ನವಜಾತ ಶಿಶು ಪತ್ತೆ…

0
174

ಬೀದರ್/ಬಸವಕಲ್ಯಾಣ: ತಾಯಿ ಅಕ್ಕರೆಯಲ್ಲಿ ನಲಿಯಬೇಕಿದ್ದ ಮಗುವೊಂದು ಕಣ್ಣು ಬಿಡುವ ಮುನ್ನವೇ ರಸ್ತೆ ಬದಿ ಅನಾಥವಾಗಿ ಬಿದ್ದಿರುವ ಘಟನೆ ತಾಲೂಕಿನ ರಾಜೋಳಾ ಗ್ರಾಮದ ಬಳಿ ನಡೆದಿದೆ.

ರಾಜೋಳಾದಿಂದ ಘಾಟಬೋರಾಳ ಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆ ರಸ್ತೆ ಬದಿಯ ಮುಳ್ಳಿನ ಪೊದೆಯಲ್ಲಿ ಗಂಡು ಮಗು ಕಾಣಿಸಿಕೊಂಡಿದ್ದು, ಜನಿಸಿದ ಕೆಲವೆ ಸಮಯದಲ್ಲಿ ಮಗುವನ್ನು ಬಿಟ್ಟು ತೆರಳಿದ್ದಾರೆ. ಅನಾಥ ಸ್ಥಿತಿಯಲ್ಲಿ ಮಗು ಕಂಡ ಗ್ರಾಮಸ್ಥರು ಪೊಲೀಸ್ರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿದ ಇಲ್ಲಿಯ ಗ್ರಾಮೀಣ ಠಾಣೆಯ ಮುಖ್ಯ ಪೇದೆ ಸಂತೋಶ ರೆಡ್ಡಿ ಹಾಗೂ ಬಳಿರಾಮ ಸ್ಥಳಕ್ಕೆ ಭೇಟಿ ಮಗುವಿಗೆ ನಗರದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಮಗುವಿನ ಆರೋಗ್ಯ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ನೀಡಲಾಗಿದೆ. ಮಗು ಆರೋಗ್ಯವಂತಾಗಿದ್ದು, ಶನಿವಾರ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳ ಸಮ್ಮುಖದಲ್ಲಿ ಅನಾಥಲಯಕ್ಕೆ ಹಸ್ತಾಂತರಿಸಲಾಗುವದು ಎಂದು ಗ್ರಾಮೀಣ ಠಾಣೆ ಪಿಎಸ್ಐ ರಘುವೀರಸಿಂಗ್ ಠಾಕೂರ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here