀರ್ ಹಾಗೂ ಮಲ್ಲಪ್ಪ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ವಾರ್ಡಿನಲ್ಲಿ ನಮ್ಮ ಸಮಸ್ಯೆಗಳನ್ನು ಆಲಿಸುವರೇ ಇಲ್ಲ ಎಂದು ಅಳಲು ತೋಡಿಕೊಂಡರು

LEAVE A REPLY

Please enter your comment!
Please enter your name here