ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ ನಂದೀಶ ರೆಡ್ಡಿ.

0
119

ಬೆಂಗಳೂರು/ಕೆ.ಆರ್.ಪುರ : ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಂದೀಶ್ ರೆಡ್ಡಿ ರವರು ಅವರ ಪತ್ನಿ ರೂಪ ಹಾಗೂ ಕ್ಷೇತ್ರದ ಸಾವಿರಾರು ಮತದಾರರೋಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದ್ದಾರೆ.
ಕೆ.ಆರ್.ಪುರ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಬಂದನತಂತರ ಅವರು ನೆರೆದಿದ್ದ ಜನಸಾಗರದತ್ತ ಕೈ ಬೀಸಿ ಉರಿದುಂಬಿಸಿದರು.
ಇನ್ನು ನಂದೀಶ್ ರೆಡ್ಡಿ ಅವರು ನಾಮಪತ್ರ ಸಲ್ಲಿಸಲು ಆಗಮಿಸಿದ್ದ ವೇಳೆ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರಿಂದ ಓಲ್ಡ್ ಮದ್ರಾಸ್ ರಸ್ತೆಯಲ್ಲಿ ಸಂಪೂರ್ಣ ಟ್ರಾಫಿಕ್ ಜಾಮ್ ಉಂಟಾಗಿದ್ದು ವಾಹನ ಸವಾರರು ಪರೆದಾಡುವಂತಾಯಿತು.
ಇನ್ನು ಪೊಲೀಸರು ಕಾರ್ಯಕರ್ತರನ್ನು ನಿಯಂತ್ರಿಸು ಹರ ಸಾಹಸ ಪಡಬೇಕಾಯಿತು. ಈ ಸಂದರ್ಭದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಬಿಜೆಪಿ ಸರ್ಕಾರದಿಂದ ಬಂದರೆ ಮಾತ್ರ ರಾಮರಾಜ್ಯ ಸಾದ್ಯ, ಇಲ್ಲಿ ಸೇರಿರುವ ಜನಸಾಗರ ಉತ್ತರ ನೀಡಲಿದ್ದು ಮೇ 15 ನನ್ನ ಗೆಲುವಿನ ಅಂತರವನ್ನ ಕ್ಷೇತ್ರದ ಜನ ತೋರಿಸುತ್ತಾರೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ನಂದೀಶ್ ರೆಡ್ಡಿ ಅವರ ದರ್ಮಪತ್ನಿ , ಮುಖಂಡರು ಸಚ್ಚಿದಾನಂದ ಮೂರ್ತಿ, ಅಧ್ಯಕ್ಷ ಚಿದಾನಂದ್, ಪಾಲಿಕೆ ಸದಸ್ಯರು ಬಂಡೆ ರಾಜು, ಮಾಜಿ ಪಾಲಿಕೆ ಸದಸ್ಯರು ವೀರಣ್ಣ, ಕಲ್ಕೆರಿ ಶ್ರೀನಿವಾಸ್, ಗೀತಾ ವಿವೇಕಾನಂದ ಬಾಬು, ಸಿದ್ದಲಿಂಗಯ್ಯ, ಮುಖಂಡರು ದೇವೇಂದ್ರ ಯಾದವ್, ಹಾಜರಿದ್ದರು.

ಬೈಟ್:- ನಂದೀಶ ರೆಡ್ಡಿ, ಬಿಜೆಪಿ ಅಭ್ಯರ್ಥ.

LEAVE A REPLY

Please enter your comment!
Please enter your name here