ನಾಮ ಫಲಕಗಳ ಉದ್ಘಾಟನೆ….

1
357

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ ವತಿಯಿಂದ ದಿಬ್ಬೂರಹಳ್ಳಿಯಲ್ಲಿ ಸಂಘದ ನಾಮ ಫಲಕಗಳ ಉದ್ಘಾಟನೆಯನ್ನು ಮಾಡಿ ಸಂಸ್ಥಾಪಕ ಅಧ್ಯಕ್ಷ ನಾಗೇನಹಳ್ಳಿ ಕೃಷ್ಣಮೂರ್ತಿ ಮಾತನಾಡಿ ಕನ್ನಡ ಭಾಷೆ ಮತ್ತು ಕನ್ನಡ ಅಭಿವೃದ್ಧಿಯನ್ನು ಗಡಿ ಭಾಗಗಳಲ್ಲಿ ಉಳಿಸುವಂತ ಕೆಲಸ ಮಾಡಬೇಕು ಎಂದರು.ಚಿತ್ರನಟ ಸಾಯಿಕುಮಾರ್ ಮತ್ತು ಅಭಿರಾಮ್ ಮಾತನಾಡಿ ಪರ ಭಾಷೆಯ ಜನರ ಮನಸ್ಸಲ್ಲಿ ಸಾಮರಸ್ಯವನ್ನು ಮೂಡಿಸುವ ನಿಟ್ಟಿನಲ್ಲಿ ಕನ್ನಡ ಭಾಷೆಯನ್ನು ಪರ ಭಾಷಿಗರು ಸಹ ಪ್ರೀತಿಸುವಂತೆ ಮಾಡಬೇಕು ಎಂದರು.

ನಗರದಿಂದ ಕನ್ನಡ ಬಾವುಟಗಳನ್ನು ವಿಷೇಶವಾಗಿ ಆಟೋ ಮತ್ತು ಬೈಕ್ ಗಳಿಗೆ ಕಟ್ಟಿಕೊಂಡು ವಾಹನಗಳ ಮೂಲಕ ದಿಬ್ಬೂರಹಳ್ಳಿಗೆ ತೆರಳಿದರು ಕಾರ್ಯಕ್ರಮದಲ್ಲಿ ದಿಬ್ಬೂರಹಳ್ಳಿ ಗ್ರಾಹಕರ ಗ್ರಾಮಾಂತರ ಠಾಣೆ ಪಿಎಸ್ ಐ ವಿಜಯರೆಡ್ಡಿ, ಸುವರ್ಣ ಕರ್ನಾಟಕ ಜನಶಕ್ತಿ ವೇಧಿಕೆ ತಾಲ್ಲೂಕು ಅಧ್ಯಕ್ಷ ಎಂ.ಟಿ ಬೈರಾರೆಡ್ಡಿ ಹಾಗೂ ಹಲವಾರು ರಾಜ್ಯ ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಅಭಿಮಾನಿಗಳು ಭಾಗವಹಿದ್ದರು.

1 COMMENT

LEAVE A REPLY

Please enter your comment!
Please enter your name here