ನಾಡ ಹಬ್ಬ ದಸರಾ ಸಂಭ್ರಮ.

0
191

ಬೆಂಗಳೂರು/ಕೆ.ಆರ್.ಪುರ:- ನಾಡ ಹಬ್ಬ ದಸರಾ ಸಂಭ್ರಮ ನಾಡಿನಾದ್ಯಂತ ಮನೆಮಾಡಿದೆ, ಆದರೆ ಹಬ್ಬಕ್ಕೆ ಬೇಕಾದ ಅಗತ್ಯವಸ್ತುಗಳ ಖರೀದಿಗೆ ಆಗಮಿಸಿದ ಗ್ರಾಹಕರಿಗೆ ಮಾತ್ರ ಸ್ವಲ್ಪ ಬೇಸರ ಮೂಡಿಸಿದೆ,ನಗರದ ಕೃಷ್ಣರಾಜಪುರದ ಪ್ರಖ್ಯಾತ ಸಂತೆಯಲ್ಲಿ ಹಬ್ಬಕ್ಕೆ ಅಗತ್ಯವಿರುವ ವಸ್ತುಗಳ ಖರೀದಿ ಜೋರಾಗೊಯೇ ಕಂಡು ಬಂತು. ವಿಜಯದಶಮಿ ಆಯುಧ ಪೂಜೆಗೆಂದು ಮಾರುಕಟ್ಟೆಗೆ ಲಗ್ಗೆ ಯಿಟ್ಟಿರುವ ಕುಂಬಳಕಾಯಿ, ಕಬ್ಬು, ಬಾಳೆ ಕಂಬ, ಬಗೆ ಬಗೆಯ ಹೂಗಳು, ಹರಿಶಿಣ, ಕುಂಕುಮ, ಇವಲ್ಲಾ ಕಂಡು ಬಂದದ್ದು ಕೆಆರ್ಪುರದ ಸಂತೆಯಲ್ಲಿ, ನಾಡ ಹಬ್ಬ ದಸರೆಗೆ ಎಂದರೆ ದುಷ್ಟ ಶಿಕ್ಷಣ ಶೀಷ್ಟ ರಕ್ಷಣ ಎಂಬ ನಂಬಿಕೆಯಂತೆ ಇದಕ್ಕೆ ದುರ್ಗಾದೇವಿಗೆ ಪೂಜಿಸಿದರೆ ನಮ್ಮಲ್ಲಿರುವ ಎಲ್ಲಾ ಬಗೆಯ ಸಮಸ್ಯಗಳನ್ನು ಪರಿಹರಿಸುತ್ತಾಳೆಂಬ ನಂಬಿಕೆ ಇದೆ. ಹಾಗಾಗಿ ಜನರಲ್ಲಿ ಹೊಸ ಹುರುಪು ಮೂಡಿದ್ದು, ರಾಜ್ಯಾದ್ಯಂತ ಹಬ್ಬದ ವಾತಾವರಣವೇ ಮುಡಿದೆ, ಇನ್ನು ಕೆಆರ್ಪುರ ಸಂತೆಗೆ ಜನ ಹಬ್ಬಕ್ಕೆ ಬೇಕಾದ ಸಾಮಗ್ರಿಗಳ ಖರೀದಿಗೆ ತಂಡೋಪ ತಂಡಗಳಾಗಿ ಆಗಮಿಸುತ್ತಿದ್ದು, ವಸ್ತುಗಳ ಬೆಲೆ ಕೇಳಿ ದಂಗಾಗಿದ್ದಾರೆ, ಕಳೆದ ವರ್ಷಕ್ಕಿಂತಲೂ ಈ ವರ್ಷ ಬೆಲೆ ಹೆಚ್ಚಿದ್ದು, ಜನ ವಸ್ತುಗಳನ್ನು ಖರೀದಿಸುವುದೋ ಬೇಡವೋ ಎಂಬ ದ್ವಂದ್ವದಲ್ಲಿದ್ದಾರೆ, ಏನೆ ಆದರೂ ವರ್ಷಕ್ಕೊಂದು ಹಬ್ಬ ಎಷ್ಟೇ ಬೆಲೆಯಾದರೂ ಸಹಿತ ಕೊಂಡು ಹಬ್ಬ ಆಚರಿಸುವುದಾಗಿ ಜನ ಅಭಿಪ್ರಾಯಪಟ್ಟಿದ್ದಾರೆ. ಪ್ರತಿಯೊಂದು ಹಬ್ಬಕ್ಕೂ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆ ಕಾಣುತ್ತಲೇ ಇದೆ, ಹಬ್ಬಕ್ಕೆ ದೇವರ ಪೂಜಿಸುವ ಸಲುವಾಗಿ ಬೆಲೆ ಏರಿದ್ದರೂ ಅನಿವಾರ್ಯವಾಗಿ ವಸ್ತುಗಳ ಖರೀದಿಯಲ್ಲಿ ಜನ ತೊಡಗಿರುವುದು ಎಲ್ಲೆಡೆ ಕಂಡು ಬಂತು, ಬಡವರ್ಗದ ಜನತೆ ಹಬ್ಬ ಆಚರಿಸುವುದು ಕನಸೇ ಆಗಿದೆ, ಅದೇನೆ ಆಗಲಿ ಹಿಂದು ಸಂಪ್ರದಾಯದಂತೆ ಹಬ್ಬದ ದಿನ ಧಾರ್ಮಿಕ ನಂಭಿಕೆಗಳ ಮಾತ್ರವಲ್ಲದಿದ್ದರೂ ಮನೆ ಮಕ್ಕಳ ಸಂತಸಕ್ಕಾಗಿ ಆದರೂ ಹಬ್ಬ ಆಚರಿಸಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಾರೆ ಈ ವಿಜಯ ದಶಮಿ ಹಬ್ಬ ರಾಜ್ಯದ ಜನತೆಗೆ ಸುಖ ಶಾಂತಿ ನೆಮ್ಮದಿ ನೀಡಲಿ ಎಂದು ಆಶೀಸೋಣ.

LEAVE A REPLY

Please enter your comment!
Please enter your name here