ನದಿಯಲ್ಲಿ ಬಿದ್ದು ವ್ಯಕ್ತಿ ಸಾವು…

0
312

ಬಳ್ಳಾರಿ,/ಸಿರುಗುಪ್ಪ:ತಾಲೂಕಿನ ರಾರಾವಿ ಗ್ರಾಮದ ವೇದಾವತಿ ಹಗರಿ ನದಿಯಲ್ಲಿ ನೀರು ಕುಡಿಯಲು ಹೋಗಿ ಕಾಲು ಜಾರಿ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ನಡೆದಿದೆ.

ಮೃತ ವ್ಯಕ್ತಿಯು ಮಂಗಳವಾರ ತನ್ನ ಸಹೋದರ ಸಂಬಂಧಿಯ ಮನೆಗೆ ಆಗಮಿಸಿ ಹಿಂದಿರುಗುವ ಸಮಯದಲ್ಲಿ ರಾರಾವಿ ಗ್ರಾಮದ ಹಗರಿ ನದಿ ದಡದಲ್ಲಿ ತನ್ನ ದ್ವಿಚಕ್ರವಾಹನ ನಿಲ್ಲಿಸಿ ನೀರುಕುಡಿಯಲು ಹೊಗಿ ಹಗರಿ ನದಿಯಲ್ಲಿ ಕೊಚ್ಚಿ ಹೋಗಿದ್ದಾನೆ.

ಮೃತನ ಸಂಬಂಧಿಗಳು ದ್ವಿಚಕ್ರ ವಾಹನ ಬಿಟ್ಟದನ್ನು ಗಮನಿಸಿ ಹುಡುಕಾಟ ನಡೆಸಿದಾಗ ಹಗರಿ ನದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತನು ಸಿಂಧನೂರು ತಾಲೂಕಿನ ಅಲಬನೂರು ಗ್ರಾಮದ ನಿವಾಸಿ ಬಸವರಾಜ್(33) ವರ್ಷ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಸಿರುಗುಪ್ಪ ಠಾಣಾ P S I. ಎನ್.ರಘು ಪರಿಶಿಲನೆ ನಡಸಿದ್ದಾರೆ. ಈ ಕುರಿತು ಸಿರುಗುಪ್ಪ ಠಾಣೆಯಲ್ಲಿ ಪ್ರಕರಣ ದಾಖಾಗಿದೆ.

LEAVE A REPLY

Please enter your comment!
Please enter your name here