ನಾಡದ್ರೋಹಿ “ಕೈ”ನಾಯಕಿ ವಿರುದ್ಧ ಕರವೇ ಪ್ರತಿಭಟನೆ

0
265

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ರಾಜ್ಯ ಕಾಂಗ್ರೆಸ್ ನಾಯಕಿ ಲಕ್ಷ್ಮೀಹೆಬ್ಬಾಳ್ಕರ್ ಬೆಳಗಾವಿಯನ್ನು ಮಹಾರಾಷ್ಟಕ್ಕೆ ನೀಡಿದರೇ ಮೊದಲನೇ ಬಾವುಟ ಹಾರಿಸುದು ನಾನೇ ಎಂಬ ನಾಡ ದ್ರೋಹಿ ಹೇಳಿಕೆಯನ್ನು ಖಂಡಿಸಿ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯಕರ್ತರು ನಗರದ ಸಿದ್ದಲಿಂಗಯ್ಯ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಕಾರ್ಯದರ್ಶಿ ರಾಜಘಟ್ಟರವಿ ಕೈನಾಯಕಿಯ ವರ್ತನೆಯನ್ನು ತೀರ್ವವಾಗಿ ಖಂಡಿಸಿದರು.ನಾಡ ದ್ರೋಹಿ ಹೇಳಿಕೆ ನೀಡಿ ಸ್ವಾಭಿಮಾನಿ ಕನ್ನಡಿಗರನ್ನು ಕೆಣಕುತ್ತಿರುವುದು ಶೋಭೆ ತರುವಂತದಲ್ಲಾ, ರಾಜ್ಯದ ಆಡಳಿತ ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದು ಜವಾಬ್ದಾರಿಯನ್ನು ಮರೆತು ನಾಡದ್ರೋಹಿ ಹೇಳಿಕೆ ನೀಡಿ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾದ ನಂತರ ನೆಪಮಾತ್ರಕ್ಕೆ ಕ್ಷಮೆಯಾಚಿಸಿದರೆ ನಾವು ಸಹಿಸೋಲ್ಲ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

ಈ ಕೂಡಲೇ ರಾಜ್ಯ ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಸ್ಥಾನದಿಂದ ತೊಲಗಬೇಕು ಮತ್ತು ತಮ್ಮ ಒಲವಿನ ಮಹಸರಾಷ್ಟ್ರದಲ್ಲೆ ತನ್ನ ಅಧಿಕಾರ ಚಲಾಯಿಸುಕೊಳ್ಳಲಿ ಈ ಕೂಡಲೇ ನಾಡುಬಿಟ್ಟು ತೊಲಗುವಂತೆ ಒತ್ತಾಯಿಸಿದರು. ಒಂದು ವೇಳೆ ಪ್ರಭಾವ ಬಳಸಿ ಅಧ್ಯಕ್ಷ ಸ್ಥಾನದಲ್ಲಿ ಮುಂದುವರೆದಿದ್ದೇ ಆದರೇ ರಾಜ್ಯದ ಎಲ್ಲಾ ಕನ್ನಡ ಪರ ಸಂಘಟನೆಗಳು ಆಕೆಯ ವಿರುದ್ದ ಬೀದಿಗಿಳಿದು ಹೋರಾಟ ನಡೆಸಬೇಕಾದೀತು ಅದೂ ಕೇವಲ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧದ ಹೋರಾಟವಲ್ಲಾ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟವಾದೀತು ಕೂಡಲೇ ಎಚ್ಚೆತ್ತು ಪಕ್ಷದ ವರಿಷ್ಟರೂ ಮುಖ್ಯ ಮಂತ್ರಿ ಸಿದ್ದರಾಮಯ್ಯ ನವರು ಕೂಡಲೇ ನಾಡದ್ರೋಹಿ ನಾಯಕಿ ಮೇಲೆ ಕ್ರಮಜರುಗಿಸ ಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ತಾಲ್ಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಉಪಾಧ್ಯಕ್ಷ ಬಷೀರ್, ಪ್ರಧಾನ ಕಾರ್ಯದರ್ಶಿ ವೇಣು,ನಗರಾಧ್ಯಕ್ಷ ಎಸ್ಕೆ,ಸತೀಶ್,ಹಮಾಮ್ ಪ್ರಕಾಶ್ ಸೇರಿದಂತೆ ಅನೇಕ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here