ನವಶಕ್ತಿ ಸಮಾವೇಶ…

0
121

ವಿಜಯಪುರ/ಸಿಂದಗಿ: ದೇಶದಲ್ಲಿ ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ. ಇತರ ದೇಶಗಳು ಕೂಡಾ ನರೇಂದ್ರ ಮೋದಿಯವರ ಆಡಳಿತ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಎಂದು ಕೇಂದ್ರ ಸಚವ ರಮೇಶ ಜಿಗಜಿಣಗಿ ಹೇಳಿದರು.

ಸಿಂದಗಿ ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಮಂಡಲದ ನವಶಕ್ತಿ ಸಮಾವೇಶ ಉದ್ಘಾಟಿಸಿ ಮಾತನಾಡಿ.,
ಸಿದ್ದರಾಮಯ್ಯ ಸರಕಾರ ತುಷ್ಟೀಕರಣದ ರಾಜಕಾರಣ ಮಾಡುತ್ತಿದೆ.
ಬಿಜೆಪಿ ಆಡಳಿತ ಇರುವ ಸಂದರ್ಭ ಜಾತಿ ರಾಜಕಾರಣ ಮಾಡಿಲ್ಲ ಆದರೇ ಸಿದ್ದರಾಮಯ್ಯ ಸರಕಾರ ಮತಗಳ ಲಾಲಸೆಯಿಂದ ಸಮಾಜದಲ್ಲಿ ಒಡಕು ಮೂಡಿಸಿದೆ. ಕೇಂದ್ರ ಸರಕಾರದ ಅನುದಾನಗಳನ್ನು ತನ್ನದೆಂದು ಬಿಂಬಿಸುತ್ತಿರುವುದು ವಿರ್ಪಯಾಸ ಎಂದರು.

ವೇದಿಕೆ ಮೇಲೆ ಅಥಣಿ ಶಾಸಕ ಲಕ್ಷ್ಮಣ ಸವದಿ, ಶಾಸರ ರಮೇಶ ಭೂಸನೂರ, ಜಿಲ್ಲಾಧ್ಯಕ್ಷ ವಿಠ್ಠಲ ಕಟಕದೊಂಡ, ಜಿಲ್ಲಾ ಕಾಯ೯ದಶಿ೯ ಸಂದೀಪ ಚೌರ, ತಾಲೂಕಾ ಯುವ ಮೋಚಾ೯ ಪ್ರದಾನ ಕಾಯ೯ದಶಿ೯ ಗುರು ಅಗಸರ, ತಾಲೂಕಾ ಯುವ ಮೋಚಾ೯ ಅದ್ಯಕ್ಷ ಬಸು ಸಜ್ಜನ, ತಾಲೂಕಾಧ್ಯಕ್ಸ ಸಿದ್ದು ಬುಳ್ವಾ, ಜಾಗೃತಿ ಸಮಿತಿ ಸದಸ್ಯರಾದ ಶ್ರೀಕಾಂತ ಸೋಮಜ್ಯಾಳ, ಈರಣ್ಣ ರಾವೂರ, ಹಾಗೂ ಜಿಲ್ಲಾ ಪಂಚಾಯತ ಸದಸ್ಯರು, ಬೂತಮಟ್ಟದ ಸಾವಿರಾರು ಕಾಯ೯ಕತ೯ರು ಪಾಲ್ಗೊಂಡಿದ್ದರು.

ವರದಿ: ನಮ್ಮೂರು ಟಿವಿ ನಂದೀಶ ಹಿರೇಮಠ. ಸಿಂದಗಿ

LEAVE A REPLY

Please enter your comment!
Please enter your name here