ನಮ್ಮೂರು ನಲ್ಲಿ ಬಣ್ಣದ ಕೊಕ್ಕರೆಗಳು

0
190

ಬಳ್ಳಾರಿ/ಹೊಸಪೇಟೆ : ಐತಿಹಾಸಿಕ ವಿಜಯನಗರ ಕಾಲದ ಕಮಲಾಪುರ ಕೆರೆಯಲ್ಲಿ ಗುಲಾಬಿ ಬಣ್ಣದ ಪೇಂಟೆಡ್ ಸ್ಟ್ರಾಕ್ (ಕೊಕ್ಕರೆ)ಗಳು ಬೀಡು ಬಿಟ್ಟಿವೆ. ಬೇಸಿಗೆ ಹಿನ್ನಲೆಯಲ್ಲಿ ಕಾಲುವೆಗೆ ನೀರು ಸ್ಥಗಿತ ಗೊಂಡಿದ್ದು ಕೆರೆಯ ನೀರು ಬತ್ತಿರುವುದರಿಂದ ಸಣ್ಣ ಪುಟ್ಟ ಜಲಚರ ಪ್ರಾಣಿಗಳು ಹೊರಬಂದ್ದಿದ್ದು ಹಕ್ಕಿಗಳಿಗೆ ಆಹಾರವಾಗಿವೆ. ಆಹಾರ ಅರಸಿ ವಲಸೆ ಬಂದಿರುವ ಹಕ್ಕಿಗಳು ಕೆರೆಯ ದಂಡೆಯ ಮೇಲೆ ಬೇಟೆಗಾಗಿ ಹೊಂಚು ಹಾಕಿ ಕುಳಿತಿದ್ದು ನೋಡುಗರನ್ನು ಆಕರ್ಷಿಸುತ್ತಿವೆ. ದಕ್ಷಿಣ ಹಿಮಾಲಯ ಹಾಗೂ ಶೀತೋಷ್ಣವಲಯದಲ್ಲಿ ಹೆಚ್ಚಾಗಿ ಕಾಣಸಿಗುವ ಈ ಹಕ್ಕಿಗಳು ಸಾಮನ್ಯವಾಗಿವೆ. ಗುಲಾಬಿ ಮತ್ತು ಹಳದಿ ಬಣ್ಣದ ಗರಿಗಳನ್ನು ಹೆಚ್ಚಾಗಿ ಹೊಂದಿರುವ ಇವುಗಳು ಉದ್ದನೆಯ ಕೊಕ್ಕಿನೊಂದಿಗೆ ಸಣ್ಣ ಸಣ್ಣ ಮೀನುಗಳನ್ನು ಶೀಘ್ರದಲ್ಲಿ ಬೇಟೆ ಹಾಡುತ್ತವೆ. ತೇವಾಂಶ ಹೊಂದಿನ ಜಿಗಟು ಮಣ್ಣಿನಲ್ಲಿ ಚಪ್ಪಟೆ ಪಾದಗಳಿಂದ ಕೆಸರಿನಲ್ಲಿರುವ ಕೀಟಗಳನ್ನು ಹೊರತೆಗೆದು ತಿನ್ನುತ್ತಿವೆ. ಆಹಾರಕ್ಕಾಗಿ ಹೆಚ್ಚು ದೂರ ಕ್ರಮಿಸದೆ ಹತ್ತಿರದಲ್ಲಿರುವ ಕೆರೆ, ಹಳ್ಳ, ನದಿಗಳನ್ನು ಆಶ್ರಯಿಸಿಸುವುದು ಇದರ ವಿಶೇಷತೆ. ಸಣ್ಣ ಪುಟ್ಟ ಮರದ ಪೊದರೆಗಳಲ್ಲಿ ಸಣ್ಣ ಗೂಡುಗಳನ್ನು ಕಟ್ಟಿಕೊಂಡು ಸಂತಾನೋತ್ಪತ್ತಿ ಆರಂಬಿಸುತ್ತವೆ.

“ಕೆರೆಯಲ್ಲಿ ಹೂಳು ಹೆಚ್ಚಾಗಿರುವುದರಿಂದ ಮುಂದೆ ಪಕ್ಷಿಗಳು ಸಹ ಕಣ್ಮರೆಯಾಗುತ್ತವೆ. ಕೆರಂಲ್ಲಿನ ಹೂಳು ತೆಗೆದು ಮದ್ಯದಲ್ಲಿ ದ್ವೀಪದಂತ ಪ್ರದೇಶಗಳನ್ನು ನಿರ್ಮಾಣ ಮಾಡಿದರೆ ಪಕ್ಷಿಗಳ ಸಂತನೋತ್ಪತ್ತಿಗೆ ಸಹಾಯವಾಗಿ ಜೊತೆಗೆ ರೈತರಿಗೂ ಅನುಕೂಲವಾಗುತ್ತದೆ.”
ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳಿಮಠ, ಕಮಲಾಪುರ.

LEAVE A REPLY

Please enter your comment!
Please enter your name here