ನದೀ ಪಕ್ಕದಲ್ಲಿದ್ದರೂ ಕುಡಿಯಲು ನೀರಿಲ್ಲ..! ಎಂಥಾ ದೌರ್ಭಾಗ್ಯ

0
168

ಬಳ್ಳಾರಿ /ಹೊಸಪೇಟೆ: ಪಕ್ಕದಲ್ಲೇ ತುಂಗಭದ್ರಾ ಜಲಾಶಯ ಇದ್ರೂ ಇವರಿಗೆ ಜಲಾಶಯದ ನೀರು ಕುಡಿವ ಭಾಗ್ಯ ಇಲ್ಲ-ಬೋರಿಂಗ್ ನೀರಿಗೂ ತತ್ವಾರ-ಹೊಸಪೇಟೆಯ ಅನಂತಶಯನಗುಡಿ ಗ್ರಾಮಸ್ಥರ ಅಳಲು-ನಗರಸಭೆ ಕೇವಲ ಹೆಸರಿಗೆ ಮಾತ್ರ-ಜನ್ರು ಮಾತ್ರ ಕುಡಿವ ನೀರಿಗೂ ಪರದಾಡಬೇಕಾದ ಪರಿಸ್ಥಿತಿಯಲ್ಲಿ-ಸೆ.1ರಂದು ರಸ್ತೆ ತಡೆಗೆ ನಿರ್ಧಾರ

ಹೇಳಿಕೊಳ್ಳೋಕೆ ಹೆಸ್ರು ಮಾತ್ರ ಹೊಸಪೇಟೆ. ಇದರ ಒಳ ಹೊಕ್ಕು ನೋಡಿದಾಗ ಬರೀ ಹುಳುಕುಗಳೇ ಕಾಣಸಿಗುತ್ತವೆ. ಇದಕ್ಕೆ ತಾಜಾ ಉದಾಹರಣೆ ಅಂದ್ರೆ ಅನಂತಶಯನ ಗುಡಿ.

ಇದು ಹೊಸಪೇಟೆ ನಗರದ 7 ನೇ ವಾರ್ಡಿನಲ್ಲಿ ಬರುವ ಅನಂತಶಯನಗುಡಿ ತಾಂಡಾ. ಈ ಪ್ರದೇಶದಲ್ಲಿ 1500 ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿವೆ. ಬಹುತೇಕ ರೈತರು, ಕೃಷಿ, ಕೂಲಿ ಕಾರ್ಮಿಕರೇ ಇಲ್ಲಿ ಕಳೆದ ಹಲವಾರು ವರ್ಷಗಳಿಂದ ಉಪಜೀವಿಸುತ್ತಿದ್ದಾರೆ. ಆದ್ರೆ, ಇವರ ಗೋಳು ಕೇಳುವವರು ಯಾರೂ ಇಲ್ಲದಂತಾಗಿದೆ.

ಪಕ್ಕದಲ್ಲೇ ತುಂಗಭದ್ರಾ ಜಲಾಶಯ ಇದೆ. ಮಲಪನಗುಡಿ ಗ್ರಾಮ‌ ಪಂಚಾಯಿತಿಯಿಂದ ಹೊಸಪೇಟೆ ನಗರಸಭೆಗೆ ಸೇರ್ಪಡೆಯಾಗಿ 25 ವರ್ಷ ಗತಿಸಿದರೂ ಕುಡಿವ ನೀರಿಗಾಗಿ ಪರಿತಪಿಸುವಂತಾಗಿದೆ. ಈ ಭಾಗದ ಜನ್ರಿಗೆ ಇಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬಗ್ಗೆ ಭಾರೀ ಆಕ್ರೋಶವಿದೆ.

ಸತತ ಇಪ್ಪತೈದು ವರ್ಷಗಳಿಂದ ಬೋರಿಂಗ್ ನೀರನ್ನೇ ಸೇವಿಸಿಕೊಂಡು ಬಂದರೂ ಸದರಿ ನೀರಿಗೂ ತತ್ವಾರ ಎದುರಾಗಿದೆ. ಅಂತರ್ಜಲ ಕುಸಿತದಿಂದ ಬೋರ್ ವೆಲ್ ನೀರೂ ಸಹ ದಕ್ಕದಂತಾಗಿದೆ.

ಪಕ್ಕದಲ್ಲೇ ಬಳ್ಳಾರಿ ಬೈಪಾಸ್ ರಸ್ತೆ ಹಾದು ಹೋಗಿದ್ದು, ಭಾರೀ ವಾಹನಗಳ ಓಡಾಟದಿಂದಾಗಿ ಪ್ರತಿದಿನ ನೀರು ಸರಬರಾಜು ಮಾಡುವ ಪೈಪುಗಳು ಒಡೆದುಹೋಗುತ್ತಿವೆ. ಶಾಶ್ವತ ಸಿಹಿ ನೀರಿನ ವ್ಯವಸ್ಥೆ ಮಾಡುವಂತೆ ಸಾಕಷ್ಟು ಸಾರಿ ಮನವಿ ಮಾಡಿದರೂ ಇಲ್ಲಿನ ಶಾಸಕರು ಮತ್ತು ನಗರಸಭೆ ಅಧಿಕಾರಿಗಳು ಗಮನಹರಿಸುತ್ತಿಲ್ಲ.

ಹೀಗಾಗಿ, ವಿಜಯನಗರ ಯುವ ವೇದಿಕೆಯಡಿ ಸೆಪ್ಟೆಂಬರ್‌ 1 ರಂದು ರಸ್ತೆ ತಡೆ ಹೋರಾಟ ನಡೆಸಲಿದ್ದೇವೆ. ಆ ಮೂಲಕ ಆಡಳಿತಕ್ಕೆ ಬಿಸಿ ಮೂಡಿಸಲಿದ್ದೇವೆ ಎಂದು ಸ್ಥಳೀಯ ಮಹಿಳೆಯರಾದ ಸುಧಾರಾಣಿ ಮತ್ತು ದೇವೀಬಾಯಿ ಗೆ ಹೇಳಿದ್ದಾರೆ.

ಬೈಟ್:1) ಸುಧಾರಾಣಿ, ಸ್ಥಳೀಯ ಯುವತಿ.

ಬೈಟ್:2) ದೇವೀಬಾಯಿ, ಸ್ಥಳೀಯ ಗೃಹಿಣಿ.

LEAVE A REPLY

Please enter your comment!
Please enter your name here