ನಾಗಮಣಿ ಬೆಳಕು.. …ಚೌಡೇಶ್ವರಿ ದರ್ಶನ.!

0
1342

ಚಿಕ್ಕಬಳ್ಳಾಪುರ/ ಗುಡಿಬಂಡೆ:ಪಟ್ಟಣದ ನಖಾಜೀಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಯುಗಾದಿ ಹಬ್ಬದ ದಿನವಾದ ಬುಧವಾರ ಬೆಳ್ಳಂ ಬೆಳಿಗ್ಗೆ ದೇವಾಲಯದಲ್ಲಿ ನಾಗರ ಹಾವು ಪತ್ಯಕ್ಷವಾಗಿದ್ದು ದೇವರ ಮುಂದೆ ಮಿರ ಮಿರ ಹೊಳೆಯುವ ಮಣಿಯನ್ನು ನೋಡಲು ದೇವಾಲಯದ ಮುಂದೆ ಜನ, ಜಾತ್ರೆಯ ವಾತಾವರಣ ಮೂಡಿತ್ತು

ಪಟ್ಟಣದ ಚೌಡೇಶ್ವರಿ ದೇವಾಲಯದಲ್ಲಿ ವಿಸ್ಮಯ ಎಂಬುವಂತೆ ದೇವಾಲಯದಲ್ಲಿರುವ ನಾಗರಹಾವು ಮತ್ತು ನಾಗಮಣಿಯನ್ನು ನೋಡಲು ಜನಸಾಗರವೇ ಸೇರುತ್ತು. ನಾಗರಹಾವು ದೇವಾಲಯದ ಗರ್ಭಗುಡಿಯಲ್ಲೇ ಇದ್ದು ನಾಗರಹಾವಿನ ಮಣಿ ಚೌಡೇಶ್ವರಿ ದೇವರ ಮುಂದೆ ಅಕ್ಕಿತಟ್ಟೆಯಲ್ಲಿ ಕಾಣಿಸಿಕೊಂಡಿದ್ದು ಅದು ಮಿರ ಮಿರ ಹೊಳೆಯುತ್ತಿರುವುದನ್ನು ಕಂಡ ಪಟ್ಟಣದ ಜನರು ಜನ ಮರಳೋ ಜಾತ್ರೆ ಮರಳೋ ಎಂಬಂತೆ ದೇವಾಲಯದಲ್ಲಿ ಜನರು ಹೊಳೆಯುತ್ತಿರುವ ಮಣಿ ಮತ್ತು ನಾಗರಹಾವನ್ನು ನೋಡಲು ಮುಗಿಬಿದ್ದಿದರು.

ಇದು ನಿಜಾನಾ?: ಚಲಚಿತ್ರಗಳಲ್ಲಿ ನೋಡಿದಾಗ ಹಿಂದಿನ ಕಥೆಗಳನ್ನು ಓದಿದಾಗ ನಾಗರಹಾವುಗಳು ಹುಣ್ಣಿಮೆ ದಿನದಂದು ನಾಗರಮಣಿ ಬಿಟ್ಟು ಸರಸಕ್ಕೆ ಹೋಗುವುದೆಂದು ಕೇಳೆದ್ದೇವೆ. ಆದರೆ ಅಮಾವಾಸ್ಯೆ ದಿನ ಮಣಿ ಬಿಡುತ್ತದೆಯೇ ಇದು ಸುಳ್ಳು ಇದು ಯಾವುದೋ ಎಲ್.ಇ.ಡಿ. ಲೈಟ್ ಅದು ಮಿಣ ಮಿಣ ಎನ್ನುತ್ತಿದೆ ಎಂದು ಅಲ್ಲಿ ನೆರೆದಿರುವ ಕೆಲವರು ಮಾತನಾಡಿಕೊಳ್ಳುತ್ತಿದ್ದರು

ರಹಸ್ಯ ಬಯಲಾಯ್ತು: ಅಲ್ಲಿ ನೆರೆದಿದ್ದ ಕೆಲವರಿಗೆ ಮೂಡಿದ ಅನುಮಾನ ನಿಜವಾಗಿದೆ. ಅರ್ಚಕ ನಿಜಾಂಶ ಬಾಯ್ಬಿಟ್ಟದ್ದಾನೆ, ಹಾಳು ಬಿದಿದ್ದ ದೇವಸ್ಥಾನಕ್ಕೆ ಜನರು ಹೆಚ್ಚಾಗಿ ಬರಲಿ ಎಂದು ನಾನೆ ರೀತಿ ಮಾಡಿದ್ದೇನೆ ಎಂದು ಪೊಲೀಸರಮುಂದೆ ಒಪ್ಪಿಕೊಂಡಿದ್ದಾನೆ. ಅರ್ಚಕ ಪ್ರಶಾಂತ್ ನನ್ನು ಪೊಲೀಸರು ವಶಕ್ಕೆಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಹಾವನ್ನು ಅರಣ್ಯ ಇಲಾಖೆ ವಶಕ್ಕೆ ನೀಡಲಾಗಿದ್ದು

LEAVE A REPLY

Please enter your comment!
Please enter your name here