ನಗರಸಭೆ ಸಾಮಾನ್ಯ ಸಭೆ

0
172

ಬಳ್ಳಾರಿ /ಹೊಸಪೇಟೆ: ಸ್ಥಳೀಯ ನಗರಸಭೆ ಕಛೇರಿ ಸಭಾಂಗಣದಲ್ಲಿ ದಿ.26 ರಂದು ಬೆಳಿಗ್ಗೆ 11 ಗಂಟೆಗೆ ನಗರಸಭೆ ಸಾಮಾನ್ಯ ಸಭೆ ಜರುಗಲಿದೆ.
ನಗರಸಭೆ ಉಪಾಧ್ಯಕ್ಷೆ ಹಾಗೂ ಪ್ರಭಾರಿ ಅಧ್ಯಕ್ಷೆ ಸುಮಂಗಳಮ್ಮ ಅಧ್ಯಕ್ಷತೆಯಲ್ಲಿ ಜರುಗಲಿರುವ ಅಂದಿನ ಸಭೆಯಲ್ಲಿ ಹಿಂದಿನ ಸಾಮಾನ್ಯ ಸಭೆಯ ನಡವಳಿಗಳನ್ನು ಓದಿ ದೃಡೀಕರಿಸುವುದು.
ಪ್ರಥಮ ಸ್ಥಾಯಿ ಸಮಿತಿ ಸಭೆಯ ನಡವಳಿಗಳನ್ನು ಸ್ವೀಕರಿಸುವುದು. ಜಮಾ-ಖರ್ಚುಗಳ ಅನುಮೋದನೆ ಸೇರಿದಂತೆ ಇನ್ನಿತರ ನಗರದ ಅಭಿವೃದ್ಧಿ ವಿಷಯಗಳ ಕುರಿತು ಚರ್ಚೆ ನಡೆಸಲಾಗುವುದು ಎಂದು ನಗರಸಭೆ ಪೌರಾಯುಕ್ತ ವಿ.ರಮೇಶ್ ತಿಳಿಸಿದ್ದಾರೆ.
ಅಂದಿನ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿ ಸಭೆಯನ್ನು ಯಶಸ್ಸುಗೊಳಿಸುವಂತೆ ಅವರು ಕೋರಿದ್ದಾರೆ.

LEAVE A REPLY

Please enter your comment!
Please enter your name here